• Home  
  •   ಎರ್ಮಾಳು ರಾಷ್ಟ್ರೀಯ ಹೆದ್ದಾರಿ  66ರ ಪಕ್ಕದಲ್ಲಿ ಜೇಡಿಮಣ್ಣು ಸುರಿದ ಹೆದ್ದಾರಿ ಗುತ್ತಿಗೆದಾರ : ಅಪಘಾತಕ್ಕೆ ಆಹ್ವಾನ (Highway contractor invites accident by pouring clay next to National Highway 66 in Yermal)
- PROBLEMS

  ಎರ್ಮಾಳು ರಾಷ್ಟ್ರೀಯ ಹೆದ್ದಾರಿ  66ರ ಪಕ್ಕದಲ್ಲಿ ಜೇಡಿಮಣ್ಣು ಸುರಿದ ಹೆದ್ದಾರಿ ಗುತ್ತಿಗೆದಾರ : ಅಪಘಾತಕ್ಕೆ ಆಹ್ವಾನ (Highway contractor invites accident by pouring clay next to National Highway 66 in Yermal)

Share:   ಎರ್ಮಾಳು ರಾಷ್ಟ್ರೀಯ ಹೆದ್ದಾರಿ  66ರ ಪಕ್ಕದಲ್ಲಿ ಜೇಡಿಮಣ್ಣು ಸುರಿದ ಹೆದ್ದಾರಿ ಗುತ್ತಿಗೆದಾರ : ಅಪಘಾತಕ್ಕೆ ಆಹ್ವಾನ (Yermal)ಎರ್ಮಾಳು: ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರ ಕಲ್ಯಾಣಿ ಹೊಟೇಲು ಎದುರು ಬದಿಯಿಂದ ಇಕ್ಕಡೆಡೆಗಳಲ್ಲಿ ಸುಮಾರು 2 ಕಿ.ಮೀ ದೂರದವರೆಗೆ ಹೆದ್ದಾರಿ ಇಲಾಖಾ ಗುತ್ತಿಗೆದಾರ ಜೇಡಿ ಮಣ್ಣು ಮಿಶ್ರಿತ ಕೆಂಪು ಮಣ್ಣನ್ನು ಸುರಿದಿದ್ದು, ಇದರಿಂದ ಸ್ಥಳೀಯ ರಿಕ್ಷಾ ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ.  ಇತ್ತೀಚೆಗಷ್ಟೇ ರಾಹೆ ೬೬ರ ಡಾಮರೀಕರಣ ಪೂರ್ಣಗೊಂಡಿದೆ. ಹೆದ್ದಾರಿಯ ಎರಡು ಕಡೆಯಲ್ಲಿಯೂ ಎತ್ತರದ ದಂಡೆ […]

(Yermal)ಎರ್ಮಾಳು: ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರ ಕಲ್ಯಾಣಿ ಹೊಟೇಲು ಎದುರು ಬದಿಯಿಂದ ಇಕ್ಕಡೆಡೆಗಳಲ್ಲಿ ಸುಮಾರು 2 ಕಿ.ಮೀ ದೂರದವರೆಗೆ ಹೆದ್ದಾರಿ ಇಲಾಖಾ ಗುತ್ತಿಗೆದಾರ ಜೇಡಿ ಮಣ್ಣು ಮಿಶ್ರಿತ ಕೆಂಪು ಮಣ್ಣನ್ನು ಸುರಿದಿದ್ದು, ಇದರಿಂದ ಸ್ಥಳೀಯ ರಿಕ್ಷಾ ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ.

 ಇತ್ತೀಚೆಗಷ್ಟೇ ರಾಹೆ ೬೬ರ ಡಾಮರೀಕರಣ ಪೂರ್ಣಗೊಂಡಿದೆ. ಹೆದ್ದಾರಿಯ ಎರಡು ಕಡೆಯಲ್ಲಿಯೂ ಎತ್ತರದ ದಂಡೆ ನಿರ್ಮಾಣ ಆಗಿದ್ದು, ಅದಕ್ಕೆ ಮಣ್ಣು ಸುರಿಯಲಾಗಿದೆ.

ಪ್ರಸ್ತುತ ಗುತ್ತಿಗೆದಾರ ಸುರಿದ ಮಣ್ಣು ಜೇಡಿ ಮಿಶ್ರಿತವಾಗಿದ್ದು, ಕರಾವಳಿಯಲ್ಲಿ ಕೆಲ ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಅದು ಕೆಸರುಮಯವಾಗಿ ಜಾರುತ್ತಿದೆ.

ಇದರಿಂದ 10 ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲು ಮುರಿತಕ್ಕೆ ಒಳಪಟ್ಟಿದ್ದಾರೆ. ಈ ಸ್ಥಳಗಳಲ್ಲಿ ನಡೆಯಲೂ ಆಗದ ಪರಿಸ್ಥಿತಿ ನೆಲೆಸಿದೆ. ರಿಕ್ಷಾ ಚಾಲಕರಂತೂ ಹೆಚ್ಚಿನ ಸಮಸ್ಯೆಗೆ ಒಳಗಾಗಿದ್ದಾರೆ.

 ಈ ಬಗ್ಗೆ ಹೆದ್ದಾರಿ ಗುತ್ತಿಗೆದಾರರಿಗೆ ಮಾಹಿತಿ ನೀಡಲಾಗಿದೆ ಅದರೆ, ಅವರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

 ಶೀಘ್ರವಾಗಿ ಜೇಡಿ ಮಿಶ್ರಿತ ಮಣ್ಣನ್ನು ತೆರವು ಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.