(Udupi)ಉಡುಪಿ: ಉಡುಪಿಯ ಕಿದಿಯೂರು ನಾಗಮಂಡಲ ಉತ್ಸವ ಹಿನ್ನೆಲೆಯಲ್ಲಿ ಪವಿತ್ರ ಗಂಗಾರತಿ ನೆರವೇರಿತು.
ಕಿದಿಯೂರು ನಾಗನ ಗುಡಿ ಸಮ್ಮುಖದಲ್ಲಿ ವಾರಣಾಸಿಯಿಂದ ಬಂದ ಅರ್ಚಕರು ಶಾಸ್ತ್ರೋತ್ರವಾಗಿ ಆರತಿಯನ್ನು ಬೆಳಗಿದರು.
ಆರಂಭದಲ್ಲಿ ನಾಗದೇವರಿಗೆ ವಿಶೇಷ ಧೂಪಸೇವೆ ನಡೆಸಿ, ಆನಂತರ ಗಂಗೆಯ ತಟದಲ್ಲಿ ನಡೆಯುವ ಮಾದರಿಯ ಆರತಿಯನ್ನು ನಾಗದೇವರ ಸನ್ನಿಧಾನದ ಮುಂಭಾಗದಲ್ಲಿ ಬೆಳಗಲಾಯ್ತು.
ನಾಗನ ಗುಡಿ ಸಮೀಪದಲ್ಲಿ ವಿಶೇಷವಾಗಿ ರಚಿಸಲಾದ ವಿವಿಧ ವೇದಿಕೆಗಳಲ್ಲಿ ವಾರಾಣಾಸಿಯಿಂದ ಆಗಮಿಸಿರುವ ಅರ್ಚಕ ವೃಂದದವರು ಆರತಿ ಬೆಳಗಲು ವ್ಯವಸ್ಥೆ ಮಾಡಲಾಗಿತ್ತು.
ಆಕರ್ಷಕ ಸಾಮೂಹಿಕ ಗಂಗಾರತಿಯನ್ನು ಸಾವಿರಾರು ಜನ ಕಣ್ತುಂಬಿಕೊಂಡರು.
ಜನವರಿ 26 ಕ್ಕೆ ವಿದ್ವಾಂಸ ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ.
ಭುವನೇಂದ್ರ ಕಿದಿಯೂರು ಕುಟುಂಬ ಸಂಪೂರ್ಣ ಸೇವೆ ಮಾಡಿಸುತ್ತಿದೆ. ಸ್ವಾಗತ ಸಮಿತಿ, ಸಾರ್ವಜನಿಕರ ಸಹಕಾರದಿಂದ ಜನವರಿ 31 ರಂದು ಅಷ್ಟಪವಿತ್ರ ನಾಗಮಂಡಲ ನೆರವೇರಲಿದೆ. ಸಾರ್ವಜನಿಕ ಅನ್ನಪ್ರಸಾದ ಸಂತರ್ಪಣೆ ನಡೆಯಲಿದೆ.

