ನಾಗಬನದಲ್ಲಿ 51 ಜಾತಿಯ ವಿವಿಧ ಗಿಡಗಳನ್ನು ನೆಡುವ ಅಪೂರ್ವ ಕಾರ್ಯಕ್ರಮ
“ನಮ್ಮ ಮನೆ ನಮ್ಮ ಮರ” ತಂಡದಿಂದ ಸಗ್ರಿ ಶ್ರೀ ನಾಗ ಬ್ರಹ್ಮಸ್ಥಾನ ಮೂಡುಸಗ್ರಿಯಲ್ಲಿ ನಡೆದ ಕಾರ್ಯಕ್ರಮ
(Udupi) ಉಡುಪಿ : ಸುಮಾರು ಒಂದು ಸಾವಿರ ವರ್ಷಗಳ ಹಳೆಯ ಶ್ರೀ ನಾಗ ಬ್ರಹ್ಮಸ್ಥಾನ ಮೂಡುಸಗ್ರಿಯಲ್ಲಿ ಸುಮಾರು 51 ಜಾತಿಯ ವಿವಿಧ ಗಿಡಗಳನ್ನು ಜೀರ್ಣೋದ್ಧಾರಗೊಳ್ಳುತ್ತಿರುವ ನಾಗ ಬನದಲ್ಲಿ ನಾಗಬ್ರಹ್ಮ ಅಭಿವೃದ್ಧಿ ಸಮಿತಿ ವತಿಯಿಂದ “ನಮ್ಮ ಮನೆ ನಮ್ಮ ಮರ” ತಂಡದ ಸಹಕಾರದೊಂದಿಗೆ ನೆಡಲಾಯಿತು.
ಇತ್ತೀಚಿನ ದಿನಗಳಲ್ಲಿ ಕಾಂಕ್ರೀಟೀಕರಣ ಕೊಳ್ಳುತ್ತಿರುವ ನಾಗ ಬನಗಳ ಮಧ್ಯೆ ಈ ವಿಶೇಷ ನಾಗಬನ ಎಲ್ಲರಿಗೂ ಮಾದರಿಯಾಗಿದೆ.
ಈ ರೀತಿಯ ವಿನೂತನ ಮಾದರಿ ಕಾರ್ಯಕ್ರಮ ಸಂಯೋಜಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ಹೇಳಿದರು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ವಿಷ್ಣು ಪ್ರಸಾದ್ ತೆಂಕಿಲ್ಲಾಯ, ಶ್ರೀನಿವಾಸ , ಸಮಿತಿಯ ಪದಾಧಿಕಾರಿಗಳು, ವಿಜಯ್ ಕೊಡವೂರು, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ, ಕಾರ್ಯದರ್ಶಿ ಜನಾದ೯ನ ಕೊಡವೂರು, ಮಂಜುಳಾ ಪ್ರಸಾದ್, ಸಂದೀಪ್ ಮಂಜ, ಕಾವ್ಯವಾಣಿ ಕೊಡಗು, ಉದಯ ನಾಯ್ಕ್, ರಾಘವೇಂದ್ರ ಕವಾ೯ಲು ಮುಂತಾದವರು ಉಪಸ್ಥಿತರಿದ್ದರು.
ಅವಿನಾಶ್ ಕಾಮತ್ ನಿರೂಪಿಸಿದರು.

