• Home  
  • ಉಡುಪಿ: ಕಲ್ಸಂಕ ಚರಂಡಿಗೆ ಸುರಕ್ಷತಾ ತಡೆಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಶಾಸಕ ಯಶ್ಪಾಲ್‌ ಸೂಚನೆ (Udupi: MLA Yashpal Suvarna instruct officials to construct safety barrier for Kalsanka drains)
- PROBLEMS

ಉಡುಪಿ: ಕಲ್ಸಂಕ ಚರಂಡಿಗೆ ಸುರಕ್ಷತಾ ತಡೆಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಶಾಸಕ ಯಶ್ಪಾಲ್‌ ಸೂಚನೆ (Udupi: MLA Yashpal Suvarna instruct officials to construct safety barrier for Kalsanka drains)

Share: ಉಡುಪಿ: ಕಲ್ಸಂಕ ಚರಂಡಿಗೆ ಸುರಕ್ಷತಾ ತಡೆಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಶಾಸಕ ಯಶ್ಪಾಲ್‌ ಸೂಚನೆ (Udupi) ಉಡುಪಿ: ಕಲ್ಸಂಕದಿಂದ ಕೃಷ್ಣ ಮಠ ಪಾರ್ಕಿಂಗ್ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳ ತೋಡಿಗೆ ತಕ್ಷಣ ಸುರಕ್ಷತಾ ತಡೆಗೋಡೆ ನಿರ್ಮಿಸಲು ಕ್ರಮ ವಹಿಸುವಂತೆ ನಗರಸಭೆ  ಅಧಿಕಾರಿಗಳಿಗೆ ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಸೂಚನೆ ನೀಡಿದರು.  ಕೆಲವು ದಿನಗಳ ಹಿಂದೆ ರಿಕ್ಷಾ ಚರಂಡಿಗೆ ಬಿದ್ದ ಘಟನೆಯ  ಹಿನ್ನೆಲೆಯಲ್ಲಿ ದಿನಂಪ್ರತಿ ಸಾವಿರಾರು ಮಂದಿ ಸಂಚರಿಸುವ ರಸ್ತೆ ಸಂಚಾರದ ಸುರಕ್ಷತೆ ದೃಷ್ಟಿಯಿಂದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ […]

ಉಡುಪಿ: ಕಲ್ಸಂಕ ಚರಂಡಿಗೆ ಸುರಕ್ಷತಾ ತಡೆಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಶಾಸಕ ಯಶ್ಪಾಲ್‌ ಸೂಚನೆ

(Udupi) ಉಡುಪಿ: ಕಲ್ಸಂಕದಿಂದ ಕೃಷ್ಣ ಮಠ ಪಾರ್ಕಿಂಗ್ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳ ತೋಡಿಗೆ ತಕ್ಷಣ ಸುರಕ್ಷತಾ ತಡೆಗೋಡೆ ನಿರ್ಮಿಸಲು ಕ್ರಮ ವಹಿಸುವಂತೆ ನಗರಸಭೆ  ಅಧಿಕಾರಿಗಳಿಗೆ ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಸೂಚನೆ ನೀಡಿದರು.

 ಕೆಲವು ದಿನಗಳ ಹಿಂದೆ ರಿಕ್ಷಾ ಚರಂಡಿಗೆ ಬಿದ್ದ ಘಟನೆಯ  ಹಿನ್ನೆಲೆಯಲ್ಲಿ ದಿನಂಪ್ರತಿ ಸಾವಿರಾರು ಮಂದಿ ಸಂಚರಿಸುವ ರಸ್ತೆ ಸಂಚಾರದ ಸುರಕ್ಷತೆ ದೃಷ್ಟಿಯಿಂದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶಿಥಿಲಗೊಂಡಿರುವ ಚರಂಡಿ ಬದಿಗಳ ಮರು ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಗಿರೀಶ್ ಅಂಚನ್, ಬಾಲಕೃಷ್ಣ ಶೆಟ್ಟಿ, ನಗರಸಭೆ ಎಇಇ ದುರ್ಗಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.