ಪಡುಬಿದ್ರಿ : ನೀರು ತುಂಬಿದ್ದ ಗದ್ದೆಯ ನೀರಿಗೆ ಬಿದ್ದು ಮದ್ಯವಯಸ್ಕ ಮೃತ್ಯು
(Padubidri) ಪಡುಬಿದ್ರಿ : ಕೆಲಸಕ್ಕೆಂದು ತೆರಳಿದ್ದ ಮದ್ಯವಯಸ್ಕರೋರ್ವರು ಪಡುಬಿದ್ರಿಯ ಕಲ್ಲಟ್ಟೆ ಬ್ರಿಡ್ಜ್ ಬಳಿ ಇರುವ ನೀರು ತುಂಬಿದ ಗದ್ದೆಯ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಚಂದ್ರಶೇಖರ್(52) ರವರು ಜು.17ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೋದವರು ವಾಪಾಸು ಮನೆಗೆ ಬಾರದೆ ಇದ್ದು, ಜು. 18 ರ ರಾತ್ರಿ ಪಡುಬಿದ್ರಿಯ ಕಲ್ಲಟ್ಟೆ ಬ್ರಿಡ್ಜ್ ಬಳಿ ಇರುವ ನೀರು ತುಂಬಿದ ಗದ್ದೆಯ ನೀರಿನಲ್ಲಿ ಮೃತದೇಹ ಪತ್ತೆಯಾಗಿದೆ.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಗದ್ದೆಯ ಬದಿಯಲ್ಲಿ ರಸ್ತೆ ದಾಟುತ್ತಿರುವ ಸಮಯದಲ್ಲಿ ಆಕಸ್ಮಿಕವಾಗಿ ಗದ್ದೆಯ ನೀರಿಗೆ ಬಿದ್ದು ಮೃತಪಟ್ಟಿರ ಬೇಕೆಂಬ ಸಂಶಯ ವ್ಯಕ್ತವಾಗಿದೆ.
ಮೃತರ ಪತ್ನಿ ದಿವ್ಯಾರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

