• Home  
  • ಉಡುಪಿ  ಜಿಲ್ಲಾ ನಾಯಕ ಸಂಘದ ನಿಯೋಗ ಸಚಿವ ಸತೀಶ್ ಜಾರಕಿಹೊಳಿ ಭೇಟಿ (Udupi District Nayaka  Association delegation meets Minister Satish Jarkiholi)
- ಸಂಘ, ಸಂಸ್ಥೆಗಳು

ಉಡುಪಿ  ಜಿಲ್ಲಾ ನಾಯಕ ಸಂಘದ ನಿಯೋಗ ಸಚಿವ ಸತೀಶ್ ಜಾರಕಿಹೊಳಿ ಭೇಟಿ (Udupi District Nayaka  Association delegation meets Minister Satish Jarkiholi)

Share: ಉಡುಪಿ  ಜಿಲ್ಲಾ ನಾಯಕ ಸಂಘದ ನಿಯೋಗ ಸಚಿವ ಸತೀಶ್ ಜಾರಕಿಹೊಳಿ ಭೇಟಿ   (Udupi) ಉಡುಪಿ: ರಾಜ್ಯ ಲೋಕೋಪಯೋಗಿ  ಸಚಿವ ಸತೀಶ್ ಜಾರಕಿಹೊಳಿಯವರು ಉಡುಪಿಗೆ ಭೇಟಿ ನೀಡಿದ ಸಂದರ್ಭ ಉಡುಪಿ ಜಿಲ್ಲಾ ಪರಿವಾರ ನಾಯಕ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯಕ ಇವರ ನೇತೃತ್ವದಲ್ಲಿ  ಸಚಿವರನ್ನು ಭೇಟಿಯಾಗಿ ನಾಯಕ ಸಮುದಾಯದ ಸಮಸ್ಯೆಗಳ ಕುರಿತು ಸಚಿವರ ಗಮನಕ್ಕೆ ತರಲಾಯಿತು.  ಉಡುಪಿ ಜಿಲ್ಲೆಗೆ ನಾಯಕ ಸಮುದಾಯಕ್ಕಾಗಿ  ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ವಿನಂತಿಸಲಾಯಿತು. ಸಚಿವ ಸತೀಶ್ ಜಾರಕಿಹೊಳಿಯವರು ಬೇಡಿಕೆಗಳನ್ನು […]

ಉಡುಪಿ  ಜಿಲ್ಲಾ ನಾಯಕ ಸಂಘದ ನಿಯೋಗ ಸಚಿವ ಸತೀಶ್ ಜಾರಕಿಹೊಳಿ ಭೇಟಿ  

(Udupi) ಉಡುಪಿ: ರಾಜ್ಯ ಲೋಕೋಪಯೋಗಿ  ಸಚಿವ ಸತೀಶ್ ಜಾರಕಿಹೊಳಿಯವರು ಉಡುಪಿಗೆ ಭೇಟಿ ನೀಡಿದ ಸಂದರ್ಭ ಉಡುಪಿ ಜಿಲ್ಲಾ ಪರಿವಾರ ನಾಯಕ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯಕ ಇವರ ನೇತೃತ್ವದಲ್ಲಿ  ಸಚಿವರನ್ನು ಭೇಟಿಯಾಗಿ ನಾಯಕ ಸಮುದಾಯದ ಸಮಸ್ಯೆಗಳ ಕುರಿತು ಸಚಿವರ ಗಮನಕ್ಕೆ ತರಲಾಯಿತು.

 ಉಡುಪಿ ಜಿಲ್ಲೆಗೆ ನಾಯಕ ಸಮುದಾಯಕ್ಕಾಗಿ  ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ವಿನಂತಿಸಲಾಯಿತು. ಸಚಿವ ಸತೀಶ್ ಜಾರಕಿಹೊಳಿಯವರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

 ಇದೇ ಸಂದರ್ಭದಲ್ಲಿ ಮಾನ್ಯ ಸಚಿವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

  ಜಿಲ್ಲಾ ಸಂಘದ ನಿಯೋಗವು ಸಚಿವರೊಂದಿಗೆ  ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿಯವರನ್ನು ಭೇಟಿಯಾಗಿ ಸಮಾಜದ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೂ ತರಲಾಯಿತು.

ಸಚಿವರೊಂದಿಗೆ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಸಹಿತ ಕಾಂಗ್ರೆಸ್‌ ಮುಖಂಡರಿದ್ದರು.

 ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಗೌರವ ಅಧ್ಯಕ್ಷ  ಶೇಖರ್ ನಾಯಕ, ಪ್ರಧಾನ ಕಾರ್ಯದರ್ಶಿ ಸತೀಶ್ ನಾಯಕ, ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ನಾಯಕ, ಕಾಪು ತಾಲೂಕು ಉಪಾಧ್ಯಕ್ಷ ಗೋಪಾಲ್ ನಾಯಕ ಕರಂದಾಡಿ, ಸಕ್ರೀಯ ಸದಸ್ಯರಾದ ಸುರೇಶ್ ನಾಯಕ ಕಲ್ಯಾ, ಕಾಪು ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.