• Home  
  • ಉಡುಪಿ: ಮೊಬೈಲ್ ಕಳೆದುಕೊಂಡಿದ್ದ 18 ಮೊಬೈಲ್ ಗಳನ್ನು ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಿದ ಪೊಲೀಸರು (Udupi: Police find 18 lost mobile phones and return them to their heirs)
- ಅಪರಾಧ

ಉಡುಪಿ: ಮೊಬೈಲ್ ಕಳೆದುಕೊಂಡಿದ್ದ 18 ಮೊಬೈಲ್ ಗಳನ್ನು ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಿದ ಪೊಲೀಸರು (Udupi: Police find 18 lost mobile phones and return them to their heirs)

Share: ಉಡುಪಿ: ಮೊಬೈಲ್ ಕಳೆದುಕೊಂಡಿದ್ದ 18 ಮೊಬೈಲ್ ಗಳನ್ನು ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಿದ ಪೊಲೀಸರು  (Udupi) ಉಡುಪಿ: ಮೊಬೈಲ್ ಕಳೆದುಕೊಂಡಿದ್ದ 18 ಮಂದಿಯ ಮೊಬೈಲ್ ಗಳನ್ನು ಪತ್ತೆ ಮಾಡಿರುವ ಉಡುಪಿ ನಗರ ಪೊಲೀಸರು ಸೋಮವಾರ ಅದನ್ನು ವಾರೀಸುದಾರರಿಗೆ ಹಸ್ತಾಂತರಿಸಿದರು. ಸಾರ್ವಜನಿಕರು ತಾವು ಕಳೆದುಕೊಂಡಿದ್ದ ಮೊಬೈಲ್ ಗಳ ಪತ್ತೆಗಾಗಿ ಸೆಂಟ್ರಲ್ ಇಕ್ವಿಪ್ ಮೆಂಟ್ ರಿಜಿಸ್ಟರ್ (ಸಿಇಐಆರ್) ಮತ್ತು ಕೆಎಸ್ ಪಿ ಇ-ಲಾಸ್ಟ್ ನಲ್ಲಿ ದೂರು ದಾಖಲಿಸಿದ್ದರು. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ ಒಟ್ಟು ರೂ 3,53, […]

ಉಡುಪಿ: ಮೊಬೈಲ್ ಕಳೆದುಕೊಂಡಿದ್ದ 18 ಮೊಬೈಲ್ ಗಳನ್ನು ಪತ್ತೆ ಹಚ್ಚಿ ವಾರೀಸುದಾರರಿಗೆ ನೀಡಿದ ಪೊಲೀಸರು

 (Udupi) ಉಡುಪಿ: ಮೊಬೈಲ್ ಕಳೆದುಕೊಂಡಿದ್ದ 18 ಮಂದಿಯ ಮೊಬೈಲ್ ಗಳನ್ನು ಪತ್ತೆ ಮಾಡಿರುವ ಉಡುಪಿ ನಗರ ಪೊಲೀಸರು ಸೋಮವಾರ ಅದನ್ನು ವಾರೀಸುದಾರರಿಗೆ ಹಸ್ತಾಂತರಿಸಿದರು.

ಸಾರ್ವಜನಿಕರು ತಾವು ಕಳೆದುಕೊಂಡಿದ್ದ ಮೊಬೈಲ್ ಗಳ ಪತ್ತೆಗಾಗಿ ಸೆಂಟ್ರಲ್ ಇಕ್ವಿಪ್ ಮೆಂಟ್ ರಿಜಿಸ್ಟರ್ (ಸಿಇಐಆರ್) ಮತ್ತು ಕೆಎಸ್ ಪಿ ಇ-ಲಾಸ್ಟ್ ನಲ್ಲಿ ದೂರು ದಾಖಲಿಸಿದ್ದರು. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ ಒಟ್ಟು ರೂ 3,53, 400 ಮೌಲ್ಯದ ಒಟ್ಟು 18 ಮೊಬೈಲ್ ಗಳನ್ನು ಪತ್ತೆಮಾಡಿದ್ದು, ಉಡುಪಿ ಡಿವೈಎಸ್ಪಿ ಪ್ರಭು ಡಿಟಿ ವಾರೀಸುದಾರರಿಗೆ ಹಸ್ತಾಂತರಿಸಿದರು.

 ಈ ವೇಳೆ ಮಾತನಾಡಿದ ಅವರು ಮೊಬೈಲ್ ಕಳೆದುಕೊಂಡವರು ಸಿಇಐಆರ್ ಪೋರ್ಟಲ್ ಮೂಲಕ ದೂರು ದಾಖಲಿಸಿದ್ದು, ಅದರ ಮಾಹಿತಿ ಸ್ಥಳೀಯ ಪೊಲೀಸ್ ಠಾಣೆಗೆ ಲಭ್ಯವಾಗುತ್ತದೆ. ಅದರ ದೂರಿನ ಅನ್ವಯ ಪೊಲೀಸರು ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದಾರೆ ಎಂದರು.

ಫೋನ್ ಕಳೆದುಕೊಂಡವರಿಗೆ ಹುಡುಕಿ ವಾಪಸ್ ಫೋನ್ ಕೊಡುವ ಕೆಲಸ ಪೊಲೀಸರು ಮಾಡಿದ್ದಾರೆ. ಕಳೆದುಕೊಂಡ ಫೋನ್ ಸಿಗೋದೆ ಇಲ್ಲ ಅಂತ ಅಂದುಕೊಂಡಿದ್ದ ಜನರಿಗೆ ಪೊಲೀಸರು ಫೋನ್ ಹುಡುಕಿ ಕೊಟ್ಟಿದ್ದಕ್ಕೆ ಹರ್ಷ ವ್ಯಕ್ತ ಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.