• Home  
  • ಉಡುಪಿ: ಜೀವನಾನುಭವದಿಂದ ಸಾಹಿತ್ಯದೆಡೆಗೆ ಉಪನ್ಯಾಸ (Udupi: Lecture from life experience to literature)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಉಡುಪಿ: ಜೀವನಾನುಭವದಿಂದ ಸಾಹಿತ್ಯದೆಡೆಗೆ ಉಪನ್ಯಾಸ (Udupi: Lecture from life experience to literature)

Share: ಉಡುಪಿ: ಜೀವನಾನುಭವದಿಂದ ಸಾಹಿತ್ಯದೆಡೆಗೆ ಉಪನ್ಯಾಸ ಹಾವುಗಳ ಬಗ್ಗೆ ತಪ್ಪು ಕಲ್ಪನೆ ದೂರವಾಗಬೇಕಿದೆ: ಗುರುರಾಜ ಸನಿಲ್ (Manipala) ಮಣಿಪಾಲ : ನಮ್ಮ ಸುತ್ತ ಇರುವ  ಹಾವುಗಳ ಬಗ್ಗೆ ತುಂಬಾ ತಪ್ಪುಕಲ್ಪನೆಗಳಿವೆ. ಎಲ್ಲಾ ಹಾವುಗಳು ವಿಷಕಾರಿಗಳು ಅಲ್ಲ. ವಿಷಕಾರಿ ಹಾವುಗಳು ಕೂಡ ನಮ್ಮಿಂದ ನೋವಿಗೊಳಗಾಗದೆ ನಮಗೆ ಹಾನಿ ಮಾಡುವುದಿಲ್ಲ. ಹಾವುಗಳು ಮುಗ್ಧ ಜೀವಿಗಳು ಅವುಗಳನ್ನು ನಾವು ರಕ್ಷಿಸಬೇಕಾಗಿದೆ ಎಂದು ಉರಗ ತಜ್ಞ ಗುರುರಾಜ್ ಸನಿಲ್ ಹೇಳಿದರು. ಅವರು ರವಿವಾರ ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಶಿವಪ್ರೇರಣ ಸಾಹಿತ್ಯ […]

(Manipala) ಮಣಿಪಾಲ : ನಮ್ಮ ಸುತ್ತ ಇರುವ  ಹಾವುಗಳ ಬಗ್ಗೆ ತುಂಬಾ ತಪ್ಪುಕಲ್ಪನೆಗಳಿವೆ. ಎಲ್ಲಾ ಹಾವುಗಳು ವಿಷಕಾರಿಗಳು ಅಲ್ಲ. ವಿಷಕಾರಿ ಹಾವುಗಳು ಕೂಡ ನಮ್ಮಿಂದ ನೋವಿಗೊಳಗಾಗದೆ ನಮಗೆ ಹಾನಿ ಮಾಡುವುದಿಲ್ಲ. ಹಾವುಗಳು ಮುಗ್ಧ ಜೀವಿಗಳು ಅವುಗಳನ್ನು ನಾವು ರಕ್ಷಿಸಬೇಕಾಗಿದೆ ಎಂದು ಉರಗ ತಜ್ಞ ಗುರುರಾಜ್ ಸನಿಲ್ ಹೇಳಿದರು.

ಅವರು ರವಿವಾರ ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಶಿವಪ್ರೇರಣ ಸಾಹಿತ್ಯ ಬಳಗದ ವತಿಯಿಂದ ರತ್ನ ಸಂಜೀವ ಕಲಾ ಮಂಡಲದಲ್ಲಿ ನಡೆದ  ʼಜೀವನಾನುಭವದಿಂದ ಸಾಹಿತ್ಯದೆಡೆಗೆʼ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉಪನ್ಯಾಸ ನೀಡಿದರು.

   ಹಾವುಗಳ ವಿಷಯದಲ್ಲಿ ಬರುವ ಸಂಗತಿಗಳನ್ನು ಯಾವುದೇ ಪ್ರಶ್ನೆ ಮಾಡದೇ ಒಪ್ಪಿಕೊಂಡರೆ ಅದೇ ದೊಡ್ಡ ಮೂಡನಂಬಿಕೆಯಾಗುತ್ತದೆ. ತಮ್ಮ ಅನುಭವವೇ ಕ್ರೂಢಿಕರಣಗೊಂಡು ಲೇಖನಗಳಾಗಿ, ಕಾದಂಬರಿಗಳಾಗಿ ರುಪುಗೊಂಡಿದೆ ಎಂದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪ್ರೇರಣ ಸಾಹಿತ್ಯ ಬಳಗದ ಅಧ್ಯಕ್ಷ ನಿತ್ಯಾನಂದ ಪಡ್ರೆ ವಹಿಸಿದ್ದರು.

   ಈ ಸಂದರ್ಭದಲ್ಲಿ ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ರಮಾನಂದ ಸಾಮಂತ್, ಶಿವಪ್ರೇರಣ ಸಾಹಿತ್ಯ ಬಳಗದ ಕಾರ್ಯದರ್ಶಿ ಚೇತನಾ ಗಣೇಶ್, ಕೋಶಾಧಿಕಾರಿ ಸುಮಾಕಿರಣ್ ಉಪಸ್ಥಿತರಿದ್ದರು.

  ವೈಷ್ಣವಿ ಪ್ರಾರ್ಥಿಸಿದರು. ಮಹೇಶ್ ನಾಯ್ಕ್ ಸ್ವಾಗತಿಸಿದರು. ದೀಪಿಕಾ ಮಣಿಪಾಲ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.