• Home  
  • ಉಡುಪಿ : ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ಗೆ ಬಾಂಬ್ ಈಮೇಲ್ ಬೆದರಿಕೆ (Bomb email threat to Sharada Residency School Udupi)
- PROBLEMS - ಅಪರಾಧ - ರಾಜಕೀಯ

ಉಡುಪಿ : ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ಗೆ ಬಾಂಬ್ ಈಮೇಲ್ ಬೆದರಿಕೆ (Bomb email threat to Sharada Residency School Udupi)

Share: ಉಡುಪಿ : ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ಗೆ ಬಾಂಬ್ ಈಮೇಲ್ ಬೆದರಿಕೆ  ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕ, ಪೊಲೀಸರಿಂದ ತೀವ್ರ ತಪಾಸಣೆ (Udupi) ಉಡುಪಿ: ಉಡುಪಿ ನಗರದ ಕುಂಜಿಬೆಟ್ಟುವಿನ ಶಾರದಾ ರೆಸಿಡೆನ್ಸಿಯಲ್ ಶಾಲೆಗೆ ಬಾಂಬ್ ಬೆದರಿಕೆ ಬಂದಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಂಡ ಘಟನೆ ಇಂದು (ಸೋಮವಾರ) ಸಂಭವಿಸಿದೆ. ತಕ್ಷಣ ಶಾಲಾಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದು,  ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಶ್ವಾನದಳ ತೀವ್ರ ತಪಾಸಣೆ ಕೈಗೊಂಡರು.  ಶಾಲೆಯ ಇಮೇಲ್‌ಗೆ ಬಾಂಬ್ ಸ್ಪೋಟದ ಸಂದೇಶ ಬಂದ ತಕ್ಷಣ […]

ಉಡುಪಿ : ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ಗೆ ಬಾಂಬ್ ಈಮೇಲ್ ಬೆದರಿಕೆ

 ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕ, ಪೊಲೀಸರಿಂದ ತೀವ್ರ ತಪಾಸಣೆ

(Udupi) ಉಡುಪಿ: ಉಡುಪಿ ನಗರದ ಕುಂಜಿಬೆಟ್ಟುವಿನ ಶಾರದಾ ರೆಸಿಡೆನ್ಸಿಯಲ್ ಶಾಲೆಗೆ ಬಾಂಬ್ ಬೆದರಿಕೆ ಬಂದಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಂಡ ಘಟನೆ ಇಂದು (ಸೋಮವಾರ) ಸಂಭವಿಸಿದೆ.

ತಕ್ಷಣ ಶಾಲಾಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದು,  ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಶ್ವಾನದಳ ತೀವ್ರ ತಪಾಸಣೆ ಕೈಗೊಂಡರು.

 ಶಾಲೆಯ ಇಮೇಲ್‌ಗೆ ಬಾಂಬ್ ಸ್ಪೋಟದ ಸಂದೇಶ ಬಂದ ತಕ್ಷಣ ಶಾಲೆಯವರು ಕೂಡಲೇ ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಿ ಮೈದಾನದಲ್ಲಿ ಇರಿಸಿದ್ದಾರೆ. ಬಾಂಬ್ ಸ್ಫೋಟದ ಬೆದರಿಕೆ ಹಿನ್ನಲೆಯಲ್ಲಿ ಉಡುಪಿ ಪೊಲೀಸರು ಅಲರ್ಟ್ ಆಗಿದ್ದು, ಸ್ಥಳಕ್ಕೆ ಆಗಮಿಸಿದ ಶ್ವಾನ ದಳ ಶಾಲೆಯ ಸುತ್ತಮುತ್ತ ಪರಿಶೀಲನೆ ನಡೆಸಿತು. ಆದರೆ ಬಾಂಬ್‌ಗೆ ಸಂಬಂಧ ಪಟ್ಟ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ಪ್ರಭು ಡಿ ಸಹಿತ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

 ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಡಿಕೊಸ್ಟಾ, ಈ ಶಾಲೆಯಲ್ಲಿ ಸುಮಾರು 600ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದು, ಇವರನ್ನೆಲ್ಲ ಶಾಲೆಯ ಮೈದಾನದಲ್ಲಿ ಇರಿಸಲಾಗಿದೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲಿರುವ ವಿದ್ಯಾ ಸಂಸ್ಥೆಯ ಮಕ್ಕಳನ್ನು ಕೂಡ ಹೊರಗಡೆ ಕಳುಹಿಸಲಾಗಿದೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಅವರು ಸೂಕ್ತ ತಪಾಸಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.