• Home  
  • ಉಡುಪಿ : ಶಾಂತರಾಜ ಐತಾಳರ ‘ಶ್ರೀಕೃಷ್ಣ 108’ ಕೃತಿ ಬಿಡುಗಡೆ (Udupi: Shantaraja Aitalar’s ‘Shrikrishna 108’ release)
- ಪುಸ್ತಕ ಬಿಡುಗಡೆ

ಉಡುಪಿ : ಶಾಂತರಾಜ ಐತಾಳರ ‘ಶ್ರೀಕೃಷ್ಣ 108’ ಕೃತಿ ಬಿಡುಗಡೆ (Udupi: Shantaraja Aitalar’s ‘Shrikrishna 108’ release)

Share: ಉಡುಪಿ : ಶಾಂತರಾಜ ಐತಾಳರ ‘ಶ್ರೀಕೃಷ್ಣ 108’ ಕೃತಿ ಬಿಡುಗಡೆ (Udupi) ಉಡುಪಿ: ಕಲ್ಕೂರ ಪ್ರತಿಷ್ಠಾನ ಮಂಗಳೂರು, ಇಂಪು ಗುಂಪು ಬಳಗ ಉಡುಪಿ ವತಿಯಿಂದ ಸಾಹಿತಿ ಎಚ್‌ h shantharaj aithal,ಶಾಂತರಾಜ ಐತಾಳ್‌ರವರ ಶ್ರೀಕೃಷ್ಣ 108 ಕೃತಿಯನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿ ಕಿನ್ನಿಮುಲ್ಕಿಯ ಶ್ರೀದೇವಿ ಸಭಾಭವನದಲ್ಲಿ ಬಿಡುಗಡೆಗೊಳಿಸಿದರು.   ಪೇಜಾವರ ಶ್ರೀ ತಮ್ಮ ಆಶೀರ್ಚನದಲ್ಲಿ, ಸಾಹಿತ್ಯ ಶಬ್ದಗಳ ಸಮ್ಮಿಲನವಾಗಿದೆ. ಮಾತು ಅರ್ಥವನ್ನು ಹೇಗೆ ಬಿಟ್ಟಿಲ್ಲವೋ ಹಾಗೆ ಶಬ್ದಾರ್ಥಗಳ ಸಂಬಂಧವೇ ಸಾಹಿತ್ಯವಾಗಿದೆ. ಮಾನವರು ಒಬ್ಬರನ್ನೊಬ್ಬರು […]

(Udupi) ಉಡುಪಿ: ಕಲ್ಕೂರ ಪ್ರತಿಷ್ಠಾನ ಮಂಗಳೂರು, ಇಂಪು ಗುಂಪು ಬಳಗ ಉಡುಪಿ ವತಿಯಿಂದ ಸಾಹಿತಿ ಎಚ್‌ h shantharaj aithal,ಶಾಂತರಾಜ ಐತಾಳ್‌ರವರ ಶ್ರೀಕೃಷ್ಣ 108 ಕೃತಿಯನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿ ಕಿನ್ನಿಮುಲ್ಕಿಯ ಶ್ರೀದೇವಿ ಸಭಾಭವನದಲ್ಲಿ ಬಿಡುಗಡೆಗೊಳಿಸಿದರು.

  ಪೇಜಾವರ ಶ್ರೀ ತಮ್ಮ ಆಶೀರ್ಚನದಲ್ಲಿ, ಸಾಹಿತ್ಯ ಶಬ್ದಗಳ ಸಮ್ಮಿಲನವಾಗಿದೆ. ಮಾತು ಅರ್ಥವನ್ನು ಹೇಗೆ ಬಿಟ್ಟಿಲ್ಲವೋ ಹಾಗೆ ಶಬ್ದಾರ್ಥಗಳ ಸಂಬಂಧವೇ ಸಾಹಿತ್ಯವಾಗಿದೆ. ಮಾನವರು ಒಬ್ಬರನ್ನೊಬ್ಬರು ಅರಿತು ಕೊಳ್ಳಬೇಕಿದ್ದರೆ ಶಬ್ದದ ಭಾವನೆ ಅಗತ್ಯ. ಮಾತು ಸುಂದರವಾಗಿರುವಷ್ಟು ಸಂಬಂಧ ಉತ್ತಮವಾಗಿ ಬೆಳೆಯುತ್ತದೆ ಎಂದರು.

 ಅಧ್ಯಕ್ಷತೆಯನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕಸಾಪ ದ.ಕ. ಜಿಲ್ಲಾ ಮಾಜಿ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ ಕಲ್ಕೂರ ವಹಿಸಿದ್ದರು.

ಪೆರಂಪಳ್ಳಿ ವಾಸುದೇವ ಭಟ್ ಕೃತಿ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ ಮೈಸೂರಿನ ಉದ್ಯಮಿ ಎಂ. ಕೃಷ್ಣದಾಸ ಪುರಾಣಿಕ, ಉದ್ಯಮಿ ರಮೇಶ್ ರಾವ್ ಬೀಡು, ವೈದ್ಯ ಡಾ. ಸಪ್ನ ಜೆ. ಉಕ್ಕಿನಡ್ಕ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಎಚ್. ಶಾಂತರಾಜ ಐತಾಳ್ ಅವರಿಗೆ ‘ಕಲ್ಕೂರ ಸಾಹಿತ್ಯ ವಿಭೂಷಣ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.