• Home  
  • ಎರ್ಮಾಳು : ಬಡಗೊಟ್ಟು ಬಾಕಿಮಾರು ಗದ್ದೆಯಲ್ಲಿ ಕಂಡಡೊಂಜಿ ದಿನ (Yermal: The day of the Badagottu  Bakimaru “Kandodonji dina”)
- fastival - Mansoon - ಕ್ರೀಡೆ

ಎರ್ಮಾಳು : ಬಡಗೊಟ್ಟು ಬಾಕಿಮಾರು ಗದ್ದೆಯಲ್ಲಿ ಕಂಡಡೊಂಜಿ ದಿನ (Yermal: The day of the Badagottu  Bakimaru “Kandodonji dina”)

Share: ಎರ್ಮಾಳು : ಬಡಗೊಟ್ಟು ಬಾಕಿಮಾರು ಗದ್ದೆಯಲ್ಲಿ ಕಂಡಡೊಂಜಿ ದಿನ  (Yermal) ಎರ್ಮಾಳು : ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆ, ಬಿಲ್ಲವರ ಯೂನಿಯನ್‌, ಬೈದಶ್ರೀ ಮಹಿಳಾ ಮಂಡಳಿ, ಎರ್ಮಾಳು ಬಡಾ ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ಎರ್ಮಾಳು ಕುದ್ರೊಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ರಸ್ತೆಯ ಪಕ್ಕದಲ್ಲಿರುವ ಬಡಗೊಟ್ಟು ಬಾಕಿಮಾರು ಗದ್ದೆಯಲ್ಲಿ ರವಿವಾರ ಕಂಡಡೊಂಜಿ ದಿನ ಕಾರ್ಯಕ್ರಮ ಜರಗಿತು.  ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆ, ಎರ್ಮಾಳು ಬಡಾ ಇದರ ಅಧ್ಯಕ್ಷರಾದ ಸತೀಶ್ ಪೂಜಾರಿ ಮೂಡಬೆಟ್ಟು ಅಧ್ಯಕ್ಷತೆ […]

 (Yermal) ಎರ್ಮಾಳು : ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆ, ಬಿಲ್ಲವರ ಯೂನಿಯನ್‌, ಬೈದಶ್ರೀ ಮಹಿಳಾ ಮಂಡಳಿ, ಎರ್ಮಾಳು ಬಡಾ ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ಎರ್ಮಾಳು ಕುದ್ರೊಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ರಸ್ತೆಯ ಪಕ್ಕದಲ್ಲಿರುವ ಬಡಗೊಟ್ಟು ಬಾಕಿಮಾರು ಗದ್ದೆಯಲ್ಲಿ ರವಿವಾರ ಕಂಡಡೊಂಜಿ ದಿನ ಕಾರ್ಯಕ್ರಮ ಜರಗಿತು.

 ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆ, ಎರ್ಮಾಳು ಬಡಾ ಇದರ ಅಧ್ಯಕ್ಷರಾದ ಸತೀಶ್ ಪೂಜಾರಿ ಮೂಡಬೆಟ್ಟು ಅಧ್ಯಕ್ಷತೆ ವಹಿಸಿದ್ದರು.

ಕುದ್ರೊಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಪ್ರಧಾನ ಅರ್ಚಕ ಸದಾನಂದ ನಾಯ್ಗರುರವರು ಕೆಸರು ಗದ್ದೆಗೆ ಹಾಲೆರೆಯುವ ಮೂಲಕ ಕಂಡಡೊಂಜಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗ್ರಾಮದ ಹಾಗೂ ಪರಿಸರದ ಗ್ರಾಮದ 200ಕ್ಕೂ ಅಧಿಕ ಜನರು ಕ್ರೀಡಾ ಕೂಟದಲ್ಲಿ ಭಾಗವಸಿದ್ದರು.

ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ, ವಾಲಿಬಾಲ್‌, ತ್ರೋಬಾಲ್, ಒಂಟಿಕಾಲಿನ ಓಟ ಸಹಿತ ಹತ್ತು ಹಲವು ಕ್ರೋಡೆಗಳನ್ನು ಮಹಿಳೆಯರು, ಪುರುಷರು ಮತ್ತು ಮಕ್ಕಳಿಗಾಗಿ ಆಯೋಜಿಸಲಾಗಿತ್ತು.

ಈ ಸಂದರ್ಭ ಕುದ್ರೊಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಸುಖೇಶ್ ಕುಮಾರ್, ಕಾರ್ಯದರ್ಶಿ ರಮೇಶ್ ಅಂಚನ್, ಉದ್ಯಮಿ ಕರುಣಾಕರ ಕೋಟ್ಯಾನ್, ವಸಂತ ದೇಜಾಡಿ, ಎರ್ಮಾಳು ಶ್ರೀ ನಂದಿಕೇಶ್ವರ ದೇವಸ್ಥಾನದ ಅರ್ಚಕರಾದ ಬಾಲಕೃಷ್ಣ ಭಟ್, ಬೈದಶ್ರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸಬಿತ ಸೋಮನಾಥ, ಸಮಾಜ ಸೇವಕ  ನಿತ್ಯಾನಂದ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.