ಎನ್ ಎಸ್ ಎಸ್ : ಉಡುಪಿ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಕಾಪು ಬೀಚ್ ಸ್ವಚ್ಛತಾ ಅಭಿಯಾನ
ಅಭಿಯಾನಕ್ಕೆ ಸಹಕಾರ ನೀಡಿದ ಕಾಪು ಬೀಚ್ ಫ್ರೆಂಡ್ಸ್
(Kaup) ಕಾಪು : ಉಡುಪಿ ಸರಕಾರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ಕಾಪು ಬೀಚ್ ಫ್ರೆಂಡ್ಸ್, ಕಾಪು ಪುರಸಭೆಯ ಸಹಕಾರದಲ್ಲಿ ಶನಿವಾರ ಕಾಪು ಬೀಚ್ ಸಮುದ್ರ ಕಿನಾರೆಯಲ್ಲಿ ಸ್ವಚ್ಛತಾ ಅಭಿಯಾನ ನೆರವೇರಿತು.
ಸ್ವಚ್ಛತಾ ಅಭಿಯಾನವನ್ನು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ ಎ ಗಫೂರ್ ಬೀಚ್ ನಲ್ಲಿ ಕಸ ಹೆಕ್ಕುವ ಮೂಲಕ ಉದ್ಘಾಟಿಸಿದರು.
ಅವರು ಮಾತನಾಡಿ, ಕರಾವಳಿ ಅಭಿವೃದ್ಧಿ ಮಂಡಳಿಯ ಆಯೋಜನೆಯಲ್ಲಿ ಉಳ್ಳಾಲ, ಪಣಂಬೂರು, ಮಲ್ಪೆ, ಹೊನ್ನಾವರ, ಕಾರವಾರ ಬೀಚ್ ಗಳನ್ನು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾದೊಂದಿಗೆ ಸ್ವಚ್ಛತಾ ಆಂದೋಲನ ಹಮ್ಮಿಕೊಂಡಿದ್ದೇವೆ. ಮಾನ್ಯ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಡಿಸಿಎಂ ಡಾ. ಪರಮೇಶ್ವರ್ ರವರು ಸಮುದ್ರ ಮತ್ತು ನದಿ ಕಿನಾರೆಗಳನ್ನು ಸ್ವಚ್ಛಗೊಳಿಸಲೆಂದೇ ಹಲವಾರು ಯೋಜನೆ ಹಮ್ಮಿಕೊಂಡಿದ್ದಾರೆ ಎಂದರು.
ಈ ಸಂದರ್ಭ ಕಾಪು ಬೀಚ್ ಫ್ರೆಂಡ್ಸ್ ನ ಚಂದ್ರಶೇಖರ್ ಬೀರಾ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಪರಮೇಶ್ವರ ಎಂ ಮೊಗವೀರ, ಸಹ ಶಿಬಿರಾಧಿಕಾರಿ ಲಕ್ಷ್ಮೀಕಾಂತ್ ಕಾಪು, ತಾರಾನಾಥ ಪೂಜಾರಿ, ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಮತ್ತು ಪಡು ಗ್ರಾಮಸ್ಥರು ಉಪಸ್ಥಿತರಿದ್ದರು.

