ಉಡುಪಿ ಪುತ್ತೂರು ಬ್ರಾಹ್ಮಣ ಮಹಾಸಭಾದ ಆಯೋಜನೆಯಲ್ಲಿ ಧಾರ್ಮಿಕ ಉಪನ್ಯಾಸ
ಡಾ. ವಿದ್ವಾನ್ ರಾಘವೇಂದ್ರ ರಾವ್ ಅವರಿಂದ ಧಾರ್ಮಿಕ ಉಪನ್ಯಾಸ
(Putturu) ಪುತ್ತೂರು– ಉಡುಪಿ : ಪುತ್ತೂರು ಬ್ರಾಹ್ಮಣ ಮಹಾಸಭಾ ಇದರ ತಿಂಗಳ ಕಾರ್ಯಕ್ರಮದ ಅಂಗವಾಗಿ ಪುತ್ತೂರಿನ ಶ್ರೀ ಭಗವತಿ ಸಭಾಗ್ರಹದಲ್ಲಿ “ಯಶಸ್ಸಿಗಾಗಿ ಜೀವನ ಧರ್ಮ” ಎಂಬ ವಿಷಯದ ಬಗ್ಗೆ ಡಾ. ವಿದ್ವಾನ್ ರಾಘವೇಂದ್ರ ರಾವ್ ಅವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ನೆರವೇರಿತು.
ಅವರು ಮಾತನಾಡುತ್ತಾ, ಅಪೂರ್ವವಾದ ಬುದ್ಧಿ ಶಕ್ತಿಯುಳ್ಳ ಮಾನವ ತನ್ನ ಜೀವನದಲ್ಲಿ ಧರ್ಮವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಾಗ ಸಾರ್ಥಕ್ಯವನ್ನು ಕಾಣಬಹುದು. ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ ಎಂದರು.
ಅತಿಥಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಮಹಾಸಭಾದ ವತಿಯಿಂದ ಗೌರವಿಸಲಾಯಿತು.
ಆಪದ್ಬಾಂಧವ ಸೇವಾ ಸಮಿತಿಯ ವತಿಯಿಂದ ಡಾ. ಪ್ರಜ್ಞಾಮಿ ಅನಿಲ್ ಇವರ ನೇತೃತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಅಶಕ್ತರಿಗೆ ವೈದ್ಯಕೀಯ ವೆಚ್ಚಕ್ಕಾಗಿ ರೂ. 50,000 ಸಹಾಯಧನ ಹಸ್ತಾಂತರಿಸಲಾಯಿತು.
ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಚಂದ್ರಶೇಖರ ಅಡಿಗ ಸ್ವಾಗತಿಸಿದರು. ಆಪದ್ಬಾಂಧವ ಸೇವಾ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಜೋಷಿ, ಮಹಾಸಭಾದ ಕೋಶಾಧಿಕಾರಿ ಕೆ.ಜಿ. ರಾಮಚಂದ್ರರಾವ್ ಉಪಸ್ಥಿತರಿದ್ದರು. ಶ್ರೀಲಕ್ಷ್ಮೀ ತೆಂಕಿಲ್ಲಾಯ, ಮಂಜುಳಾ ವಿ. ಪ್ರಸಾದ್, ಶಶಿರೇಖಾ ರಾವ್, ವಿಜಯಕುಮಾರ್, ಚೈತನ್ಯ ಎಂ.ಜಿ. ಸಹಕರಿಸಿದರು. ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ನಿರಂಜನ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

