• Home  
  • ಎರ್ಮಾಳು ತೆಂಕ – ಬಡಾ ಕಂಬಳ ; ಕರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ , ಲೋಗೊ ಬಿಡುಗಡೆ(Yermal Tenka – Bada Kambala; Guddali Puja and logo released)
- ಕ್ರೀಡೆ

ಎರ್ಮಾಳು ತೆಂಕ – ಬಡಾ ಕಂಬಳ ; ಕರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ , ಲೋಗೊ ಬಿಡುಗಡೆ(Yermal Tenka – Bada Kambala; Guddali Puja and logo released)

Share: ಎರ್ಮಾಳು ತೆಂಕ – ಬಡಾ ಕಂಬಳ ; ಕರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ , ಲೋಗೊ ಬಿಡುಗಡೆ ಫೆ. 28ಕ್ಕೆ ಎರ್ಮಾಳು ತೆಂಕ – ಬಡಾ ಜೋಡುಕರೆ ಕಂಬಳ (Yermal) ಎರ್ಮಾಳು : ಎರ್ಮಾಳು ತೆಂಕ-ಬಡಾ ಜೋಡುಕರೆ ಕಂಬಳದ ಕರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗೂ ಕಂಬಳದ ಲೋಗೊ ಬಿಡುಗಡೆಯು ಬುಧವಾರ ಎರ್ಮಾಳು ಬಡಕೊಟ್ಟು ಬಾಕಿಮಾರು ಗದ್ದೆಯಲ್ಲಿ ನೆರವೇರಿತು. ಬೆಳ್ಮಣ್‌ ವಿಘ್ನೇಶ್‌ ಭಟ್‌ ನೇತೃತ್ವದಲ್ಲಿ, ಎರಮಾಳು ಶ್ರೀ ಜನಾರ್ಧನೆ ದೇಗುಲದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್‌, […]

(Yermal) ಎರ್ಮಾಳು : ಎರ್ಮಾಳು ತೆಂಕ-ಬಡಾ ಜೋಡುಕರೆ ಕಂಬಳದ ಕರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗೂ ಕಂಬಳದ ಲೋಗೊ ಬಿಡುಗಡೆಯು ಬುಧವಾರ ಎರ್ಮಾಳು ಬಡಕೊಟ್ಟು ಬಾಕಿಮಾರು ಗದ್ದೆಯಲ್ಲಿ ನೆರವೇರಿತು.

ಬೆಳ್ಮಣ್‌ ವಿಘ್ನೇಶ್‌ ಭಟ್‌ ನೇತೃತ್ವದಲ್ಲಿ, ಎರಮಾಳು ಶ್ರೀ ಜನಾರ್ಧನೆ ದೇಗುಲದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್‌, ಬಾಲಕೃಷ್ಣ ಭಟ್ ರವರು ಪೂಜಾ ವಿಧಿ ವಿಧಾನ ಪೂರೈಸಿದರು.

ಎರ್ಮಾಳು ಬಡಕೊಟ್ಟು ಬಾಕಿಮಾರು ಗದ್ದೆಯಲ್ಲಿ ಗಣ್ಯರಿಂದ ಕಂಬಳ ಗದ್ದೆಗೆ ಗುದ್ದಲಿ ಪೂಜೆ ಹಾಗೂ ಲೋಗೋ ಬಿಡುಗಡೆ ನಡೆಯಿತು.

   ಎರ್ಮಾಳು ತೆಂಕ-ಬಡಾ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಮಾತನಾಡಿ, ಫೆ. 28 ರಂದು ಬಡಕೊಟ್ಟು ಬಾಕ್ಯಾರು ಗದ್ದೆಯಲ್ಲಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳ ಆಯೋಜಿಸಲಾಗಿದೆ. ಈಗಾಗಲೇ  ಸಾರ್ವಜನಿಕರೊಂದಿಗೆ ಮೂರು ಸುತ್ತಿನ ಮಾತುಕತೆ ನಡೆಸಲಾಗಿದೆ. ಇಂದು ಕಂಬಳ ಗದ್ದೆಗೆ ಶಿಲಾನ್ಯಾಸ ನೆರವೇರಲಿದ್ದು, ಧಾರ್ಮಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ.  ಕಂಬಳಕ್ಕೆ ಮಾತ್ರ ಉಪಯೋಗಿಸಬಹುದಾದ 12 ಎಕರೆ ಜಾಗದಲ್ಲಿ ಕಂಬಳ ಆಯೋಜಿಸಲಾಗಿದೆ ಎಂದರು.

  ರಾಜ್ಯ ಕಂಬಳ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಮಾತನಾಡಿ, ಕಂಬಳಕ್ಕೆ ವಿಶೇಷ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಪ್ರತಿ ಕಂಬಳಕ್ಕೆ ಪ್ರಾಯೋಜಕರ ಮೂಲಕ ನಡೆಸಲು ಯೋಜನೆ ರೂಪಿಸಲಾಗಿದೆ. ಸರಕಾರದ ಮಟ್ಟದಲ್ಲಿ ಕಂಬಳಕ್ಕೆ ಬೇಕಾದ ರೂಪು ರೇಷೆಗಳನ್ನು ತಯಾರಿಸಲಾಗುವುದು ಎಂದರು.

  ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಕಂಬಳಕ್ಕೆ ಅದರದೇ ಆದ ಆಸಕ್ತಿ ವರ್ಗವಿದೆ. ಯುವಜನತೆ ಕಂಬಳದತ್ತ ವಾಲುತ್ತಿರುವುದು ಸಂತಸದ ಸಂಗತಿ.  ಕಂಬಳದ ಹಿಂದೆ ಹತ್ತು ಹಲವು ಜನರ ಶ್ರಮವಿದೆ.  ಮುಂದಿನ ದಿನದಲ್ಲಿ ಉಡುಪಿಯಲ್ಲಿಯೂ ಕಂಬಳ ನಡೆಸಲು ಉದ್ದೇಶಿಸಲಾಗಿದೆ ಎಂದರು.

    ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ಮಾತನಾಡಿ, ತುಳುನಾಡಿನ ಕಂಬಳಕ್ಕೆ ಜಾನಪದ ಧಾರ್ಮಿಕ ಸ್ಪರ್ಶವಿದೆ. ಯುವಕರು ಕಂಬಳದ ಕಡೆಗೆ ಆಸಕ್ತಿ ಹೊಂದುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳು ಬೀಡು ಮಾತನಾಡಿ, ಎರ್ಮಾಳು ಕಂಬಳಕ್ಕೆ 600 ವರ್ಷದ ಇತಿಹಾಸವಿದ್ದು ಕಳೆದ ನಾಲ್ಕು ದಶಕಗಳಿಂದ ಎರ್ಮಾಳು ಕಂಬಳ ಸ್ಥಬ್ಧವಾಗಿದ್ದು ಮತ್ತೆ ತೆಂಕ – ಬಡಾ ಜೋಡುಕರೆ ಕಂಬಳ ಫೆ.28 ಕ್ಕೆ ಪ್ರಾರಂಭಗೊಳ್ಳುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದರು.

ಕಂಬಳ ನಿರೂಪಕ ವಿಜಯ ಕುಮಾರ್ ಜೈನ್ ಮಾತನಾಡಿ, ಪ್ರಾಚೀನದಿಂದ ಕಂಬಳ ನಡೆಯುತ್ತಿದ್ದ ಬಗ್ಗೆ ಉಲ್ಲೇಖವಿದೆ. ತುಳುನಾಡಿನ ದೈವಾರಾಧನೆ ಜೊತೆಗೆ ಕಂಬಳಕ್ಕೆ ವಿಶೇಷ ಮಾನ್ಯತೆ ಹೊಂದಿದೆ ಎಂದರು.

    ಈ ಸಂದರ್ಭ ವೆಂಕಟೇಶ ನಾವಡ, ತೆಂಕ ಎರ್ಮಾಳು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುರೇಖಾ, ಮಾಜಿ ಅಧ್ಯಕ್ಷೆ ಕಸ್ತೂರಿ ಪ್ರವೀಣ್‌, ಕಾರ್ಯಾಧ್ಯಕ್ಷ ಪುಚ್ಚೊಟ್ಟು ಬೀಡು ಸೀತಾರಾಮ ಶೆಟ್ಟಿ, ಗೌರವ ಕೋಶಾಧಿಕಾರಿ ಪುಚ್ಚೊಟ್ಟು ಬೀಡು ಚಂದ್ರಹಾಸ ಶೆಟ್ಟಿ, ಪ್ರಧಾನ‌ ಕಾರ್ಯದರ್ಶಿ ಸುರೇಶ್‌ ಜಿ ಶೆಟ್ಟಿ ಎರ್ಮಾಳು, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಬರ್ಪಾಣಿ, ಬಾಲಚಂದ್ರ ಶೆಟ್ಟಿ ಪುಚ್ಚೊಟ್ಟು ಬೀಡು, ಜಗಜೀವನ್ ಚೌಟ, ಕಿಶೋರ್‌ ಶೆಟ್ಟಿ ಪೇಟೆ ಮನೆ, ರವಿ ಭಟ್‌ ವುಡ್‌ ಲೇಂಡ್‌, ವೈ ಶಶಿಧರ ಶೆಟ್ಟಿ, ಭರತ್ ಕುಮಾರ್, ಅಮರನಾಥ ಶೆಟ್ಟಿ, ಸದಾನಂದ ಶೆಟ್ಟಿ ಬೆಳುವಾಯಿ, ಜಾನ್‌ ವಿ ಪೆರ್ನಾಂಡೀಸ್‌, ಶರೀಫ್‌ ಜಿನರಾಜ್, ಜಯರಾಜ್ ಎರ್ಮಾಳು, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಸದಾನಂದ ನಾಯ್ಗರು, ನಿತ್ಯಾನಂದ ಶೆಟ್ಟಿ, ಯಶೋಧರ ಶೆಟ್ಟಿ ಬಗ್ಗೇಡಿ ಗುತ್ತು, ಮನೋಜ್‌ ಶೆಟ್ಟಿ, ವಿನಯ ಶೆಟ್ಟಿ, ಗಣೇಶ್‌ ಶೆಟ್ಟಿ ಬರ್ಪಾಣಿ, ಯೂ ಸಿ ಸೇಕಬ್ಬ, ಸಚಿನ್‌ ಆಚಾರ್ಯ, ವಿವಿಧ ಜಾತಿ ಸಂಘಟನೆಗಳ ಪ್ರಮುಖರು, ಎರ್ಮಾಳು ತೆಂಕ-ಬಡಾ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.