ಉಡುಪಿ ಶ್ರೀಕೃಷ್ಣಮಠಕ್ಕೆ ಜೂನಿಯರ್ ಎನ್ ಟಿ ಆರ್, ಕಾಂತಾರ ರಿಷಭ್ ಭೇಟಿ, ದೇವರ ದರ್ಶನ
(Udupi) ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಇಂದು ಸ್ಟಾರ್ ನಟರಾದ ಜೂನಿಯರ್ ಆನ್ ಟಿ ಆರ್ ಮತ್ತು ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆದರು.
ಜೊತೆಯಾಗಿ ಆಗಮಿಸಿದ ಈ ನಟರು ಕುಟುಂಬ ಸಮೇತ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಇವರಿಗೆ ಸೆಲೆಬ್ರಿಟಿ ನಿರ್ದೇಶಕ ಪ್ರಶಾಂತ್ ನೀಲ್ ಸಾಥ್ ನೀಡಿದ್ದಾರೆ. ಸ್ಟಾರ್ ನಟರು ಮತ್ತು ನಿರ್ದೇಶಕರು ಜೊತೆಯಾಗಿಯೇ ಶ್ರೀಕೃಷ್ಣಮುಖ್ಯಪ್ರಾಣರ ದರ್ಶನ ಮಾಡಿದರು.
ಶ್ರೀ ಕೃಷ್ಣ, ಮುಖ್ಯಪ್ರಾಣ, ಗರುಡ ದೇವರ ದರ್ಶನ ಕೈಗೊಂಡ ನಟರು, ಬಳಿಕ ಪರ್ಯಾಯ ಶ್ರೀಸುಗುಣೇಂದ್ರ ಶ್ರೀಪಾದರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭ ಶ್ರೀ ಮಠದ ವತಿಯಿಂದ ಆತ್ಮೀಯವಾಗಿ ಗೌರವ ಸಲ್ಲಿಸಲಾಯಿತು.

