ಉಡುಪಿ ಜಿಲ್ಲಾ ಸಖಾಫಿ ಕೌನ್ಸಿಲ್ ಅಧ್ಯಕ್ಷರಾಗಿ ಮುಹಮ್ಮದ್ ಸಖಾಫಿ ಕನ್ನಂಗಾರು ಆಯ್ಕೆ
(Udupi) ಉಡುಪಿ: ಉಡುಪಿ ಜಿಲ್ಲಾ ಸಖಾಫಿ ಕೌನ್ಸಿಲ್ ಅಧ್ಯಕ್ಷರಾಗಿ ಮುಹಮ್ಮದ್ ಸಖಾಫಿ ಕನ್ನಂಗಾರುರವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಕಲ್ಲಿಕೋಟೆ ಮರ್ಕಝ್ ವಿದ್ಯಾನಿಲಯದಲ್ಲಿ ಕಲಿತು ಪದವಿ ಪ್ರಧಾನರಾಗಿ ಬಂದ ಉಡುಪಿ ಜಿಲ್ಲೆಯ ಹಾಗೂ ಜಿಲ್ಲೆಯ ಧಾರ್ಮಿಕ ಕ್ಷೇತ್ರ ದಲ್ಲಿ ಸೇವೆ ಗೈಯುತ್ತಿರುವ ಸಖಾಫಿ ಬಿರುದು ದಾರಿಗಳ ಸಂಗಮವು ಇತ್ತೀಚೆಗೆ ಅಂಬಾಗಿಲು ಕರಾವಳಿ ಟವರ್ಸ್‌ನ ಸುನ್ನೀ ಸೆಂಟರ್ ನಲ್ಲಿ ನೆರವೇರಿತು.
ವೀಕ್ಷಕರಾಗಿ ಹಿರಿಯ ನೇತಾರರಾದ ಡಿ. ಕೆ. ಉಮರ್ ಸಖಾಫಿ ಭಾಗವಹಿಸಿದ್ದರು.
ಸಖಾಫಿಗಳ ಗುರುವರ್ಯರಾದ ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದ್‌ರವರು ಪಾಣೆಮಂಗಳೂರು ಸಾಗರ ಸಭಾಂಗಣದಲ್ಲಿ ಭಾಗವಹಿಸುವ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಸಂಪೂರ್ಣ ಸಹಕರಿಸುವುದಾಗಿ ತೀರ್ಮಾನ ಕೈಗೊಳ್ಳಲಾಯಿತು.
ನಂತರ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಸಖಾಫಿ ಕನ್ನಂಗಾರು, ಪ್ರಧಾನ ಕಾರ್ಯದರ್ಶಿಯಾಗಿ ತಾಜುದ್ದೀನ್ ಸಖಾಫಿ ನಾವುಂದ, ಕೋಶಾಧಿಕಾರಿಯಾಗಿ ವೈಬಿಸಿ ಮುಸ್ತಫಾ ಸಖಾಫಿ ಮೂಳೂರು ರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಅಬ್ದುರಶೀದ್ ಸಖಾಫಿ ಮಜೂರು, ಶಬೀರ್ ಸಖಾಫಿ ಉಚ್ಚಿಲ, ಕಾರ್ಯದರ್ಶಿಗಳಾಗಿ ಮುಸ್ತಫಾ ಸಖಾಫಿ ಚಂದ್ರನಗರ, ಅನ್ಸಾರ್ ಸಖಾಫಿ ಮೂಡುಗೋಪಾಡಿ, ಶಂಸುದ್ದೀನ್ ಸಖಾಫಿ ಕೋಯನಗರ ರವರನ್ನು ಆಯ್ಕೆ ಮಾಡಲಾಯಿತು.

