ಪಡುಬಿದ್ರಿ ದೇಗುಲಕ್ಕೆ ಆಸ್ಪೆನ್ ಇನ್ಫ್ರಾ ಕಂಪನಿಯಿಂದ 25 ಲಕ್ಷರೂ ದೇಣಿಗೆ ಹಸ್ತಾಂತರ.
ಕಂಪನಿ ಮುಖ್ಯಸ್ಥ ಅಶೋಕ್ ಶೆಟ್ಟಿಯವರಿಂದ ಆಡಳಿತ ಮಂಡಳಿಗೆ ಚೆಕ್ ಹಸ್ತಾಂತರ.
(Padubidri) ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಉಪಕ್ರಮಗಳಿಗೆ ಪಡುಬಿದ್ರಿ ಎಸ್ಇಝೆಡ್ ನ ಆಸ್ಪೆನ್ ಇನ್ಫ್ರಾ ಕಂಪೆನಿಯ 25 ಲಕ್ಷ ರೂ. ದೇಣಿಗೆಯನ್ನು ಕಂಪನಿಯ ಮುಖ್ಯಸ್ಥ ಅಶೋಕ್ ಶೆಟ್ಟಿ ಗುರುವಾರ ಹಸ್ತಾಂತರಿಸಿದರು.
ಶ್ರೀ ದೇವರ ಬಾಲಾಲಯದಲ್ಲಿ ರಾಮಚಂದ್ರ ಆಚಾರ್ಯರವರು ಪ್ರಾರ್ಥನೆ ಸಲ್ಲಿಸಿ ಅಶೋಕ್ ಶೆಟ್ಟಿಯವರಿಗೆ ಪ್ರಸಾದ ವಿತರಿಸಿದರು.
ಶ್ರೀ ಸಂದರ್ಭ ದೇವಳದ ಅನುವಂಶಿಕ ಮೊಕ್ತೇಸರ ಭವಾನಿ ಶಂಕರ ಹೆಗ್ಡೆ, ಕಂಪನಿಯ ವ್ಯಾಸ ಆಚಾರ್, ಕೇಶವ ತಂತ್ರಿ, ನವೀನ್ ಚಂದ್ರ ಜೆ. ಶೆಟ್ಟಿ, ಮಾಧವ ಶೆಟ್ಟಿ, ಡಾ. ವೈ. ಎನ್. ಶೆಟ್ಟಿ, ನವೀನ್ ಎನ್. ಶೆಟ್ಟಿ, ಮುರಳಿನಾಥ ಶೆಟ್ಟಿ, ಅನಿಲ್ ಶೆಟ್ಟಿ, ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

