ಉಡುಪಿ: ಮುಂದಿನ ನಾಲ್ಕು ದಿನ ಆರೆಂಜ್ ಅಲರ್ಟ್, ತಾಲೂಕು ವ್ಯಾಪ್ತಿಯಲ್ಲಿ ಶಾಲೆಗೆ ರಜೆ ನೀಡುವ ಅಧಿಕಾರ ತಹಶಿಲ್ದಾರ್‌ಗೆ
(Udupi) ಉಡುಪಿ: ಮುಂದಿನ ನಾಲ್ಕು ದಿನ ಉಡುಪಿ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ತಾಲೂಕು ವ್ಯಾಪ್ತಿಯಲ್ಲಿ ಮಳೆ ಹೆಚ್ಚಾದರೆ, ಶಾಲೆಗೆ ರಜೆ ನೀಡುವ ಅಧಿಕಾರವನ್ನು ತಹಶಿಲ್ದಾರ್, ಬಿಇಓ ಗಳಿಗೆ ನೀಡಲಾಗಿದೆ.
ಮುಂದಿನ ನಾಲ್ಕು ದಿನಗಳ ಕಾಲ ಪ್ರತಿ ದಿನ 50ರಿಂದ 70 ಮಿ.ಮೀವರೆಗೆ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಸಮುದ್ರ ತೀರದಲ್ಲಿ ಗಾಳಿಯ ವಾತಾವರಣವಿದ್ದು, ಮುನ್ನೆಚ್ಚರಿಕೆ ವಹಿಸಿಕೊಂಡು ಮೀನುಗಾರಿಕೆ ನಡೆಸುವ ಸೂಚಿಸಲಾಗಿದೆ.

