ಉಡುಪಿ – ಉಚ್ಚಿಲ ದಸರಾ : ಕೃತಜ್ಞತಾ ಸಮಾರಂಭ
ಉಚ್ಚಿಲ ದಸರಾ ಯಶಸ್ಸಿನ ಪಾಲಿನಲ್ಲಿ ಸರ್ವರ ಶ್ರಮವಿದೆ : ನಾಡೋಜಾ ಡಾ. ಜಿ ಶಂಕರ್
(Uchila) ಉಚ್ಚಿಲ : ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ಇದರ ಕೃತಜ್ಞತಾ ಸಮಾರಂಭವು ಗುರುವಾರ ಶ್ಯಾಮಿಲಿ ಜಿ ಶಂಕರ್ ತೆರೆದ ಸಭಾಂಗಣದಲ್ಲಿ ಜರಗಿತು.
ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ. ಶಂಕರ್ ಮಾತನಾಡಿ, ಉಡುಪಿ ಉಚ್ಚಿಲ ದಸರಾ ಯಶಸ್ಸಿನ ಪಾಲಿನಲ್ಲಿ ಸರ್ವರ ಶ್ರಮವಿದೆ. ದೇಶ ವಿದೇಶದಲ್ಲೂ ಉಡುಪಿ – ಉಚ್ಚಿಲ ದಸರಾದ ಕಂಪು ಹರಡಿದೆ. ದಸರಾಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉದಯ ಕುಮಾರ್ ಹಟ್ಟಿಯಂಗಡಿ, ಯುವರಾಜ್ ಮಸ್ಕತ್, ವಿನಯ ಕರ್ಕೇರ, ಶಿವಕುಮಾರ್ ಮೆಂಡನ್, ಶೇಖರ್ ಸಾಲ್ಯಾನ್, ಸತೀಶ್ ಕುಂದರ್, ಶಿಲ್ಪಾ ಕುಂದರ್, ಉಷಾ ರಾಣಿ, ಸಂಧ್ಯಾದೀಪ ಸುನಿಲ್, ಸುಗುಣ, ಪದ್ಮಾಕರ್, ಕೇಶವ ಕೋಟ್ಯಾನ್, ಯುವರಾಜ್ ಕಿದಿಯೂರು, ಗಿರೀಶ್ ಕುಮಾರ್, ಶಿಲ್ಪಾ ಗಂಗಾಧರ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಸ್ವಾಗತಿಸಿದರು. ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕೆರೆ ನಿರೂಪಿಸಿದರು. ದ.ಕ.ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ವಂದಿಸಿದರು.

