ಉಡುಪಿ ರೋಯಲ್ ಬಿರುವೆರ್ ತಂಡಕ್ಕೆ ಬಿರುವೆರ್ ಟ್ರೋಫಿ-2024
(Hejamadi) ಹೆಜಮಾಡಿ: ಹೆಜಮಾಡಿಯ ಬಸ್ತಿಪಡ್ಪು ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ಹೆಜಮಾಡಿ ಬಿರುವೆರ್ ಬ್ರದರ್ಸ್ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಅಹರ್ನಿಶಿ ಕ್ರಿಕೆಟ್ ಪಂದ್ಯಾಟ ಬಿರುವೆರ್ ಪ್ರೀಮಿಯರ್ ಲೀಗ್ ಸೀಸನ್-2 ನಲ್ಲಿ ಬಲಿಷ್ಠ ಉಡುಪಿ ರೋಯಲ್ ಬಿರುವೆರ್ ತಂಡವು ಬಿರುವೆರ್ ಟ್ರೋಫಿ-೨೦೨೪ ಸಹಿತ ನಗದು ರೂ.2, 22, 222 ಪಡೆಯಿತು.
ಫೈನಲ್ ಪಂದ್ಯಾಟದಲ್ಲಿ ಟೂರ್ನಿಯ ಅಜೇಯ ತಂಡವಾದ ಬಡಗುಹಿತ್ಲು ಬಿರುವೆರ್ ಬಪ್ಪನಾಡು ತಂಡವನ್ನು ಅಂತಿಮ ಹಂತದ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿ 7 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಪಡೆಯಿತು.
ಫೈನಲ್‌ನಲ್ಲಿ ಸೋತ ಬಡಗುಹಿತ್ಲು ತಂಡವು ರನ್ನರ್ ಅಪ್ ಪ್ರಶಸ್ತಿ ಸಹಿತ ನಗದು ರೂ.1, 22, 222 ಪಡೆಯಿತು.
ಸೆಮಿಫೈನಲ್‌ನಲ್ಲಿ ಇವೆರಡು ತಂಡಗಳು ಹೆಜಮಾಡಿ ಕೆ.ಜೆ.ಎಫ್. ಬಿರುವೆರ್ ಮತ್ತು ಕುಂಜಾಲು ಫ್ರೆಂಡ್ಸ್ ಬ್ರಹ್ಮಾವರ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಐಪಿಎಲ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ೧೦ ತಂಡಗಳು ಲೀಗ್ ಮಾದರಿಯಲ್ಲಿ ಸೆಣಸಾಡಿದ್ದವು.
ವೈಯಕ್ತಿಕ ಪ್ರಶಸ್ತಿ: ಕೆ.ಜಿ.ಎಫ್. ತಂಡದ ಧನುಷ್ ಎರ್ಮಾಳ್ ಸರ್ವಾಂಗೀಣ ಪ್ರದರ್ಶನಕ್ಕಾಗಿ ಸರಣಿ ಶ್ರೇಷ್ಠ ಸಹಿತ 4 ಗ್ರಾಂ ಚಿನ್ನದ ನಾಣ್ಯ ಬಹುಮಾನ ಪಡೆದರು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ರೋಯಲ್ ಬಿರುವೆರ್ ತಂಡದ ಚೇತನ್ ಪೂಜಾರಿ, ಅತ್ಯುತ್ತಮ ಬೌಲರ್ ಅಗಿ ಬಡಗುಹಿತ್ಲು ತಂಡದ ರಘುನಾಥ್, ಅತ್ಯುತ್ತಮ ದಾಂಡಿಗನಾಗಿ ಕೆ.ಜಿ.ಎಫ್. ತಂಡದ ಪವನ್ ಅಲೆವೂರು ಮತ್ತು ಅತ್ಯುತ್ತಮ ವಿಕೆಟ್‌ಕೀಪರ್ ಆಗಿ ರೋಯಲ್ ಬಿರುವೆರ್ ತಂಡದ ಮಿಥುನ್ ವೈಯಕ್ತಿಕ ಪ್ರಶಸ್ತಿ ಪಡೆದರು.
ಸನ್ಮಾನ: ಈ ಸಂದರ್ಭ ಸಮಾಜದ ಸಾಧಕರಾದ ಬಿಲ್ಲವ ಬ್ರಿಗ್ರೇಡ್ ಸ್ಥಾಪಕ ಅಧ್ಯಕ್ಷ ಸದಾನಂದ ಪೂಜಾರಿ ಮತ್ತು ಕ್ರೀಡಾ ಕ್ಷೇತ್ರದ ಸಾಧಕಿ ಅಕ್ಷತಾ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಬಹುಮಾನ ವಿತರಣೆ: ಹೆಜಮಾಡಿ ಬಿರುವೆರ್ ಬ್ರದರ್ಸ್ ಅಧ್ಯಕ್ಷ ಮನೋಜ್ ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಮುಖರಾದ ಸತ್ಯಜಿತ್ ಸುರತ್ಕಲ್, ಲೋಕೇಶ್ ಅಮೀನ್, ಅವಿನಾಶ್ ಸುವರ್ಣ, ನಿಶಾನ್ ಪೂಜಾರಿ, ಮೋಹನ್ ಸುವರ್ಣ ಹೆಜಮಾಡಿ, ಕಿಶೋರ್ ಸಾಲ್ಯಾನ್, ಅರುಣ್ ಕೋಟ್ಯಾನ್, ಸಂದೇಶ್‌ರಾಜ್ ಬಂಗೇರ, ಪಾಂಡುರಂಗ ಕರ್ಕೇರ, ಪ್ರಬೋದ್‌ಚಂದ್ರ ಹೆಜ್ಮಾಡಿ, ಸುಭಾಷ್ ಜಿ. ಸಾಲ್ಯಾನ್, ರಿತೇಶ್ ಕುಮಾರ್, ಶ್ರೀಧರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ (MLC Kota Srinivasa Poojary), ಶಾಸಕ ಗುರ್ಮೆ ಸುರೇಶ್ ಶೆಟ್ಟಿ(Kaup MLA Gurme Suresh Shetty), ಮಾಜಿ ಸಚಿವ ವಿನಯಕುಮಾರ್ ಸೊರಕೆ), ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ (EX MLA Lalaji Mendon), ಬಿಲ್ಲವ ಮಹಾಮಂಡಲ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್ (Raja Shekhar Kotian), ಜಿಪಂ ಮಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ(Geethanjali Suvarna) ಮತ್ತು ಶಶಿಕಾಂತ್ ಪಡುಬಿದ್ರಿ, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ರೇಷ್ಮಾ ಎ. ಮೆಂಡನ್, ಹೆಜಮಾಡಿ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಪ್ರಮುಖರಾದ ಜಿನರಾಜ್ ಬಂಗೇರ, ಮೋಹನ್‌ದಾಸ್ ಹೆಜ್ಮಾಡಿ, ಶಶಿ ಕುಮಾರ್ ಕೋಟ್ಯಾನ್ ಪಂದ್ಯಾಟದ ವಿವಿಧ ಹಂತಗಳಲ್ಲಿ ಭಾಗವಹಿಸಿದ್ದರು.
ಸನ್ಮಾನ: ಶೈಕ್ಷಣಿಕ ಸಾಧಕಿ ಹರ್ಷಿತಾ ಎನ್.ಅಂಚನ್, ನಿವೃತ್ತ ಎ.ಎಸ್.ಐ. ದಿವಾಕರ ಜೆ.ಸುವರ್ಣ, ಕ್ರೀಡಾ ಸಾಧಕ ಮನೋಹರ ಎಸ್.ಕರ್ಕೇರರವರನ್ನು ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಮೋಹನ್ ಮೂಲ್ಕಿ ಕಾರ್ಯಕ್ರಮ ನಿರ್ವಹಿಸಿದರು.

