• Home  
  • ಉಡುಪಿ: ಕೇಂದ್ರ ಸಚಿವೆ ಶೋಭಾಗೆ ಟಿಕೇಟು ನೀಡದಂತೆ  ಬೀದಿಗಿಳಿದ ಬಿಜೆಪಿ ಕಾರ್ಯಕರ್ತರು (Udupi: BJP Workers took to the streets not give tickets to Union Minister Shobha)
- ರಾಜಕೀಯ

ಉಡುಪಿ: ಕೇಂದ್ರ ಸಚಿವೆ ಶೋಭಾಗೆ ಟಿಕೇಟು ನೀಡದಂತೆ  ಬೀದಿಗಿಳಿದ ಬಿಜೆಪಿ ಕಾರ್ಯಕರ್ತರು (Udupi: BJP Workers took to the streets not give tickets to Union Minister Shobha)

Share: ಉಡುಪಿ: ಕೇಂದ್ರ ಸಚಿವೆ ಶೋಭಾಗೆ ಟಿಕೇಟು ನೀಡದಂತೆ  ಬೀದಿಗಿಳಿದ ಬಿಜೆಪಿ ಕಾರ್ಯಕರ್ತರು (Udupi) ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Union Minister Shobha Karandlaje) ಅವರಿಗೆ ಟಿಕೆಟ್ ನೀಡುವುದಕ್ಕೆ ಬಿಜೆಪಿ ಕಾರ್ಯಕರ್ತರಿಂದಲೇ ಉಡುಪಿಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.   ದೊಡ್ಡ ಸಂಖ್ಯೆಯಲ್ಲಿ ಮೀನುಗಾರ ಸಮುದಾಯದ ಕಾರ್ಯಕರ್ತರು ಶೋಭಾ ವಿರುದ್ಧ ಬಹಿರಂಗವಾಗಿಯೇ ಬೃಹತ್ ಶಕ್ತಿ ಪ್ರದರ್ಶನ ನಡೆಸಿದ್ದಾರೆ.     ಹೌದು, ಕೇಂದ್ರ ಸಚಿವೆ ಶೋಭಾ ವಿರುದ್ಧ ಸ್ವಪಕ್ಷೀಯರ ಆಕ್ರೋಶ ಮುಗಿಲು ಮುಟ್ಟಿದೆ. […]

ಉಡುಪಿ: ಕೇಂದ್ರ ಸಚಿವೆ ಶೋಭಾಗೆ ಟಿಕೇಟು ನೀಡದಂತೆ  ಬೀದಿಗಿಳಿದ ಬಿಜೆಪಿ ಕಾರ್ಯಕರ್ತರು

(Udupi) ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Union Minister Shobha Karandlaje) ಅವರಿಗೆ ಟಿಕೆಟ್ ನೀಡುವುದಕ್ಕೆ ಬಿಜೆಪಿ ಕಾರ್ಯಕರ್ತರಿಂದಲೇ ಉಡುಪಿಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

  ದೊಡ್ಡ ಸಂಖ್ಯೆಯಲ್ಲಿ ಮೀನುಗಾರ ಸಮುದಾಯದ ಕಾರ್ಯಕರ್ತರು ಶೋಭಾ ವಿರುದ್ಧ ಬಹಿರಂಗವಾಗಿಯೇ ಬೃಹತ್ ಶಕ್ತಿ ಪ್ರದರ್ಶನ ನಡೆಸಿದ್ದಾರೆ.  

  ಹೌದು, ಕೇಂದ್ರ ಸಚಿವೆ ಶೋಭಾ ವಿರುದ್ಧ ಸ್ವಪಕ್ಷೀಯರ ಆಕ್ರೋಶ ಮುಗಿಲು ಮುಟ್ಟಿದೆ. ಮಲ್ಪೆಯಿಂದ ಉಡುಪಿಯ ಬಿಜೆಪಿ ಕಚೇರಿ ತನಕ ಬೈಕ್ ರ್ಯಾಲಿ ಮೂಲಕ ರ್ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಕಚೇರಿ ಮುಂದೆ ಜಮಾಯಿಸಿದರು. ಬಳಿಕ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ ಅವರಿಗೆ ಮನವಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಅವರಿಗೆ ಇನ್ನೊಂದು ಭಾರಿ ಅವಕಾಶ ನೀಡಬಾರದು. ಈಗಾಗಲೇ ಎರಡು ಅವಧಿಗೆ ಈ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಈ ಬಾರಿ ಕೂಡ ಮತ್ತೊಮ್ಮೆ ತಮಗೇ ಟಿಕೆಟ್ ಎಂದು ಓಡಾಡಿಕೊಂಡಿದ್ದಾರೆ. ಮೋದಿ ಹೆಸರಿನಲ್ಲಿ ಅವರು ಮತ್ತೊಮ್ಮೆ ಗೆಲ್ಲುವುದು ಬೇಡ. ಅವರ ಬದಲು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಅವರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

 ಕೆಲವು ದಿನಗಳ ಹಿಂದೆ ಮೀನುಗಾರ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದಿದ್ದರು. ಮಾತ್ರವಲ್ಲ, ಮೀನುಗಾರ ಮುಖಂಡ ಪ್ರಮೋದ್ ಮಧ್ವರಾಜ್ ಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದರು. ಕಳೆದ ವಾರ  ಚಿಕ್ಕಮಗಳೂರಿನಲ್ಲಿ ಗೋ ಬ್ಯಾಕ್ ಶೋಭಾ ಎಂಬ ಅಭಿಯಾನವನ್ನು ಕೂಡ ಬಿಜೆಪಿ ಕಾರ್ಯಕರ್ತರೇ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

 ಒಟ್ಟಾರೆ ದಿನೇದಿನೇ ಕರಂದ್ಲಾಜೆ ವಿರುದ್ಧದ ಅಸಮಾಧಾನ ಭುಗಿಲೇಳುತ್ತಲೇ ಇದ್ದು, ಬಿಜೆಪಿ ವರಿಷ್ಠರಿಗೆ ಈ ಕ್ಷೇತ್ರ ದ ಆಯ್ಕೆ ಕಗ್ಗಂಟಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.