• Home  
  • ಎ.19 : ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್  ಕಾಪು  ವಲಯ ಸಮಿತಿಯ ರಜತ ಸಂಭ್ರಮ( April 19: Silver Jubilee of Karnataka State Tailors Association Kaup Zone Committee)
- Uncategorised

ಎ.19 : ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್  ಕಾಪು  ವಲಯ ಸಮಿತಿಯ ರಜತ ಸಂಭ್ರಮ( April 19: Silver Jubilee of Karnataka State Tailors Association Kaup Zone Committee)

Share: ಎ.19 : ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್  ಕಾಪು  ವಲಯ ಸಮಿತಿಯ ರಜತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಲಿರುವ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ      (Kaup) ಕಾಪು : ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಕಾಪು ವಲಯ ಸಮಿತಿಯ ರಜತ ಸಂಭ್ರಮ ಎಪ್ರಿಲ್‌ 19 ರ ಭಾನುವಾರ ಕಾಪುವಿನ ಮಹಾದೇವಿ ಪ್ರೌಢಶಾಲೆಯ ಸಭಾಂಗಣದಲ್ಲಿ ಜರಗಲಿದೆ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್  ಉಡುಪಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಕೆ. ಶ್ರೀನಿವಾಸ ಹೇಳಿದರು. […]

   (Kaup) ಕಾಪು : ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಕಾಪು ವಲಯ ಸಮಿತಿಯ ರಜತ ಸಂಭ್ರಮ ಎಪ್ರಿಲ್‌ 19 ರ ಭಾನುವಾರ ಕಾಪುವಿನ ಮಹಾದೇವಿ ಪ್ರೌಢಶಾಲೆಯ ಸಭಾಂಗಣದಲ್ಲಿ ಜರಗಲಿದೆ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್  ಉಡುಪಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಕೆ. ಶ್ರೀನಿವಾಸ ಹೇಳಿದರು.

  ಅವರು ಗುರುವಾರ ಕಾಪು ಪತ್ರಿಕಾಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

   ಕಾರ್ಯಕ್ರಮದ ಅಂಗವಾಗಿ ಎ.19 ರ ಬೆಳಿಗ್ಗೆ ಗಂಟೆ 9ಕ್ಕೆ ಕ್ರೀಡಾಕೂಟವು ಜರಗಲಿದ್ದು, ಕಾಪು ವಲಯದ ಮಾಜಿ ಅಧ್ಯಕ್ಷೆ ಶ್ರೀಮತಿ ಮೋಹಿನಿ ಸುವರ್ಣ ಹಾಗೂ ಸುರೇಖಾ ಶೈಲೇಶ್‌ ಉದ್ಘಾಟಿಸಲಿದ್ದಾರೆ.

  ಅಪರಾಹ್ನ ಗಂಟೆ 3:30ಕ್ಕೆ ಜರಗಲಿರುವ ಸಭಾ ಕಾರ್ಯಕ್ರಮವನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಲಿದ್ದಾರೆ.

   ಕೆ.ಎಸ್‌.ಟಿ.ಎ ರಾಜ್ಯ ಸಮಿತಿ ಮಂಗಳೂರು ರಾಜ್ಯಾಧ್ಯಕ್ಷರಾದ ಸುರೇಶ್ ಸಾಲ್ಯಾನ್ ಗೌರವ ಉಪಸ್ಥಿತರಿರಲಿದ್ದು, ಮುಖ್ಯ ಅತಿಥಿಗಳಾಗಿ ಕೆ.ಎಸ್‌.ಟಿ.ಎ ರಾಜ್ಯ ಸಮಿತಿ ಮಂಗಳೂರು ಉಪಾಧ್ಯಕ್ಷರಾದ ರಾಮಚಂದ್ರ, ಕೋಶಾಧಿಕಾರಿ ಅಬ್ದುಲ್ ಖಾದ‌ರ್, ಕೆ.ಎಸ್.ಟಿ.ಎ ಜಿಲ್ಲಾ ಸಮಿತಿ ಅಧ್ಯಕ್ಷ ದಯಾನಂದ ಕೋಟ್ಯಾನ್, ಕೆ.ಎಸ್.ಟಿ.ಎ ಜಿಲ್ಲಾ ಸಮಿತಿ ಉಡುಪಿ ಪ್ರಧಾನ ಕಾರ್ಯದರ್ಶಿ ಬಿ. ಕೆ ಶ್ರೀನಿವಾಸ್‌, ಕೆ.ಎಸ್‌.ಟಿ.ಎ ವಲಯ ಸಮಿತಿ ಕಾಪು ವಲಯದ ಪ್ರ. ಕಾರ್ಯದರ್ಶಿ ರಮಣಿ ಎಸ್‌. ಆಚಾರ್ಯ, ಕೆ.ಎಸ್‌.ಟಿ.ಎ ಕ್ಷೇತ್ರ ಸಮಿತಿ ಕಾಪು ಅಧ್ಯಕ್ಷೆ ಶ್ರೀಮತಿ ಮೋಹಿನಿ ಕುಂದರ್, ಕೆ.ಎಸ್.ಟಿ.ಎ ವಲಯ ಸಮಿತಿ ಬೆಳ್ಮಣ್ಣು ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಕೆ.ಎಸ್.ಟಿ.ಎ ವಲಯ ಸಮಿತಿ ಕಟಪಾಡಿ ಅಧ್ಯಕ್ಷೆ ಶ್ರೀಮತಿ ಹೇಮಲತಾ ಹೆಗ್ಡೆ, ಕೆ.ಎಸ್.ಟಿ.ಎ ವಲಯ ಸಮಿತಿ ಪಡುಬಿದ್ರಿ ಅಧ್ಯಕ್ಷೆ ಶ್ರೀಮತಿ  ಪುಷ್ಪಲತಾ, ಶ್ರೀ ಹೊಸಮಾರಿಗುಡಿಯ ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಪಾಲನ್, ಲಕ್ಷ್ಮೀಜನಾರ್ದನ ಟೆಕ್ಸ್‌ಟೈಲ್ಸ್, ಕಾಪು ಇದರ ಲಕ್ಷ್ಮೀನಾರಾಯಣ ತಂತ್ರಿ ಉಪಸ್ಥಿತರಿರಲಿದ್ದಾರೆ.

 ಕೆ.ಎಸ್‌.ಟಿ.ಎ ವಲಯ ಸಮಿತಿ ಕಾಪು ಅಧ್ಯಕ್ಷರಾದ ಸುಧಾಕರ ಎಸ್. ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ.

    ಟೈಲ‌ರ್ ವೃತ್ತಿ ಬಾಂಧವರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸ್ವರಂ ಮೆಲೋಡಿಸ್, ಕಾಪು ಇವರಿಂದ ಸಂಗೀತ ರಸಮಂಜರಿ ನಂತರ ಲಕ್ಕಿಡಿಪ್ ಡ್ರಾ, ವಿದ್ಯಾರ್ಥಿವೇತನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಜರಗಲಿದೆ ಎಂದರು.

 ಪತ್ರಿಕಾಗೋಷ್ಠಿಯಲ್ಲಿ ಸುಧಾಕರ ಕೋಟ್ಯಾನ್, ರಮಣಿ ಎಸ್ ಆಚಾರ್ಯ, ಶುಭಕರ, ಮೋಹಿನಿ ಸುವರ್ಣ, ನಾರಾಯಣ ಅಂಚನ್, ಕೃಷ್ಣ ಬಂಗೇರ, ಭಾಸ್ಕರ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.