Tag: shobha karandlaje

ರಾಜಕೀಯ ವಿಡಿಯೋ

  ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಪರ ವಾಹನ ಜಾಥಾ, ಕಾಪು ಪೇಟೆಯಲ್ಲಿ ಸಾರ್ವಜನಿಕ ಸಭೆ (Vehicle jatha For Congress Candidate Jayaprakash Hegde, Public meeting in Kaup)

 ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಪರ ವಾಹನ ಜಾಥಾ, ಕಾಪು ಪೇಟೆಯಲ್ಲಿ ಸಾರ್ವಜನಿಕ ಸಭೆ (Kaup) ಕಾಪು: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ (Congress Candidate Jayaprakash Hegde)ಪರ ಮಂಗಳವಾರ ಪಡುಬಿದ್ರಿಯಿಂದ ಕಾಪು ವರೆಗೆ ವಾಹನ ಜಾಥಾ ಹಾಗೂ ಕಾಪು ಪೇಟೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಾರ್ವಜನಿಕ ಸಭೆಯ ನೇತೃತ್ವವನ್ನು ರಾಜ್ಯ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್‌ ಸೊರಕೆ (EX Minister Vinaykumar Sorake) ವಹಿಸಿದ್ದರು. […]

ರಾಜಕೀಯ

ಉಡುಪಿ: ಕೇಂದ್ರ ಸಚಿವೆ ಶೋಭಾಗೆ ಟಿಕೇಟು ನೀಡದಂತೆ  ಬೀದಿಗಿಳಿದ ಬಿಜೆಪಿ ಕಾರ್ಯಕರ್ತರು (Udupi: BJP Workers took to the streets not give tickets to Union Minister Shobha)

ಉಡುಪಿ: ಕೇಂದ್ರ ಸಚಿವೆ ಶೋಭಾಗೆ ಟಿಕೇಟು ನೀಡದಂತೆ  ಬೀದಿಗಿಳಿದ ಬಿಜೆಪಿ ಕಾರ್ಯಕರ್ತರು (Udupi) ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Union Minister Shobha Karandlaje) ಅವರಿಗೆ ಟಿಕೆಟ್ ನೀಡುವುದಕ್ಕೆ ಬಿಜೆಪಿ ಕಾರ್ಯಕರ್ತರಿಂದಲೇ ಉಡುಪಿಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.   ದೊಡ್ಡ ಸಂಖ್ಯೆಯಲ್ಲಿ ಮೀನುಗಾರ ಸಮುದಾಯದ ಕಾರ್ಯಕರ್ತರು ಶೋಭಾ ವಿರುದ್ಧ ಬಹಿರಂಗವಾಗಿಯೇ ಬೃಹತ್ ಶಕ್ತಿ ಪ್ರದರ್ಶನ ನಡೆಸಿದ್ದಾರೆ.     ಹೌದು, ಕೇಂದ್ರ ಸಚಿವೆ ಶೋಭಾ ವಿರುದ್ಧ ಸ್ವಪಕ್ಷೀಯರ ಆಕ್ರೋಶ ಮುಗಿಲು ಮುಟ್ಟಿದೆ. ಮಲ್ಪೆಯಿಂದ […]

ರಾಜಕೀಯ

ಮಧ್ಯಾಹ್ನದ ಶಾಲಾ ಊಟದಲ್ಲಿ ಮತ್ತು ಇಂದಿರಾ ಕ್ಯಾಂಟೀನ್‌ನಲ್ಲಿ ಸಿರಿಧಾನ್ಯ ಬಳಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ  (Use of  millets in mid-day school meals & Indira canteen : Chief Minister Siddaramaiah  announces)

 ಬೆಂಗಳೂರು ಜ 5 : ಇಂದಿರಾ ಕ್ಯಾಂಟೀನ್ ಮತ್ತು ಮಧ್ಯಾಹ್ನದ ಶಾಲಾ ಊಟದಲ್ಲಿ ಸಿರಿಧಾನ್ಯ ಬಳಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಮಹತ್ವದ ಘೋಷಣೆ ಮಾಡಿದರು.  ಕೃಷಿ ಇಲಾಖೆ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2024 ಮತ್ತು ಸಿರಿಧಾನ್ಯ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು.  ನಮ್ಮ ರಾಜ್ಯದ ಜನರು ಮತ್ತು ಶಾಲಾ ಮಕ್ಕಳು ಇನ್ನಷ್ಟು ಸದೃಡವಾಗಿ , ಆರೋಗ್ಯವಂತರಾಗಲು ಇಂದಿರಾ ಕ್ಯಾಂಟೀನ್ ಮತ್ತು ಶಾಲಾ […]

ಪ್ರಯಾಣ ರಾಜಕೀಯ

ಉಡುಪಿ: ವಂದೇ ಭಾರತ್ ರೈಲಿಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ (Vande Bharath train gets Grand welcome in Udupi)

ಉಡುಪಿ: ವಂದೇ ಭಾರತ್ ರೈಲಿಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ (UDUPI) ಉಡುಪಿ: ಇವತ್ತು ಪ್ರಧಾನಿ ಮೋದಿ ಅವರು ಭಾರತದ ಭಾರತದಾದ್ಯಂತ  6 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ.  ಈ ಪೈಕಿ ಮಂಗಳೂರು ಮಡಗಾಂವ್ ರೈಲು ಕೂಡ ಸೇರಿದೆ. ಮಂಗಳೂರು ಮಡಗಾಂವ್ ರೈಲು ಇವತ್ತು ಪ್ರಾಯೋಗಿಕ ಸಂಚಾರ ಆರಂಭಿಸಿತು. ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರ ಜನಪ್ರತಿನಿಧಿಗಳು ವಂದೇ ಭಾರತ್ ರೈಲಿಗೆ ಸ್ವಾಗತ ಕೋರಿ ಹಸಿರು ನಿಶಾನೆ ತೋರಿಸಿದರು.  ಈ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗಿನಿಂದಲೇ ಉಡುಪಿಯ […]

Uncategorised ವಿಡಿಯೋ

ಲೀಲಾವತಿ ಓರ್ವ ಶ್ರೇಷ್ಠ ಕಲಾವಿದೆ. ಅವರ ಅಗಲಿಕೆ ತುಂಬಲಾರದ ನಷ್ಟ: ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Leelavathi The Great Artist: central minister Shobh Karandlaje)

ಲೀಲಾವತಿ ಓರ್ವ ಶ್ರೇಷ್ಠ ಕಲಾವಿದೆ. ಅವರ ಅಗಲಿಕೆ ತುಂಬಲಾರದ ನಷ್ಟ: ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Udupi) ಉಡುಪಿ: ಸ್ಯಾಂಡಲ್ ವುಡ್ ನ ಶ್ರೇಷ್ಠ ಕಲಾವಿದೆಯಾದ ಲೀಲಾವತಿ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.  ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಲೀಲಾವತಿಯವರು ನಮ್ಮ ಊರಿನವರು. ಸಿಕ್ಕಿದಾಗಲೆಲ್ಲ ತುಳುವಿನಲ್ಲೇ ಮಾತುಕತೆ ಮಾಡುತ್ತಿದ್ದೆವು. ಇಲ್ಲಿಂದ ಬೆಂಗಳೂರಿಗೆ ಹೋಗಿ ನಟಿಯಾದವರು. ನಟನೆ ಮತ್ತು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ […]

ರಾಜಕೀಯ ವಿಡಿಯೋ

ರಾ.ಹೆ. ೬೬ರ ಕಟಪಾಡಿ ಜಂಕ್ಷನ್ ಪ್ರದೇಶಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ, ಪರಿಶೀಲನೆ

ರಾ.ಹೆ. ೬೬ರ ಕಟಪಾಡಿ ಜಂಕ್ಷನ್ ಪ್ರದೇಶಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ, ಪರಿಶೀಲನೆ  ಉಡುಪಿ\ ಕಟಪಾಡಿ, ಸೆ.೨೬: ರಾ.ಹೆ.೬೬ರ ಕಟಪಾಡಿ ಜಂಕ್ಷನ್ ಪ್ರದೇಶದಲ್ಲಿ ಓವರ್ ಬ್ರಿಡ್ಜ್ ಬೇಡಿಕೆ, ವಾಹನ ದಟ್ಟಣೆಯಿಂದ ಜನರಿಗೆ ರಾಷ್ಟ್ರೀಯ ಹೆದ್ದಾರಿ ದಾಟುವಲ್ಲಿ ಸಮಸ್ಯೆ ಇರುವುದರ ಬಗ್ಗೆ  ಗಮನಕ್ಕೆ ತಂದಿದ್ದು, ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಮಂಜೂರಾತಿ ಮಾಡಿರುತ್ತಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಹೇಳಿದರು. ಅವರು […]

ಕರಾವಳಿ ರಾಜಕೀಯ

ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಸಮಾಜದಲ್ಲಿ ಶಕ್ತಿ ಸಂಸ್ಕಾರವನ್ನು ಕೊಡುವ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಸಮಾಜದಲ್ಲಿ ಶಕ್ತಿ ಸಂಸ್ಕಾರವನ್ನು ಕೊಡುವ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ\ ಕಾಪು : ಪರಮಪೂಜ್ಯ ಜಗದ್ಗುರು ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಸಮಾಜದಲ್ಲಿ ಶಕ್ತಿ ಸಂಸ್ಕಾರವನ್ನು ಕೊಡುವ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಆ ಕಾರಣದಿಂದಾಗಿ ನಮ್ಮ ಮಠ ಮಂದಿರಗಳು, ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ಗುರುಗಳು, ನಮ್ಮ ಸಂಸ್ಕಾರದ ಕಾರಣದಿಂದ ಉನ್ನತಿಯನ್ನು ಸಾಸುತ್ತಿರುವ ನಮ್ಮ ದೇಶಕ್ಕೆ ಪ್ರಾಪಂಚಿಕವಾಗಿ ಗೌರವ ಸಲ್ಲುತ್ತಿದೆ. ಹಾಗಾಗಿ […]

ಅಪರಾಧ ವಿಡಿಯೋ

ಚೈತ್ರಾ ಕುಂದಾಪುರಳ ವೈಯಕ್ತಿಕ ಸಂಪರ್ಕ ನನಗೆ ಇಲ್ಲ: ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ಚೈತ್ರಾ ಕುಂದಾಪುರಳ ವೈಯಕ್ತಿಕ ಸಂಪರ್ಕ ನನಗೆ ಇಲ್ಲ: ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ಚೈತ್ರಾ ನನ್ನೊಂದಿಗೆ ಫೋಟೋ ತೆಗೆದಿರಬಹುದು ಆದ್ರೆ ಆಕೆಯ ಸಂಪರ್ಕ ನನಗೆ ಇಲ್ಲ. ಕುಂದಾಪುರ: ಚೈತ್ರ ಕುಂದಾಪುರ ಅರೆಸ್ಟ್ ಆಗಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಚೈತ್ರಾ ಕುಂದಾಪುರ ಅವರ ವೈಯಕ್ತಿಕ ಸಂಪರ್ಕ ನನಗೆ ಇರಲಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ. ಚೈತ್ರಾ ಕುಂದಾಪುರ ಪ್ರಕರಣದ ಕುರಿತು ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನನಗೆ ಅವರ ವೈಯಕ್ತಿಕ ಪರಿಚಯ ಇರಲಿಲ್ಲ, […]

ರಾಜಕೀಯ

ಪಕ್ಷ ಬಿಟ್ಟು ಹೋದವರು ವಾಪಾಸು ಬನ್ನಿ ಆಹ್ವಾನಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಪಕ್ಷ ಬಿಟ್ಟು ಹೋದವರು ವಾಪಾಸು ಬನ್ನಿ ಆಹ್ವಾನಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರು: ಬಿಜೆಪಿ ಪಕ್ಷ ಬಿಟ್ಟವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷವನ್ನು ಬಲಿಷ್ಠಗೊಳಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ. ದೇಶಕ್ಕೆ ಮೋದಿ ಬೇಕಾಗಿದೆ. ವಿಶ್ವಕ್ಕೆ ಮೋದಿ ಬೇಕಾಗಿದೆ. ವಿಶ್ವದ ಹಲವು ದೇಶ ಭಾರತ, ಮೋದಿಯನ್ನ ನೋಡ್ತಿವೆ, ಭಾರತವನ್ನು ಮತ್ತಷ್ಟು ಗಟ್ಟಿ ಮಾಡಲು ಎಲ್ಲರ ಸಹಕಾರ ಬೇಕು ಎಂದು ಚಿಕ್ಕಮಗಳೂರಿನಲ್ಲಿ ಶೋಭಾ […]

ಕರಾವಳಿ ರಾಜಕೀಯ

ದೇಶವನ್ನು 60 ವರ್ಷಗಳ ಕಾಲ ಲೂಟಿ ಮಾಡಿದವರು ಮತ್ತೆ ಇಂಡಿಯಾ ಹೆಸರಿನೊಂದಿಗೆ ಒಂದಾಗಿದ್ದಾರೆ – ಉಡುಪಿಯಲ್ಲಿ ಶೋಭಾ ಕರಂದ್ಲಾಜೆ

ದೇಶವನ್ನು 60 ವರ್ಷಗಳ ಕಾಲ ಲೂಟಿ ಮಾಡಿದವರು ಮತ್ತೆ ಇಂಡಿಯಾ ಹೆಸರಿನೊಂದಿಗೆ ಒಂದಾಗಿದ್ದಾರೆ – ಶೋಭಾ ಕರಂದ್ಲಾಜೆ ಉಡುಪಿ: ದೇಶವನ್ನು ಕಳೆದ 60 ವರ್ಷಗಳ ಕಾಲ ಲೂಟಿ ಮಾಡಿದವರು ಇಂದು ಮತ್ತೆ ಒಂದಾಗಿದ್ದಾರೆ. ತಮ್ಮ ಒಕ್ಕೂಟಕ್ಕೆ ಇಂಡಿಯಾ ಎಂಬ ಹೆಸರು ಇಟ್ಟುಕೊಂಡಿದ್ದಾರೆ. ಬ್ರಿಟಿಷ್ ಲೂಟಿಕೋರರು ಉಪಯೋಗ ಮಾಡಿದ ಹೆಸರು ಇಟ್ಟಿದ್ದಾರೆ. ಬ್ರಿಟಿಷರಂತೆ ಈಗ ಹೊಸ ಈಸ್ಟ್ ಇಂಡಿಯಾ ಕಂಪನಿ ಶುರು ಮಾಡಿದ್ದಾರೆ. ಇದು ಭಾರತ ವರ್ಸಸ್ ಈಸ್ಟ್ ಇಂಡಿಯಾ ಕಂಪನಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ. […]

eMedia Kannada  @2025. All Rights Reserved.