• Home  
  •  ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ದಾರುಣ ಅಂತ್ಯ: ಗಣ್ಯರ ಶೋಕ (Arjuna Tragic end Carrying Ambari)
- ದೇಶ-ವಿದೇಶ - ಪ್ರಚಲಿತ

 ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ದಾರುಣ ಅಂತ್ಯ: ಗಣ್ಯರ ಶೋಕ (Arjuna Tragic end Carrying Ambari)

Share: ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ದಾರುಣ ಅಂತ್ಯ: ಗಣ್ಯರ ಶೋಕ ಮೈಸೂರು; ರಾಜ್ಯದ ಜನತೆಯ ಪ್ರೀತಿಗೆ ಪಾತ್ರವಾಗಿದ್ದ ಅಂಬಾರಿ ಆನೆ ಅರ್ಜುನ ಸೋಮವಾರ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಒಂಟಿ ಸಲಗದ ದಾಳಿಗೆ ಜರ್ಜರಿತ ವಾಗಿ ಸಾವಿಗೀಡಾಗಿದೆ.  ಎಂಟು ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ಪ್ರಾಣಿಪ್ರಿಯರ ಕಣ್ಮಣಿಯಾಗಿದ್ದ ಹಿರಿಯ ಆನೆಯನ್ನು ಕಾರ್ಯಾಚರಣೆಗೆ ಬಳಸಿದ ಕ್ರಮದ ಕುರಿತು ಮತ್ತೆ ಕಳವಳ ವ್ಯಕ್ತವಾಗಿದೆ. ಅಂಕೆಗೆ ಸಿಲುಕದ ಕಾಡಾನೆಗಳನ್ನು ಸೆರೆ ಹಿಡಿಯುವ ಅತ್ಯಂತ ಅಪಾಯಕಾರಿಯಾದ ಕಾರ್ಯಾಚರಣೆಯ ಸಂದರ್ಭ ಆನೆ […]

ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ದಾರುಣ ಅಂತ್ಯ: ಗಣ್ಯರ ಶೋಕ

ಮೈಸೂರು; ರಾಜ್ಯದ ಜನತೆಯ ಪ್ರೀತಿಗೆ ಪಾತ್ರವಾಗಿದ್ದ ಅಂಬಾರಿ ಆನೆ ಅರ್ಜುನ ಸೋಮವಾರ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಒಂಟಿ ಸಲಗದ ದಾಳಿಗೆ ಜರ್ಜರಿತ ವಾಗಿ ಸಾವಿಗೀಡಾಗಿದೆ.

 ಎಂಟು ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ಪ್ರಾಣಿಪ್ರಿಯರ ಕಣ್ಮಣಿಯಾಗಿದ್ದ ಹಿರಿಯ ಆನೆಯನ್ನು ಕಾರ್ಯಾಚರಣೆಗೆ ಬಳಸಿದ ಕ್ರಮದ ಕುರಿತು ಮತ್ತೆ ಕಳವಳ ವ್ಯಕ್ತವಾಗಿದೆ.

ಅಂಕೆಗೆ ಸಿಲುಕದ ಕಾಡಾನೆಗಳನ್ನು ಸೆರೆ ಹಿಡಿಯುವ ಅತ್ಯಂತ ಅಪಾಯಕಾರಿಯಾದ ಕಾರ್ಯಾಚರಣೆಯ ಸಂದರ್ಭ ಆನೆ ತಿತಕ್ಕೆ ಒಳಪಟ್ಟು ಅರ್ಜುನ ಸಾವನ್ನಪ್ಪಿದ್ದಾನೆ.

ಇತ್ತೀಚೆಗಷ್ಟೇ ಹಾಸನ ಜಿಲ್ಲೆಯಲ್ಲಿ ಗಾಯಗೊಂಡಿದ್ದ ಕಾಡಾನೆ ಭೀಮನನ್ನು ಸೆರೆ ಹಿಡಿಯುವ ಸಂದರ್ಭ ಶಾರ್ಪ್ ಶೂಟರ್ 67 ವರ್ಷದ ವೆಂಕಟೇಶ್ ಬಲಿಯಾಗಿದ್ದರು. ನಿವೃತ್ತಿ ವಯಸ್ಸು ಕಳೆದು ಏಳೆಂಟು ವರ್ಷವಾಗಿದ್ದ ಅವರನ್ನು ಬಳಸಿಕೊಂಡ ಕುರಿತು ಆಕ್ಷೇಪ ವ್ಯಕ್ತವಾಗಿತ್ತು. ಈಗ 64 ವರ್ಷದ ಆನೆಯನ್ನು ಬಳಕೆ ಮಾಡಿಕೊಂಡಿರುವ ಕುರಿತು ಕೂಡ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಆನೆಗೂ 60 ನಿವೃತ್ತಿ ವರ್ಷ: ಕೇವಲ ಸಿಬ್ಬಂದಿಗೆ ಮಾತ್ರವಲ್ಲ ಸಾಕಾನೆಗಳ ನಿವೃತ್ತಿ ವಯಸ್ಸು ಕೂಡ 60 ಎನ್ನುವುದನ್ನು ಸರಕಾರ ಈಗಾಗಲೇಸ್ಪಷ್ಟಪಡಿಸಿದೆ.

60 ವರ್ಷದ ನಂತರ ಆನೆ ಆರೋಗ್ಯಕರವಾಗಿದ್ದಲ್ಲಿ ತ್ರಾಸದಾಯಕವಲ್ಲದ ಸಣ್ಣ ಪುಟ್ಟ ಕೆಲಸಗಳಿಗೆ ಮಾತ್ರ ಬಳಸಿಕೊಳ್ಳಬಹುದು ಎಂದಿದೆ. ಆದರೆ, ಒಂಟಿ ಸಲಗವನ್ನು ಸೆರೆ ಹಿಡಿಯುವಂತಹ ಸಾಹಸಕ್ಕೆ ಅರ್ಜುನನ ಬಳಕೆ ಅರಣ್ಯ ಇಲಾಖೆಗೆ ತೀವ್ರ ಮಜುಗರದ ಪ್ರಶ್ನೆಯಾಗಿದೆ.

 ಸಿಬ್ಬಂದಿಗಳು ನಿವೃತ್ತಿ ಹೊಂದಿದಾಗ, ಅವರ ಜಾಗಕ್ಕೆ  ಅವರ ಸ್ಥಾನಕ್ಕೆ ನೂತನ ನೇಮಕಾತಿ ಆಗದಿರುವುದೇ ಈ ಎಲ್ಲಾ ಯಡವಟ್ಟಿಗೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.