• Home  
  • ಉಡುಪಿ: ಖ್ಯಾತ ಹೊಟೇಲ್ ಉದ್ಯಮಿ, ಹಿರಿಯ ಬಿಜೆಪಿ ಮುಖಂಡ ಬಿ. ಸುಧಾಕರ ಶೆಟ್ಟಿ ನಿಧನ (Udupi: Renowned hotelier, Senior BJP Leader B Sudhakar Shetty passed away)
- ಕರಾವಳಿ

ಉಡುಪಿ: ಖ್ಯಾತ ಹೊಟೇಲ್ ಉದ್ಯಮಿ, ಹಿರಿಯ ಬಿಜೆಪಿ ಮುಖಂಡ ಬಿ. ಸುಧಾಕರ ಶೆಟ್ಟಿ ನಿಧನ (Udupi: Renowned hotelier, Senior BJP Leader B Sudhakar Shetty passed away)

Share: ಉಡುಪಿ: ಖ್ಯಾತ ಹೊಟೇಲ್ ಉದ್ಯಮಿ, ಹಿರಿಯ ಬಿಜೆಪಿ ಮುಖಂಡ ಬಿ. ಸುಧಾಕರ ಶೆಟ್ಟಿ ನಿಧನ (Udupi)  ಉಡುಪಿ: ಹಿರಿಯ ಬಿಜೆಪಿ ಮುಖಂಡ ಉಡುಪಿಯ ಖ್ಯಾತ ಹೊಟೇಲ್ ಉದ್ಯಮಿ, ಹಿರಿಯ ಬಿಜೆಪಿ ನಾಯಕ ಬಿ. ಸುಧಾಕರ ಶೆಟ್ಟಿ ಗುರುವಾರ ಬೆಳಿಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹಲವು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದ ಸುಧಾಕರ್ ಶೆಟ್ಟಿ 2009 ರಿಂದ ೨೦12 ರ ವರೆಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿಯ ಸಕ್ರಿಯ ನಾಯಕರಾಗಿದ್ದ ಸುಧಾಕರ ಶೆಟ್ಟಿಯವರು, […]

ಉಡುಪಿ: ಖ್ಯಾತ ಹೊಟೇಲ್ ಉದ್ಯಮಿ, ಹಿರಿಯ ಬಿಜೆಪಿ ಮುಖಂಡ ಬಿ. ಸುಧಾಕರ ಶೆಟ್ಟಿ ನಿಧನ

(Udupi)  ಉಡುಪಿ: ಹಿರಿಯ ಬಿಜೆಪಿ ಮುಖಂಡ ಉಡುಪಿಯ ಖ್ಯಾತ ಹೊಟೇಲ್ ಉದ್ಯಮಿ, ಹಿರಿಯ ಬಿಜೆಪಿ ನಾಯಕ ಬಿ. ಸುಧಾಕರ ಶೆಟ್ಟಿ ಗುರುವಾರ ಬೆಳಿಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಹಲವು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದ ಸುಧಾಕರ್ ಶೆಟ್ಟಿ 2009 ರಿಂದ ೨೦12 ರ ವರೆಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಬಿಜೆಪಿಯ ಸಕ್ರಿಯ ನಾಯಕರಾಗಿದ್ದ ಸುಧಾಕರ ಶೆಟ್ಟಿಯವರು, 1999ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಯು ಆರ್ ಸಭಾಪತಿ ವಿರುದ್ಧ ಪರಾಜಯ ಹೊಂದಿದ್ದರು.

2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಲಭಿಸದ ಹಿನ್ನಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಸಿದ್ದರು.  

 2013ರ ಚುನಾವಣೆಯ ಸಂದರ್ಭ ಹಾಲಿ ಶಾಸಕರಾಗಿದ್ದ ರಘುಪತಿ ಭಟ್ ಅವರ ಸಿಡಿ ಗದ್ದಲದಿಂದ ಸ್ಪರ್ಧಿಸಲು ಹಿಂದೆ ಸರಿದ ಹಿನ್ನಲೆಯಲ್ಲಿ ಸುಧಾಕರ್ ಶೆಟ್ಟಿ ಕಣಕ್ಕಿಳಿದಿದ್ದರು. ಆದರೆ ಪ್ರಮೋದ್ ಮಧ್ವರಾಜ್ ವಿರುದ್ದ ಸೋಲು ಅನುಭವಿಸಿದ್ದರು.

ಉಡುಪಿಯ ಹಿರಿಯ ಮುಖಂಡರೋರ್ವರನ್ನು ಬಿಜೆಪಿ ಕಳೆದುಕೊಂಡಿದೆ.

ಸುಧಾಕರ ಶೆಟ್ಟಿಯವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.