• Home  
  • ಉಡುಪಿ : ರಾಜಾಂಗಣದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್​ರವರ  ವಿಸ್ಮಯ ಜಾದೂ ಪ್ರದರ್ಶನ (Udupi: Amazing Magic show by magician Kudroli Ganesh)
- ಕರಾವಳಿ

ಉಡುಪಿ : ರಾಜಾಂಗಣದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್​ರವರ  ವಿಸ್ಮಯ ಜಾದೂ ಪ್ರದರ್ಶನ (Udupi: Amazing Magic show by magician Kudroli Ganesh)

Share: ಉಡುಪಿ : ರಾಜಾಂಗಣದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್​ರವರ  ವಿಸ್ಮಯ ಜಾದೂ ಪ್ರದರ್ಶನ (Udupi) ಉಡುಪಿ: ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವದ ಸಾಂಸ್ಕ್ರತಿಕ ಸಪ್ತೋತ್ಸವದ ಸಮಾರೋಪದಲ್ಲಿ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಫೈನಲಿಸ್ಟ್, ಸಚಿವರನ್ನೇ ಮಾಯ ಮಾಡಿದ ಖ್ಯಾತಿಯ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಹಾಗೂ ಬಳಗ ದವರಿಂದ ವಿಸ್ಮಯ ಜಾದೂ ಪ್ರದರ್ಶನಗೊಂಡಿತು.  ಶ್ರೀ ಕ್ರಷ್ಣ ಮಠದ ರಾಜಾಂಗಣದಲ್ಲಿ ಜಾದೂ, ಜಾನಪದ, ರಂಗಭೂಮಿ ಹಾಗೂ ಸಂಗೀತಗಳ ಸಮ್ಮಿಲನದ ವಿಸ್ಮಯ ಜಾದೂ ವಿನೂತನ ಜಾದೂ ತಂತ್ರಗಳೊಂದಿಗೆ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದ […]

ಉಡುಪಿ : ರಾಜಾಂಗಣದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್​ರವರ  ವಿಸ್ಮಯ ಜಾದೂ ಪ್ರದರ್ಶನ

(Udupi) ಉಡುಪಿ: ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವದ ಸಾಂಸ್ಕ್ರತಿಕ ಸಪ್ತೋತ್ಸವದ ಸಮಾರೋಪದಲ್ಲಿ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಫೈನಲಿಸ್ಟ್, ಸಚಿವರನ್ನೇ ಮಾಯ ಮಾಡಿದ ಖ್ಯಾತಿಯ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಹಾಗೂ ಬಳಗ ದವರಿಂದ ವಿಸ್ಮಯ ಜಾದೂ ಪ್ರದರ್ಶನಗೊಂಡಿತು.

 ಶ್ರೀ ಕ್ರಷ್ಣ ಮಠದ ರಾಜಾಂಗಣದಲ್ಲಿ ಜಾದೂ, ಜಾನಪದ, ರಂಗಭೂಮಿ ಹಾಗೂ ಸಂಗೀತಗಳ ಸಮ್ಮಿಲನದ ವಿಸ್ಮಯ ಜಾದೂ ವಿನೂತನ ಜಾದೂ ತಂತ್ರಗಳೊಂದಿಗೆ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದ ಕುದ್ರೋಳಿಯವರು ನಿರಂತರ ಮೂರು ಗಂಟೆ ರಾಜಾಂಗಣದಲ್ಲಿ ಮಾಯಾಲೋಕವನ್ನೇ ನಿರ್ಮಿಸಿದ್ದರು. 2000ಕ್ಕೂ ಮಿಕ್ಕಿ ಸೇರಿದ್ದ ಪೇಕ್ಷಕರು ಗಣೇಶ್ ರವರ ಚಾಕಚಕ್ಯತೆ ಯನು ಮನಸಾರೆ ಕೊಂಡಾಡಿದರು.

​ ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಮೂಲಕ ವಿಶ್ವದಾದ್ಯಂತ ಪ್ರಸಿದ್ದಿಯಾದ ತುಳುನಾಡಿನ ಭೂತಾರಾಧನೆಯ ಅಂಶವನ್ನು ಒಳಗೊಂಡ ಯಕ್ಷಿಣಿ, ಸುಪ್ತ ಮನಸ್ಸಿನ ಚಮತ್ಕಾರ, ನವರಸಪೂರ್ಣ ಜಾದೂ, ಸಮಕಾಲೀನ ಮತ್ತು ಆಧುನಿಕ ಮ್ಯಾಜಿಕ್ ಇಲ್ಯೂಷನ್ ಸಂಗಮದ ಕಾರ್ಯಕ್ರಮ ಪುತ್ತಿಗೆ ಪರ್ಯಾಯ ಕ್ಕಾಗಿ ವಿಶೇಷವಾಗಿ ಸಿದ್ದಪಡಿಸಲಾಗಿತ್ತು. ಪರ್ಯಾಯ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೂಡಾ ತಮ್ಮ ಶಿಷ್ಯನೊಂದಿಗೆ ಕುದ್ರೋಳಿಯವರು ನಿರ್ಮಿಸಿದ ಮಾಯಾ ಜಗತ್ತನ್ನು ನೋಡಿ ಆನಂದ ಪಟ್ಟರು.

 ಸ್ವತಃ ವೇದಿಕೆಗೆ ತೆರಳಿ  ಗಣೇಶ್ ಕುದ್ರೋಳಿಯವರ ಸಹಕಾರದಿಂದ ಜಾದೂ ಮಾಡಿ, ಕನ್ನಡಿಯ ಒಳಗೆ ರಾಮಲಲ್ಲನ ಚಿತ್ರವನ್ನು​ ಶೂನ್ಯದಿಂದ   ಸೃಷ್ಟಿಸಿದರು.

ನೆರೆದಿದ್ದ ಜನಸ್ತೋಮ ಮುಗಿಲು ಮುಟ್ಟಿದ ಜೈಶ್ರೀರಾಮ್ ಘೋಷಣೆ. ಬಳಿಕ ಸ್ವಾಮೀಜಿಗಳು ಮಾತನಾಡಿ, ಗಣೇಶ್ ರವರ ಇಂದ್ರಜಾಲ ನೋಡುಗರ ಮನಸಿಗೆ ಸಂತಸ ನೀಡಿದೆ. ವಿದೇಶದಲ್ಲಿರುವ ನಮ್ಮ 14ಶಾಖಾ  ಮಠಗಳಲ್ಲಿ ಜಾದೂ ಕಾರ್ಯಕ್ರಮವನ್ನು ನೀಡಲು ಆಮಂತ್ರಣ ನೀಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.