• Home  
  • ಎಂಜಿಎಂ ಸಂಧ್ಯಾ ಕಾಲೇಜಿನಲ್ಲಿ ಪೋಷಕರ ಸಭೆ (Parents’ meeting at MGM Evening College)
- ಶಾಲಾ ಕಾಲೇಜು

ಎಂಜಿಎಂ ಸಂಧ್ಯಾ ಕಾಲೇಜಿನಲ್ಲಿ ಪೋಷಕರ ಸಭೆ (Parents’ meeting at MGM Evening College)

Share: ಎಂಜಿಎಂ ಸಂಧ್ಯಾ ಕಾಲೇಜಿನಲ್ಲಿ ಪೋಷಕರ ಸಭೆ ಕಾರ್ಯಕ್ರಮ ಉದ್ಘಾಟಿಸಿದ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ   (Udupi) ಉಡುಪಿ : ಉಡುಪಿ ಎಂ ಜಿ.ಎಂ ಸಂಧ್ಯಾ ಕಾಲೇಜಿನ ಪೋಷಕ ಶಿಕ್ಷಕರ ಸಂಘದ ಸಭೆಯು ಕಾಲೇಜಿನ ಟಿ.ಎಂ.ಎ. ಪೈ ಪ್ಲಾಟಿನಂ ಜುಬಿಲಿ ಬ್ಲಾಕ್ ಸಭಾಂಗಣದಲ್ಲಿ  ನಡೆಯಿತು.   ಕಾರ್ಯಕ್ರಮವನ್ನು ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ  ಉದ್ಘಾಟಿಸಿದರು.   ಇದೇ ತಿಂಗಳ 30ರಂದು ನಿವೃತ್ತಿಗೊಳ್ಳಲಿರುವ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.   ಕಾಲೇಜಿನ ಪ್ರಾಂಶುಪಾಲರಾದ […]

(Udupi) ಉಡುಪಿ : ಉಡುಪಿ ಎಂ ಜಿ.ಎಂ ಸಂಧ್ಯಾ ಕಾಲೇಜಿನ ಪೋಷಕ ಶಿಕ್ಷಕರ ಸಂಘದ ಸಭೆಯು ಕಾಲೇಜಿನ ಟಿ.ಎಂ.ಎ. ಪೈ ಪ್ಲಾಟಿನಂ ಜುಬಿಲಿ ಬ್ಲಾಕ್ ಸಭಾಂಗಣದಲ್ಲಿ  ನಡೆಯಿತು.

  ಕಾರ್ಯಕ್ರಮವನ್ನು ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ  ಉದ್ಘಾಟಿಸಿದರು.

  ಇದೇ ತಿಂಗಳ 30ರಂದು ನಿವೃತ್ತಿಗೊಳ್ಳಲಿರುವ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

  ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

    ಪೋಷಕ-ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಎನ್. ನಾಯಕ್ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದರು.

  ಎಂ.ಜಿ.ಎಂ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಬಿಸಿಎ ಸಂಯೋಜಕರಾದ ಡಾ. ಎಂ. ವಿಶ್ವನಾಥ ಪೈ ಉಪಸ್ಥಿತರಿದ್ದರು.

  ಪೋಷಕ-ಶಿಕ್ಷಕ ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಹಾಜರಾತಿ, ಶಿಸ್ತು, ಪರೀಕ್ಷಾ ಸಿದ್ಧತೆ ಹಾಗೂ ಪೋಷಕರ ಸಹಕಾರದ ಮಹತ್ವ ಕುರಿತು ಚರ್ಚಿಸಲಾಯಿತು. ಕಾಲೇಜಿನ ಅಭಿವೃದ್ಧಿಗೆ ಪೋಷಕರು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.

 ಖಜಾಂಚಿ ನರೇಂದ್ರ ರಾವ್, ನಿರ್ದೆಶಕರಾದ ಭಾರತಿ ಜಯಕರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಕೆ. ರೂಪಾ ನಾಯಕ್, ಶ್ರೀಮತಿ ಸುನೀತಾ ಪೂಜಾರಿ,  ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

   ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಸನತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಬಿ.ಸಿ.ಎ ವಿದ್ಯಾರ್ಥಿನಿ ನಮೃತಾ ಪ್ರಾರ್ಥಿಸಿದರು. ಪೋಷಕ-ಶಿಕ್ಷಕರ ಸಂಘದ ಕಾರ್ಯದರ್ಶಿ ಭಾರತಿ ಜಯಕರ್  ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.