• Home  
  • ಉಡುಪಿ ಪರಿಸರಸ್ನೇಹಿ ವಸ್ತುಗಳ ಮಾರಾಟ ಶಾಪ್ “ವೀಕೆ ಸೊಲ್ಯೂಷನ್ಸ್” ಶುಭಾರಂಭ (Udupi eco-friendly products sales shop “VK Solutions” gets a good start)
- ವ್ಯವಹಾರ

ಉಡುಪಿ ಪರಿಸರಸ್ನೇಹಿ ವಸ್ತುಗಳ ಮಾರಾಟ ಶಾಪ್ “ವೀಕೆ ಸೊಲ್ಯೂಷನ್ಸ್” ಶುಭಾರಂಭ (Udupi eco-friendly products sales shop “VK Solutions” gets a good start)

Share: ಉಡುಪಿ ಪರಿಸರಸ್ನೇಹಿ ವಸ್ತುಗಳ ಮಾರಾಟ ಶಾಪ್ “ವೀಕೆ ಸೊಲ್ಯೂಷನ್ಸ್” ಶುಭಾರಂಭ    ಮಳಿಗೆ ಉದ್ಘಾಟಿಸಿದ ನ್ಯಾಯವಾದಿ ಎಂ. ಶಾಂತಾರಾಮ ಶೆಟ್ಟಿ (Udupi) ಉಡುಪಿ: ಜೋಳದ ಹಿಟ್ಟು ಮತ್ತು ಮರಗೆಣಸನ್ನು ಉಪಯೋಗಿಸಿ ಮಾಡಲ್ಪಟ್ಟ ಪರಿಸರಸ್ನೇಹಿ ಚೀಲ ಸಹಿತ ಇನ್ನಿತರ ವಸ್ತುಗಳ ಸಗಟು ಮತ್ತು ಬಿಡಿ ಮಾರಾಟ ಮಳಿಗೆ ‘ವೀಕೆ ಸೊಲ್ಯೂಷನ್ಸ್’   ಶುಕ್ರವಾರ ನಗರದ ಕಲ್ಪನಾ ಟಾಕೀಸ್ ಎದುರಿನ ಕಂಫರ್ಟ್ ಟವರ್‌ನ ಶಾಪ್ ನಂ. 25 ರಲ್ಲಿ ಶುಭಾರಂಭಗೊಂಡಿತು̤    ನ್ಯಾಯವಾದಿ ಎಂ. ಶಾಂತಾರಾಮ ಶೆಟ್ಟಿಯವರು ಉದ್ಘಾಟಿಸಿ, ದೈನಂದಿನ […]

(Udupi) ಉಡುಪಿ: ಜೋಳದ ಹಿಟ್ಟು ಮತ್ತು ಮರಗೆಣಸನ್ನು ಉಪಯೋಗಿಸಿ ಮಾಡಲ್ಪಟ್ಟ ಪರಿಸರಸ್ನೇಹಿ ಚೀಲ ಸಹಿತ ಇನ್ನಿತರ ವಸ್ತುಗಳ ಸಗಟು ಮತ್ತು ಬಿಡಿ ಮಾರಾಟ ಮಳಿಗೆ ‘ವೀಕೆ ಸೊಲ್ಯೂಷನ್ಸ್’   ಶುಕ್ರವಾರ ನಗರದ ಕಲ್ಪನಾ ಟಾಕೀಸ್ ಎದುರಿನ ಕಂಫರ್ಟ್ ಟವರ್‌ನ ಶಾಪ್ ನಂ. 25 ರಲ್ಲಿ ಶುಭಾರಂಭಗೊಂಡಿತು̤

   ನ್ಯಾಯವಾದಿ ಎಂ. ಶಾಂತಾರಾಮ ಶೆಟ್ಟಿಯವರು ಉದ್ಘಾಟಿಸಿ, ದೈನಂದಿನ ಚಟುವಟಿಕೆಗಳಲ್ಲಿ ಪ್ಲಾಸ್ಟಿಕ್ ಈಗ ಅನಿವಾರ್ಯವಾಗಿದೆ. ಪ್ಲಾಸ್ಟಿಕ್ ಇಲ್ಲದೆ ಜೀವನವಿಲ್ಲ. ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ಬಹಳಷ್ಟು ದುಷ್ಪರಿಣಾಮ ಇದ್ದು, 80ರ ದಶಕದ ಅನಂತರ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಮರುಬಳಕೆಗಾಗಿ ಬಂದ ಪ್ಲಾಸ್ಟಿಕ್ ಅನ್ನು ಈಗ ಬಳಸಿ ಬಿಸಾಡುತ್ತಿದ್ದೇವೆ. ಇದು ಮನುಷ್ಯ, ಪ್ರಾಣಿ, ಪಕ್ಷಿ ಸಹಿತ ಇಡೀ ಪ್ರಕೃತಿಗೆ ಮಾರಕವಾಗುತ್ತಿದೆ. ದೇಶ, ರಾಜ್ಯ, ಸಮಾಜ ಪ್ಲಾಸ್ಟಿಕ್ ಮುಕ್ತವಾಗಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಇನ್ನಷ್ಟು ಸಮಸ್ಯೆಯಾಗಲಿದೆ ಎಂದರು.

  ಉಜ್ವಲ್ ಗ್ರೂಪ್‌ನ ಎಂಡಿ ಅಜೇಯ ಪಿ. ಶೆಟ್ಟಿ ಮಾತನಾಡಿ, ಉದ್ಯಮ ಆರಂಭಿಸುವಾಗ ಶ್ರಮ ತುಂಬಾ ಇರಲಿದೆ. ಮೌಲ್ಯಯುತ ಉತ್ಪನ್ನ ನೀಡುವ ಜತೆಗೆ ಸಂರಕ್ಷಣೆಯ ಸುಸ್ಥಿತರ ಭವಿಷ್ಯದ ಹಿನ್ನೆಲೆಯಲ್ಲಿ ವೀಕೆ ಸೊಲ್ಯೂಷನ್ಸ್ ಕಲ್ಪನೆಗೆ ಶುಭವಾಗಲಿ ಎಂದರು.

 ಸಂಸ್ಥೆಯ ಮಾಲಕರಾದ ವಿದ್ಯಾ ಸರಸ್ವತಿ ಮತ್ತು ಕಾರ್ತಿಕ್ ಶಾಸ್ತ್ರೀ ಸಂಸ್ಥೆಯ ಉದ್ದೇಶವನ್ನು ವಿವರಿಸಿದರು.

  ಬಯೋ ಸ್ನೇಹಿ ಅರ್ಥ್ ಕೇರ್‌ಪ್ರೈ. ಲಿ. ನ ಎಂಡಿ ಮನೋಹರ ಬಿ. ಎಂ., ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಸ್ಥಾಪಕ ಯು. ವಿಶ್ವನಾಥ ಶೆಣೈ, ಕರ್ನಾಟಕ ಬ್ಯಾಂಕ್ ನ ಎಜಿಎಂ ರಮೇಶ್ ವೈದ್ಯ, ನಿವೃತ್ತ ಪ್ರಾಂಶುಪಾಲ ಪ್ರೊ. ದಯಾನಂದ ಶೆಟ್ಟಿ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಪ್ರಮುಖರಾದ ಸಂಜಯ್ ಕಶ್ಯಪ್, ಜಯಲಕ್ಷ್ಮೀ, ಭುವನಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.