• Home  
  • ಎರ್ಮಾಳು ತೆಂಕ ಕಿನಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಪೋಷಕರ ಸಭೆ  (Telent award and Parents meeting at Yermal Tenka Kinara English Medium school)
- ಶಾಲಾ ಕಾಲೇಜು

ಎರ್ಮಾಳು ತೆಂಕ ಕಿನಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಪೋಷಕರ ಸಭೆ  (Telent award and Parents meeting at Yermal Tenka Kinara English Medium school)

Share: ಎರ್ಮಾಳು ತೆಂಕ ಕಿನಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಪೋಷಕರ ಸಭೆ   (Yermal) ಎರ್ಮಾಳು:  ಎರ್ಮಾಳು ತೆಂಕ ಕಿನಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25 ಶೈಕ್ಷಣಿಕ ವರ್ಷದ ಪ್ರಥಮ ಪೋಷಕರ ಸಭೆ ನಡೆಸಲಾಯಿತು.  ಈ ವರ್ಷ ಶಾಲೆಯಲ್ಲಿ ನಡೆಯಲಿರುವ ಅಬಾಕಾಸ್,  ವೇದಿಕ್ ಮಾಥ್ಸ್, ಕ್ಲಾಸ್ ಸಾಥಿ , ಯೋಗ, ಚಿತ್ರ ಕಲೆ ಹಾಗೂ ಮತ್ತಿತರ ಚಟುವಟಿಕೆಗಳ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯನಿ  ಶ್ರೀಮತಿ ಪ್ರೀತಿ ಸುವರ್ಣರವರು ಮಾಹಿತಿ ನೀಡಿದರು.  ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ […]

ಎರ್ಮಾಳು ತೆಂಕ ಕಿನಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಪೋಷಕರ ಸಭೆ  

(Yermal) ಎರ್ಮಾಳು:  ಎರ್ಮಾಳು ತೆಂಕ ಕಿನಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25 ಶೈಕ್ಷಣಿಕ ವರ್ಷದ ಪ್ರಥಮ ಪೋಷಕರ ಸಭೆ ನಡೆಸಲಾಯಿತು.

 ಈ ವರ್ಷ ಶಾಲೆಯಲ್ಲಿ ನಡೆಯಲಿರುವ ಅಬಾಕಾಸ್,  ವೇದಿಕ್ ಮಾಥ್ಸ್, ಕ್ಲಾಸ್ ಸಾಥಿ , ಯೋಗ, ಚಿತ್ರ ಕಲೆ ಹಾಗೂ ಮತ್ತಿತರ ಚಟುವಟಿಕೆಗಳ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯನಿ  ಶ್ರೀಮತಿ ಪ್ರೀತಿ ಸುವರ್ಣರವರು ಮಾಹಿತಿ ನೀಡಿದರು.

 ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಎಂಬ ವಿಷಯದ ಬಗ್ಗೆ ಜೆ ಸಿ ಐ ಇಂಡಿಯಾ ರಾಷ್ಟೀಯ ತರಬೇತಿದಾರ  ಸುಧಾಕರ್ ಕಾರ್ಕಳರವರು ಮಾಹಿತಿ ನೀಡಿದರು.

 ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಾಲಾ ವಿದ್ಯಾರ್ಥಿಗಳು ಶೇಕಡಾ 100 ಫಲಿತಾಂಶ ದಾಖಲಿಸಿದ್ದು, ಅದರಲ್ಲಿ ಶೇಕಡಾ 90 ಮೇಲ್ಪಟ್ಟು ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ತಲಾ ರೂಪಾಯಿ 25000 ಸಾವಿರ ರೂ.,  ಶೇಕಡಾ 85 ಮೇಲ್ಪಟ್ಟು ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ತಲಾ ರೂಪಾಯಿ 7000 ಸಾವಿರ ರೂ, ಶೇಕಡಾ 80 ಮೇಲ್ಪಟ್ಟು ಅಂಕ ಗಳಿಸಿದ ಮೂರು ವಿದ್ಯಾರ್ಥಿಗಳಿಗೆ ತಲಾ ರೂಪಾಯಿ 5000ರೂ ಪ್ರೋತ್ಸಾಹ ಧನ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಭೋದಿಸಿದ ಎಲ್ಲಾ ಶಿಕ್ಷಕ ವೃಂದವನ್ನು ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ (ರಿ) ಮುಂಬೈಯ ಅಧ್ಯಕ್ಷರಾದ   ಸುರೇಶ ಕುಂದರ್ ಹಾಗೂ ಅವರ ಸುಪುತ್ರ ಗಿರೀಶ್ ಎಸ್ ಕುಂದರ್, ಮುಂಬೈ ಇವರ ಕುಟುಂಬಿಕರ ವತಿಯಿಂದ  ಗೌರವಿಸಲಾಯಿತು.

  ಮುಂದಿನ ವರ್ಷವೂ ಕೂಡ ಇದೇ ರೀತಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಲಾಗುವುದು ಎಂದು ಸುರೇಶ್ ಕುಂದರ್ ರವರು ಸಭೆ ಯಲ್ಲಿ ಘೋಷಿಸಿದರು.

ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ( ರಿ ) ಎರ್ಮಾಳು ತೆಂಕ  ಇದರ ಅಧ್ಯಕ್ಷರಾದ ಕಿಶೋರ್ ಕುಮಾರ್ ರವರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

  ಕಾರ್ಯಕ್ರಮದಲ್ಲಿ  ಎರ್ಮಾಳು ತೆಂಕ ಮೊಗವೀರ ಸಭಾದ  ಅಧ್ಯಕ್ಷ ಲಿಂಗಪ್ಪ ಪುತ್ರನ್, ಪೋಷಕರ ಪ್ರತಿನಿಧಿ ಮೊಹಮ್ಮದ್ ಸಲೀಂ, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರಿ ರಿಷಿಕಾ ಕಿಶೋರ್ ಸುವರ್ಣ ಸ್ವಾಗತಿಸಿದರು. ಕುಮಾರಿ ಸಿಂಚನ ವಂದಿಸಿದರು. ಸಾಲಿಕ ಕೌಸರ್  ಕಾರ್ಯಕ್ರಮ ನಿರ್ವಹಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.