• Home  
  • ಎರ್ಮಾಳು : ಶ್ರೀ ನಿಧಿ ಮಹಿಳಾ ಮಂಡಲದ   ವತಿಯಿಂದ ನಡೆದ ಆಟಿಡೊಂಜಿ ದಿನ( Yermalu: “Atidonji Dina” organized by Shree Nidhi Mahila Mandal)
- health - Mansoon - social service

ಎರ್ಮಾಳು : ಶ್ರೀ ನಿಧಿ ಮಹಿಳಾ ಮಂಡಲದ   ವತಿಯಿಂದ ನಡೆದ ಆಟಿಡೊಂಜಿ ದಿನ( Yermalu: “Atidonji Dina” organized by Shree Nidhi Mahila Mandal)

Share: ಎರ್ಮಾಳು : ಶ್ರೀ ನಿಧಿ ಮಹಿಳಾ ಮಂಡಲದ  ವತಿಯಿಂದ ನಡೆದ ಆಟಿಡೊಂಜಿ ದಿನ  (Yermalu) ಎರ್ಮಾಳು: ಪಡುಬಿದ್ರಿ : ನಮ್ಮ ಹಿರಿಯರು ಹಾಕಿ ಕೊಟ್ಟ ಆಹಾರ ಪದ್ಧತಿಯನ್ನು ಅನುಸರಿಸಿ ನಾವೂ ಆರೋಗ್ಯವಂತರಾಗಿರಲು ಆಟಿಡೊಂಜಿ ದಿನ ಕಾರ್ಯಕ್ರಮವು ಪರಿಣಾಮಕಾರಿಯಾಗಿದ್ದು, ಔಷಧೀಯ ಗುಣವುಳ್ಳ ಆಹಾರ ಖಾದ್ಯಗಳ ಸೇವನೆಯ ಅಗತ್ಯವನ್ನು ತಿಳಿಯುವಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ಇಂದಿನ ಸಮಾಜದ ಅಗತ್ಯತೆಯಾಗಿದೆ ಎಂದು ಉಡುಪಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಎರ್ಮಾಳು ಶೀಲಾ ಕೆ. ಶೆಟ್ಟಿ ಹೇಳಿದರು. ಅವರು ಶನಿವಾರ […]

 (Yermalu) ಎರ್ಮಾಳು: ಪಡುಬಿದ್ರಿ : ನಮ್ಮ ಹಿರಿಯರು ಹಾಕಿ ಕೊಟ್ಟ ಆಹಾರ ಪದ್ಧತಿಯನ್ನು ಅನುಸರಿಸಿ ನಾವೂ ಆರೋಗ್ಯವಂತರಾಗಿರಲು ಆಟಿಡೊಂಜಿ ದಿನ ಕಾರ್ಯಕ್ರಮವು ಪರಿಣಾಮಕಾರಿಯಾಗಿದ್ದು, ಔಷಧೀಯ ಗುಣವುಳ್ಳ ಆಹಾರ ಖಾದ್ಯಗಳ ಸೇವನೆಯ ಅಗತ್ಯವನ್ನು ತಿಳಿಯುವಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ಇಂದಿನ ಸಮಾಜದ ಅಗತ್ಯತೆಯಾಗಿದೆ ಎಂದು ಉಡುಪಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಎರ್ಮಾಳು ಶೀಲಾ ಕೆ. ಶೆಟ್ಟಿ ಹೇಳಿದರು.

ಅವರು ಶನಿವಾರ ಎರ್ಮಾಳು ಶ್ರೀ ನಿಧಿ ಮಹಿಳಾ ಮಂಡಲದ ವತಿಯಿಂದ ನಡೆದ ಆಟಿಡೊಂಜಿ ದಿನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಪಾರಂಪರಿಕ ಚೆನ್ನೆಮಣೆ ಆಟದ ಮೂಲಕ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ಇನ್ನಂಜೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಉದ್ಘಾಟಿಸಿದರು.

  ಎರ್ಮಾಳು ಶ್ರೀ ನಿಧಿ ಮಹಿಳಾ ಮಂಡಲದ ಅಧ್ಯಕ್ಷೆ ರೇಖಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

  ಕೋಶಾಧಿಕಾರಿ ವಿಮಲಾ ಕೆ. ಸಾಲಿಯಾನ್ ವೇದಿಕೆಯಲ್ಲಿದ್ದರು.

ಎರ್ಮಾಳು ಶ್ರೀ ನಿಧಿ ಮಹಿಳಾ ಮಂಡಲದ ಅಧ್ಯಕ್ಷೆ ರೇಖಾ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಅಮಣಿ ಕುಂದರ್ ವಂದಿಸಿದರು. ಮಾಜಿ ಅಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ ನಿರೂಪಿಸಿದರು.

ಸುಮಾರು 35 ವಿವಿಧ ಬಗೆಯ ಆಟಿ ಆಹಾರ ಖಾದ್ಯ ಗಳನ್ನು ಅತಿಥಿಗಳಿಗೆ ಉಣಬಡಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.