• Home  
  • ಎಲ್ಲೂರು ಅದಾನಿ ಪವರ್ ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭದ್ರತಾ ಸಿಬ್ಬಂದಿಗಳಿಂದ ಸತ್ಯಾಗ್ರಹ: ಒಪ್ಪಿದ ಕಂಪೆನಿ (yelluru ADANI Power Project: Security Guads Strike)
- PROBLEMS

ಎಲ್ಲೂರು ಅದಾನಿ ಪವರ್ ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭದ್ರತಾ ಸಿಬ್ಬಂದಿಗಳಿಂದ ಸತ್ಯಾಗ್ರಹ: ಒಪ್ಪಿದ ಕಂಪೆನಿ (yelluru ADANI Power Project: Security Guads Strike)

Share: ಎಲ್ಲೂರು ಅದಾನಿ ಪವರ್ ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭದ್ರತಾ ಸಿಬ್ಬಂದಿಗಳಿಂದ ಸತ್ಯಾಗ್ರಹ: ಒಪ್ಪಿದ ಕಂಪೆನಿ (Yelluru)ಎಲ್ಲೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅದಾನಿ ಪವರ್ ಕಂಪನಿಯ ಓರ್ವ ಭದ್ರತಾ ಸಿಬ್ಬಂದಿಯ ಉಪವಾಸ ಸತ್ಯಾಗ್ರಹ ಹಾಗೂ ಇತರ ಸಿಬ್ಬಂದಿಗಳ ಬೆಂಬಲದೊಂದಿಗೆ ಬುಧವಾರ ನಡೆದ ಅನಿರ್ಧಿಷ್ಟಾವಧಿಯ ಸತ್ಯಾಗ್ರಹ ಕಂಪೆನಿಯು ವೇತನ ಹೆಚ್ಚಳಕ್ಕೆ  ಒಪ್ಪಿದ್ದು, ಈ ಮೂಲಕ ಸತ್ಯಾಗ್ರಹ ವಾಪಾಸು ಪಡೆದುಕೊಂಡಿದೆ. ಅದಾನಿ ಪವರ್ ಕಂಪನಿಯಲ್ಲಿ ಚೆನ್ನೈ ಮೂಲದ ಗಾರ್ಡಿಯನ್ ಸೆಕ್ಯೂರಿಟಿ ಬ್ಯೂರೋ ಎಂಬ ಕಂಪೆನಿ ಅಧೀನ […]

ಎಲ್ಲೂರು ಅದಾನಿ ಪವರ್ ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭದ್ರತಾ ಸಿಬ್ಬಂದಿಗಳಿಂದ ಸತ್ಯಾಗ್ರಹ: ಒಪ್ಪಿದ ಕಂಪೆನಿ

(Yelluru)ಎಲ್ಲೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅದಾನಿ ಪವರ್ ಕಂಪನಿಯ ಓರ್ವ ಭದ್ರತಾ ಸಿಬ್ಬಂದಿಯ ಉಪವಾಸ ಸತ್ಯಾಗ್ರಹ ಹಾಗೂ ಇತರ ಸಿಬ್ಬಂದಿಗಳ ಬೆಂಬಲದೊಂದಿಗೆ ಬುಧವಾರ ನಡೆದ ಅನಿರ್ಧಿಷ್ಟಾವಧಿಯ ಸತ್ಯಾಗ್ರಹ ಕಂಪೆನಿಯು ವೇತನ ಹೆಚ್ಚಳಕ್ಕೆ  ಒಪ್ಪಿದ್ದು, ಈ ಮೂಲಕ ಸತ್ಯಾಗ್ರಹ ವಾಪಾಸು ಪಡೆದುಕೊಂಡಿದೆ.

ಅದಾನಿ ಪವರ್ ಕಂಪನಿಯಲ್ಲಿ ಚೆನ್ನೈ ಮೂಲದ ಗಾರ್ಡಿಯನ್ ಸೆಕ್ಯೂರಿಟಿ ಬ್ಯೂರೋ ಎಂಬ ಕಂಪೆನಿ ಅಧೀನ ಗುತ್ತಿಗೆ ಕಾರ್ಮಿಕರಾಗಿ ೧೯ ವರ್ಷಗಳಿಂದ ದುಡಿಯುತ್ತಿರುವ ಸುಮಾರು ೭೮ ಭದ್ರತಾ ಸಿಬ್ಬಂದಿಗಳು ಶಾಂತಿಯುತ ಹೋರಾಟವನ್ನು ಕಂಪೆನಿಯ ಮುಂಭಾಗದಲ್ಲಿ ಆರಂಭಿಸಿದ್ದರು.

ವೇತನ ಹೆಚ್ಚಳ, ತಮ್ಮ ತುಟ್ಟಿಭತ್ತೆಯನ್ನು ಶೇ. ೫ರಷ್ಟು ಏರಿಸಲು, ಸ್ಥಳೀಯ ಕಾರ್ಮಿಕ ವಿರೋಧಿ ಧೋರಣೆಯನ್ನು ಕೈಬಿಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕಂಪೆನಿಯ ಯಾವುದೇ ಕೆಲಸ ಕಾರ್ಯಗಳಿಗೆ ಧಕ್ಕೆಯಾಗದಂತೆ ಪ್ರತೀಕ್ ಹೆಗ್ಡೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇವರಿಗೆ ಇತರ ಭದ್ರತಾ ಸಿಬ್ಬಂದಿಗಳ ಬಂಬಲ ಸೂಚಿಸಿದ್ದರು.

 ಕಾರ್ಮಿಕ ಮುಖಂಡ ಸುನಿಲ್ ಮಾತನಾಡಿ, ತುಟ್ಟಿಭತ್ತೆ ಜತೆಗೆ ರೂ.೪೦೦ ಸಂಬಳ ಏರಿಕೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಎಪ್ರಿಲ್ ತಿಂಗಳಿಂದ ಗಾರ್ಡಿಯನ್ ಹಾಗೂ ಅದಾನಿ ಕಂಪೆನಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ. ಒಂದೂವರೆ ತಿಂಗಳಾದರೂ ಯಾವುದೇ ಸ್ಪಂದನೆ ದೊರಕಿಲ್ಲ. ಈ ನಿಟ್ಟಿನಲ್ಲಿ ಸತ್ಯಾಗ್ರಹ ಆರಂಭಿಸಿದ್ದೆವು. ಸಂಜೆಯ ವೇಳೆ ಶಾಸಕರ ಮಧ್ಯೆಸ್ಥಿಕೆಯಲ್ಲಿ ಕಂಪೆನಿಯ ವೇತನ ಹೆಚ್ಚಳಕ್ಕೆ ಒಪ್ಪಿದ್ದು, ಇತರ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

 ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಂಜೆಯ ವೇಳೆ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಸೆಕ್ಯೂರಿಟಿ ಎಚ್‌ಓಡಿ ಮನೋಜ್ ಅವರೊಂದಿಗೆ ಸಿಬ್ಬಂದಿಗಳ ಬೇಡಿಕೆಯ ಬಗ್ಗೆ ಚರ್ಚಿಸಿದರು. ಈ ವೇಳೆ ಅದಾನಿ ಪವರ್ ಲಿಮಿಟೆಡ್ ಅಧ್ಯಕ್ಷ ಕಿಶೋರ್ ಆಳ್ವ ಅವರೊಂದಿಗೆ ಮೊಬೈಲ್ ಮೂಲಕ ಸಂಪರ್ಕಿಸಿದ ಶಾಸಕರು ಸಿಬ್ಬಂದಿಗಳ ಬೇಡಿಕೆಯ ಬಗ್ಗೆ ತಿಳಿಸಿದರು. ಇದಕ್ಕೆ ಕಿಶೋರ್ ಆಳ್ವ, ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಒಪ್ಪಿದ್ದು, ಇತರ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದರು.

ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸುನೀಲ್, ಪ್ರತೀಕ್ ಹೆಗ್ಡೆ, ಪ್ರಶಾಂತ್ ಕೆ. ಕರ್ಕೇರ, ದಯಾನಂದ್, ಸುರೇಶ್ ಕುಲಾಲ್, ಸಂತೋಷ್, ಜಯರಾಮ್ ಜೆ., ಪ್ರಶಾಂತ್ ಕೋಟ್ಯಾನ್, ಗಿರೀಶ್ ಸನಿಲ್ ಮತ್ತಿತರರ ಭದ್ರತಾ ಸಿಬ್ಬಂದಿಗಳು ಆದಾನಿ ಪವರ್ ಎದುರಿನ ಈ ಹೋರಾಟದಲ್ಲಿ ಭಾಗಿಗಳಾಗಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.