• Home  
  • ಎಸ್‌ಎಸ್‌ಎಲ್‌ಸಿಯಲ್ಲಿ ಐದನೇ ರ್‍ಯಾಂಕ್ ಗಳಿಸಿದ ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ವಿದ್ಯಾರ್ಥಿ ಸಮರ್ಥ್ ಆರ್. ಜೋಷಿಗೆ ಸನ್ಮಾನ (Uchila SSLC 5TH Rank holder an honor)  
- ಶಾಲಾ ಕಾಲೇಜು

ಎಸ್‌ಎಸ್‌ಎಲ್‌ಸಿಯಲ್ಲಿ ಐದನೇ ರ್‍ಯಾಂಕ್ ಗಳಿಸಿದ ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ವಿದ್ಯಾರ್ಥಿ ಸಮರ್ಥ್ ಆರ್. ಜೋಷಿಗೆ ಸನ್ಮಾನ (Uchila SSLC 5TH Rank holder an honor)  

Share: ಎಸ್‌ಎಸ್‌ಎಲ್‌ಸಿಯಲ್ಲಿ ಐದನೇ ರ್‍ಯಾಂಕ್ ಗಳಿಸಿದ ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ವಿದ್ಯಾರ್ಥಿ ಸಮರ್ಥ್ ಆರ್. ಜೋಷಿಗೆ ಸನ್ಮಾನ ಹಳೆ ವಿದ್ಯಾರ್ಥಿಗಳಿಂದ 62, 100 ರೂ. ಆರ್ಥಿಕ ಧನ ಸಹಾಯ ಹಸ್ತಾತರ. (Uchila) ಉಚ್ಚಿಲ: ಎಸ್ಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಐದನೇ ರ್‍ಯಾಂಕ್ ಗಳಿಸಿದ ಉಚ್ಚಿಲ ಸರಸ್ವತಿ ಮಂದಿರ ಪ್ರೌಢಶಾಲೆಯ ವಿದ್ಯಾರ್ಥಿ ಸಮರ್ಥ್ ಆರ್. ಜೋಷಿ ಅವರನ್ನು ಸರಸ್ವತಿ ಮಂದಿರ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ವತಿಯಿಂದ  ಸಮ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೌಢಶಾಲಾ […]

ಎಸ್‌ಎಸ್‌ಎಲ್‌ಸಿಯಲ್ಲಿ ಐದನೇ ರ್‍ಯಾಂಕ್ ಗಳಿಸಿದ ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ವಿದ್ಯಾರ್ಥಿ ಸಮರ್ಥ್ ಆರ್. ಜೋಷಿಗೆ ಸನ್ಮಾನ

ಹಳೆ ವಿದ್ಯಾರ್ಥಿಗಳಿಂದ 62, 100 ರೂ. ಆರ್ಥಿಕ ಧನ ಸಹಾಯ ಹಸ್ತಾತರ.

(Uchila) ಉಚ್ಚಿಲ: ಎಸ್ಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಐದನೇ ರ್‍ಯಾಂಕ್ ಗಳಿಸಿದ ಉಚ್ಚಿಲ ಸರಸ್ವತಿ ಮಂದಿರ ಪ್ರೌಢಶಾಲೆಯ ವಿದ್ಯಾರ್ಥಿ ಸಮರ್ಥ್ ಆರ್. ಜೋಷಿ ಅವರನ್ನು ಸರಸ್ವತಿ ಮಂದಿರ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ವತಿಯಿಂದ  ಸಮ್ಮಾನಿಸಲಾಯಿತು.
 ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ ಮಾತನಾಡಿ, ಇದೊಂದು ಅಪೂರ್ವವಾದ ಸಾಧನೆಯಾಗಿದೆ. ಈ ಸಾಧನೆಯ ಹಿಂದೆ ವಿದ್ಯಾರ್ಥಿಯ ಪರಿಶ್ರಮವಿದೆ. ಯಾವುದೇ ಶಾಲೆ ಬೆಳೆಯಬೇಕಾದರೆ ಅಲ್ಲಿನ ಶಿಕ್ಷಕರು, ಹಳೇ ವಿದ್ಯಾರ್ಥಿಗಳು, ಪೋಷಕರು, ಚಿಂತಕರು ಮತ್ತು ಆಡಳಿತ ಮಂಡಳಿಯ ಸಹಕಾರ ಅತ್ಯಗತ್ಯವಾಗಿದೆ. ಇಲ್ಲಿನ ಹಳೆ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ನೆಲೆಸಿದ್ದು, ಎಲ್ಲರ ಸಹಕಾರದೊಂದಿಗೆ ಶಾಲೆ ಇನ್ನಷ್ಟು ಎತ್ತರದ ಸಾಧನೆಗೈಯ್ಯುವಂತಾಗಲಿ ಎಂದರು.
ಶಾಲಾ ಹಳೆ ವಿದ್ಯಾರ್ಥಿ, ಹಿರಿಯ ಪ್ರಾಥಮಿಕ ವಿಭಾಗದ ಪ್ರಭಾರ ಮುಖ್ಯ ಶಿಕ್ಷಕಿ ಲಕ್ಷ್ಮೀ ಟೀಚರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 ಪ್ರಾಥಮಿಕ ಶಾಲಾ ಸಂಚಾಲಕ ಮೋಹನ್‌ದಾಸ್ ಶೆಟ್ಟಿ ಶುಭಾಶಂಸನೆಗೈದರು.
ವಾಟ್ಸಾಪ್ ಮೂಲಕ ಸಂಗ್ರಹಿಸಿದ ಸಹಾಯಧನ ಹಸ್ತಾಂತರ : ಹಳೇ ವಿದ್ಯಾರ್ಥಿಗಳು ವಾಟ್ಸಾಪ್ ಗ್ರೂಫ್‌ನಲ್ಲಿ ಚರ್ಚಿಸಿ ಸಂಗ್ರಹಿಸಿದ 62, 100 ರೂ. ಆರ್ಥಿಕ ಧನ ಸಹಾಯವನ್ನು ಸಾಧಕ ವಿದ್ಯಾರ್ಥಿ ಸಮರ್ಥ್ ಆರ್. ಜೋಷಿ ಅವರಿಗೆ ಹಸ್ತಾಂತರಿಸಿ, ಉತ್ತಮ ಭವಿಷ್ಯವನ್ನು ಹಾರೈಸಲಾಯಿತು.

 ಈ ಬಾರಿ ಸಂಸ್ಥೆಗೆ ಉತ್ತಮ ಅಂಕ ಬರುವಲ್ಲಿ ಶ್ರಮಿಸಿದ ಶಾಲಾ ಶಿಕ್ಷಕರು ಮತ್ತು ಆತನ ತಾಯಿ ಬಿಸಿಯೂಟದ ಸಿಬಂದಿ ಅನಿತಾ ಜೋಷಿ ಅವರನ್ನು ಗೌರವಿಸಲಾಯಿತು.
ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷೆ ಆಶಾ ದಿನೇಶ್ ಸುವರ್ಣ, ಶಿಕ್ಷಕ ವೃಂದ, ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 ಹಳೆ ವಿದ್ಯಾರ್ಥಿ ಚಂದ್ರಶೇಖರ್ ಶೆಟ್ಟಿ ಪೊಲ್ಯ ಸ್ವಾಗತಿಸಿದರು.

ಸಂಘದ ಕಾರ್ಯದರ್ಶಿ ಸತೀಶ್ ಕುಲಾಲ್ ವಂದಿಸಿದರು. ಹಳೆ ವಿದ್ಯಾರ್ಥಿಗಳಾದ ಕಾಂತಿ ಆಚಾರ್ಯ, ಸುರೇಖಾ ಶೈಲೇಶ್, ಪ್ರಶಾಂತ್ ಎಸ್‌ ಪೂಜಾರಿ ಉಚ್ಚಿಲ ಕಾರ್ಯಕ್ರಮ ಸಂಯೋಜಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.