• Home  
  • ಎರ್ಮಾಳು ತೆಂಕ: ಸರಕಾರಿ ಜಾಮೀನಿನಲ್ಲಿ ಕಾಮಗಾರಿ, ತಹಸಿಲ್ದಾರ್ ತಡೆ (Yermalu Tenka: Work under government bail, Tehsildar blocked)
- PROBLEMS

ಎರ್ಮಾಳು ತೆಂಕ: ಸರಕಾರಿ ಜಾಮೀನಿನಲ್ಲಿ ಕಾಮಗಾರಿ, ತಹಸಿಲ್ದಾರ್ ತಡೆ (Yermalu Tenka: Work under government bail, Tehsildar blocked)

Share: ಎರ್ಮಾಳು ತೆಂಕ: ಸರಕಾರಿ ಜಾಮೀನಿನಲ್ಲಿ ಕಾಮಗಾರಿ, ತಹಸಿಲ್ದಾರ್ ತಡೆ. (Thenka Yermal) ತೆಂಕ ಎರ್ಮಾಳು: ಎರ್ಮಾಳು ತೆಂಕ ಸಮುದ್ರ ಕಿನಾರೆಯಲ್ಲಿ ಆಕ್ರಮ ಚರಂಡಿ ನಿರ್ಮಾಣ ಮಾಡುತ್ತಿದ್ದ ರೆಸಾರ್ಟ್ ನವರ ಕಾಮಗಾರಿಯನ್ನು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ನಿಲ್ಲಿಸಿದ್ದಾರೆ.  ಎರ್ಮಾಳು ತೆಂಕದಲ್ಲಿ ಕಾರ್ಯಾಚರಿಸುತ್ತಿರುವ ರೆಸಾರ್ಟ್ ಮಾಲೀಕರು ಸರ್ಕಾರಿ ಜಾಗದಲ್ಲಿರುವ ಪರಂಬೋಗು ತೋಡನ್ನು ಅಗಲೀಕರಣಗೊಳಿಸುವ ಕಾಮಗಾರಿ ನಡೆಸುತ್ತಿದ್ದರು. ಸ್ಥಳೀಯ ಗ್ರಾಮಸ್ಥರು ಈ ಕಾಮಗಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಅವರ ಯಾವುದೇ ಮಾತನ್ನು ಕೇಳದೆ ರೆಸಾರ್ಟ್ ಮಾಲೀಕರು […]

ಎರ್ಮಾಳು ತೆಂಕ: ಸರಕಾರಿ ಜಾಮೀನಿನಲ್ಲಿ ಕಾಮಗಾರಿ, ತಹಸಿಲ್ದಾರ್ ತಡೆ.

(Thenka Yermal) ತೆಂಕ ಎರ್ಮಾಳು: ಎರ್ಮಾಳು ತೆಂಕ ಸಮುದ್ರ ಕಿನಾರೆಯಲ್ಲಿ ಆಕ್ರಮ ಚರಂಡಿ ನಿರ್ಮಾಣ ಮಾಡುತ್ತಿದ್ದ ರೆಸಾರ್ಟ್ ನವರ ಕಾಮಗಾರಿಯನ್ನು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ನಿಲ್ಲಿಸಿದ್ದಾರೆ.

 ಎರ್ಮಾಳು ತೆಂಕದಲ್ಲಿ ಕಾರ್ಯಾಚರಿಸುತ್ತಿರುವ ರೆಸಾರ್ಟ್ ಮಾಲೀಕರು ಸರ್ಕಾರಿ ಜಾಗದಲ್ಲಿರುವ ಪರಂಬೋಗು ತೋಡನ್ನು ಅಗಲೀಕರಣಗೊಳಿಸುವ ಕಾಮಗಾರಿ ನಡೆಸುತ್ತಿದ್ದರು. ಸ್ಥಳೀಯ ಗ್ರಾಮಸ್ಥರು ಈ ಕಾಮಗಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಅವರ ಯಾವುದೇ ಮಾತನ್ನು ಕೇಳದೆ ರೆಸಾರ್ಟ್ ಮಾಲೀಕರು ಕಾಮಗಾರಿ ಮುಂದುವರಿಸಿದ್ದರು. ಈ ಬಗ್ಗೆ ತೆಂಕ ಗ್ರಾಮ ಪಂಚಾಯತಿಗೆ ಮತ್ತು ಕಾಪು ತಹಸೀಲ್ದಾರ್ ಅವರಿಗೆ ದೂರು ನೀಡಲಾಗಿತ್ತು.

 ಘಟನಾ ಸ್ಥಳಕ್ಕೆ ಕಾಪು ತಹಸೀಲ್ದಾರ್ ಡಾ. ಪ್ರತಿಭಾ ರವರು ಗುರುವಾರ ಬೆಳಿಗ್ಗೆ ಆಗಮಿಸಿ,  ಸ್ಥಳೀಯರಿಂದ ಮತ್ತು ರಿಸಾರ್ಟ್‌ ಮಾಲೀಕರ ಮಾತನ್ನು ಸಾವಕಾಶವಾಗಿ ಆಲಿಸಿದರು. ಗ್ರಾಮಸ್ಥರ ಹಾಗೂ ರೆಸಾರ್ಟ್‌ನವರ  ಮಾತನ್ನು ಆಲಿಸಿದ ತಹಸಿಲ್ದಾರ್, ಯಾವುದೇ ಕಾರಣಕ್ಕೂ ಸರಕಾರಿ ಜಾಗದಲ್ಲಿ ಖಾಸಗಿಯವರು ಕಾಮಗಾರಿ ಮಾಡಕೂಡದು. ಏನಿದ್ದರೂ ಸರ್ಕಾರದ ಆದೇಶದಂತೆ ನಡೆಯಬೇಕು. ಈಗಾಗಲೇ ಗ್ರಾಮ ಪಂಚಾಯತ್ ಈ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಆ ಕಾರಣದಿಂದ  ಎಲ್ಲಿ ಕಾಮಗಾರಿ ನಡೆದಿದೆಯೋ ಅದನ್ನು ತುರ್ತು ನಿಲ್ಲಿಸಬೇಕು. ಆದೇಶವನ್ನು ಧಿಕ್ಕರಿಸಿ ಕಾಮಗಾರಿ ಮುಂದುವರಿಸಿದರೆ, ಕಾನೂನು ಕ್ರಮ ಕೈಗೊಳ್ಳುವಂತೆ ಕಂದಾಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಆದೇಶ ನೀಡಿದ್ದಾರೆ.

ಈ ಸಂದರ್ಭ ಲೀಲಾಧರ ಸಾಲ್ಯಾನ್‌, ಯತೀಶ್‌ ಸುವರ್ಣ, ಅಶೋಕ್‌, ಸುಶಾಂತ್‌ ಬಂಗೇರಾ, ರಮೇಶ್‌, ಶಂಕರ ಪೂಜಾರಿ, ಆರ್‌ಐ ಇಜಾಜ್‌ ಖಾದಿರ್‌, ಗ್ರಾಮ ಆಡಳಿತ ಅಧಿಕಾರಿ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ  ಮತ್ತು ಘಟನಾ ಸ್ಥಳದಲ್ಲಿದ್ದು ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು..

Leave a comment

Your email address will not be published. Required fields are marked *

eMedia Kannada  @2025. All Rights Reserved.