• Home  
  • ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿನ ಶೌರ್ಯ ಸ್ವಯಂ ಸೇವಕರಿಗೆ NDRF ತಂಡದಿಂದ ವಿಶೇಷ ತರಬೇತಿ (Special training by NDRF team for brave volunteers from Udupi, Kaup, Brahmavar taluks)
- social service

ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿನ ಶೌರ್ಯ ಸ್ವಯಂ ಸೇವಕರಿಗೆ NDRF ತಂಡದಿಂದ ವಿಶೇಷ ತರಬೇತಿ (Special training by NDRF team for brave volunteers from Udupi, Kaup, Brahmavar taluks)

Share:  ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿನ ಶೌರ್ಯ ಸ್ವಯಂ ಸೇವಕರಿಗೆ NDRF ತಂಡದಿಂದ ವಿಶೇಷ ತರಬೇತಿ. “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” ಎಂಬಂತೆ ಖಾವಂದರ ಸೇವೆ ಶ್ಲಾಘಿಸಿದ ತಂಡ. (Udupi) ಉಡುಪಿ:  ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆ ಇದರ ಉಡುಪಿ, ಕಾಪು ತಾಲೂಕು, ಬ್ರಹ್ಮಾವರ ತಾಲೂಕು  ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ NDRF 10 ನೇ […]

(Udupi) ಉಡುಪಿ:  ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆ ಇದರ ಉಡುಪಿ, ಕಾಪು ತಾಲೂಕು, ಬ್ರಹ್ಮಾವರ ತಾಲೂಕು  ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ NDRF 10 ನೇ ಬೆಟಾಲಿಯನ್ ವತಿಯಿಂದ ವಿಶೇಷ ತರಬೇತಿ  ಕಾರ್ಯಗಾರವನ್ನು ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣರವರು ಉದ್ಘಾಟಿಸಿದರು.

  ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ನಾಲ್ಕು ದಶಕಗಳ ಸಮಾಜಮುಖಿ ಸೇವೆಯನ್ನು ಯೋಜನೆಯ ಮುಖಾಂತರ ನಡೆಸುತ್ತಿದ್ದಾರೆ. “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” ಎನ್ನುವ ಭಗವದ್ಗೀತೆಯ ಮಾತಿನಂತೆ ಇಂದು ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ 10,000 ಶೌರ್ಯ ಸ್ವಯಂ ಸೇವಕರು ಯಾವುದೇ ಪ್ರತಿಫಲಪೇಕ್ಷೆ ಇಲ್ಲದೆ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಪರಿಪೂರ್ಣವಾದ ಫಲವನ್ನು ಭಗವಂತನು ನೀಡುತ್ತಾನೆ ಎಂದು ಸ್ವಯಂಸೇವಕರನ್ನು ಉದ್ದೇಶಿಸಿ ಪ್ರೇರಣಾತ್ಮಕ ಮಾತುಗಳನ್ನಾಡಿದರು.

 NDRF ಅಧಿಕಾರಿ  ಅಜಯ್ ಕುಮಾರ್ ರವರು ಮಾತನಾಡಿ,  ಧರ್ಮಸ್ಥಳದ ಪೂಜ್ಯರ ಶೌರ್ಯ ವಿಪತ್ತು ಸ್ವಯಂಸೇವಕರು ರಾಜ್ಯದಲ್ಲಿಯೇ ಮತ್ತು ದೇಶದಲ್ಲಿಯೇ ಮಾದರಿ ಸ್ವಯಂಸೇವಕರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

   ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯಾದ ರವಿಯವರು ಮಾತನಾಡಿ, ನಾವು ಜಿಲ್ಲಾಡಳಿತದ ವತಿಯಿಂದ ಯಾವುದೇ ತರಬೇತಿಯನ್ನು ಆಯೋಜಿಸಿದರೂ,  ಪ್ರಪ್ರಥಮವಾಗಿ ಧರ್ಮಸ್ಥಳದ ಶೌರ್ಯ ಸ್ವಯಂ ಸೇವಕರಿಗೆ ಆಧ್ಯತೆಯನ್ನು ನೀಡುತ್ತಿದ್ದೇವೆ. ಏಕೆಂದರೆ ಪ್ರಾಮಾಣಿಕ ಸೇವೆ ನೀಡುವುದರಲ್ಲಿ ಶೌರ್ಯ ಸ್ವಯಂಸೇವಕರು ಮೊದಲಿಗರು ಎಂದರು.

  ಆಪ್ತಮಿತ್ರ ಮಾಸ್ಟರ್ ತರಬೇತುದಾರರಾದ ರೋಹನ್ ಎಸ್ ಸುವರ್ಣ ರವರು ನೀರಿನಲ್ಲಿ ವಿಪತ್ತುಗಳು ಸಂಭವಿಸಿದಾಗ ರಕ್ಷಣಾ ಕಾರ್ಯ ಹೇಗಿರಬೇಕೆಂದು ಮಾಹಿತಿ ನೀಡಿದರು.

   ಅಜೇಯ್ ಕುಮಾರ್ ಹಾಗೂ ಮುನಿ ಕೃಷ್ಣರವರ ತಂಡದಿಂದ ಶೌರ್ಯ ಸ್ವಯಂ ಸೇವಕರಿಗೆ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮ, ಪ್ರಥಮ ಚಿಕಿತ್ಸೆ, ಅವಘಡಗಳು ಮತ್ತು ರಕ್ಷಣಾ ಸಂದರ್ಭದಲ್ಲಿ ಪಾಲಿಸಬೇಕಾದ ಸರಿಯಾದ ಕ್ರಮಗಳ ಕುರಿತು ಸವಿವರವಾದ ಪ್ರಾತ್ಯಕ್ಷಿತೆ ಮೂಲಕ ತರಬೇತಿಯನ್ನು ನೀಡಿದರು.

   ಈ ಸಂದರ್ಭ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ಶೌರ್ಯ ಕಾರ್ಯಕ್ರಮದ ಯೋಜನಾಧಿಕಾರಿ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

   ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿನ 130 ಸ್ವಯಂಸೇವಕರು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

  ಶೌರ್ಯ ಸ್ವಯಂ ಸೇವಕರಾದ ಶ್ರೀಮತಿ ನೇತ್ರಾವತಿಯವರು ಪ್ರಾರ್ಥಿಸಿದರು. ಶೌರ್ಯ ಕಾರ್ಯಕ್ರಮಗಳ ಯೋಜನಾಧಿಕಾರಿಗಳಾದ  ಜೈವಂತ್ ಪಟಗಾರ ಸ್ವಾಗತಿಸಿದರು. ಜನಜಾಗೃತಿ ಮೇಲ್ವಿಚಾರಕರಾದ ನಿತೇಶ್ ಕೆ ವಂದಿಸಿದರು. ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯರವರು ನಿರ್ವಹಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.