• Home  
  • ಏ. 24: ವಿಟ್ಲ ಗಾರ್ಡನ್ ಅಡಿಟೋರಿಯಂನಲ್ಲಿ ಕು. ವಿದುಷಿ ಸಿಂಚನಲಕ್ಷ್ಮೀ ಕೊಡಂದೂರ್‌ರವರ ಭರತನಾಟ್ಯ ರಂಗ ಪ್ರವೇಶ (Apr. 24: Bharatanatyam Ranga Praveshamby Ms. Vidushi Sinchanalakshmi Kodandur at Vittal Garden Auditorium)
- ಮನೋರಂಜನೆ

ಏ. 24: ವಿಟ್ಲ ಗಾರ್ಡನ್ ಅಡಿಟೋರಿಯಂನಲ್ಲಿ ಕು. ವಿದುಷಿ ಸಿಂಚನಲಕ್ಷ್ಮೀ ಕೊಡಂದೂರ್‌ರವರ ಭರತನಾಟ್ಯ ರಂಗ ಪ್ರವೇಶ (Apr. 24: Bharatanatyam Ranga Praveshamby Ms. Vidushi Sinchanalakshmi Kodandur at Vittal Garden Auditorium)

Share: ಏ. 24: ವಿಟ್ಲ ಗಾರ್ಡನ್ ಅಡಿಟೋರಿಯಂನಲ್ಲಿ ಕು. ವಿದುಷಿ ಸಿಂಚನಲಕ್ಷ್ಮೀ ಕೊಡಂದೂರ್‌ರವರ ಭರತನಾಟ್ಯ ರಂಗ ಪ್ರವೇಶ (Vitļa Pernaje) ವಿಟ್ಲ, ಪೆರ್ನಾಜೆ:  ಏ. 24ರಂದು ವಿಟ್ಲ ಗಾರ್ಡನ್ ಅಡಿಟೋರಿಯಂನಲ್ಲಿ ಕು. ವಿದುಷಿ ಸಿಂಚನಲಕ್ಷ್ಮೀ ಕೊಡಂದೂರ್‌ರವರ ಭರತನಾಟ್ಯ ರಂಗ ಪ್ರವೇಶವು ಸಂಜೆ 5 ಗಂಟೆಗೆ ಗಣ್ಯರ ಸಮ್ಮುಖದಲ್ಲಿ ನೆರವೇರಲಿದೆ.     ಸಿಂಚನಲಕ್ಷ್ಮೀ ಕೊಡಂದೂರ್‌ರವರ ಕಿರು ಪರಿಚಯ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಕರ್ನಾಟಕ ಶಾಸ್ತ್ರೀಯ ಭರತನಾಟ್ಯ ವಿದ್ವತ್ […]

(Vitļa Pernaje) ವಿಟ್ಲ, ಪೆರ್ನಾಜೆ:  ಏ. 24ರಂದು ವಿಟ್ಲ ಗಾರ್ಡನ್ ಅಡಿಟೋರಿಯಂನಲ್ಲಿ ಕು. ವಿದುಷಿ ಸಿಂಚನಲಕ್ಷ್ಮೀ ಕೊಡಂದೂರ್‌ರವರ ಭರತನಾಟ್ಯ ರಂಗ ಪ್ರವೇಶವು ಸಂಜೆ 5 ಗಂಟೆಗೆ ಗಣ್ಯರ ಸಮ್ಮುಖದಲ್ಲಿ ನೆರವೇರಲಿದೆ.  

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಕರ್ನಾಟಕ ಶಾಸ್ತ್ರೀಯ ಭರತನಾಟ್ಯ ವಿದ್ವತ್ ಪರೀಕ್ಷೆಯ ಅಂತಿಮ ವಿಭಾಗದಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

 ನಾಟ್ಯ ವಿದ್ಯಾಲಯ (ರಿ) ಕುಂಬಳೆ ವಿದುಷಿ ಡಾ. ವಿದ್ಯಾ ಲಕ್ಷ್ಮಿ ಇವರ ಶಿಷ್ಯೆ ಹಾಗೂ ವಿಟ್ಲ ಐ ಟಿ ಐ ಸುಪ್ರಜೀತ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ. ರಘುರಾಮ ಶಾಸ್ತ್ರಿ ಹಾಗೂ ಸ್ವರ ಸಿಂಚನ ಸಂಗೀತ ಶಾಲೆಯ ಶಿಕ್ಷಕಿ ಸವಿತಾ ಕೊಡಂದೂರುರವರ ಪುತ್ರಿ.

ಅಣ್ಣ ಡಾ. ಸಚಿನ್ ಸುಬ್ರಮಣ್ಯ ಕೊಡಂದೂರುರವರ ಪ್ರೋತ್ಸಾಹ, ಕುಮಾರ್ ಪೆರ್ನಾಜೆ ಸ್ವರ ಸಿಂಚನ ಕಲಾತಂಡದ ಅರಳು ಪ್ರತಿಭೆಯಾಗಿದ್ದು, ಭರತನಾಟ್ಯ ಸಂಗೀತಕ್ಕೂ ಸೈ ಎನಿಸಿ ತನ್ನ ಕಲಾ ಪ್ರೌಡಿಮೆ ಮೆರೆದಿದ್ದಾರೆ. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ಅಂಡ್ ಟೆಕ್ನಾಲಜಿ ಫೈನಲ್ ಇಯರ್ (BE)Data Science ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

2024ರ ನವರಾತ್ರಿ ಸಂದರ್ಭ ಧರ್ಮಸ್ಥಳದಲ್ಲಿ ಸಂಗೀತ ಕಚೇರಿ, ತೃತೀಯ ವಿಶ್ವ ಹವ್ಯಕ ಸಮ್ಮೇಳನ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನವನ್ನು ನೀಡಿದ್ದಾರೆ.

ಏ. 24ರಂದು ವಿಟ್ಲ ಗಾರ್ಡನ್ ಅಡಿಟೋರಿಯಂನಲ್ಲಿ ವೇದಮೂರ್ತಿ ಶ್ರೀ ಅನಂತನಾರಾಯಣ ಭಟ್ ಪರಕ್ಕಜೆ ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿ (ರಿ) ಸುರತ್ಕಲ್ ಇದರ ನಿರ್ದೇಶಕ ಕರ್ನಾಟಕ ಕಲಾ ಶ್ರೀ ವಿದ್ವಾನ್ ಕೆ ಚಂದ್ರಶೇಖರ್ ನಾವಡ  ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

  ಮೃದಂಗವಾದಕ ಡಾ . ವಿ ಆರ್ ನಾರಾಯಣ್  ಪ್ರಕಾಶ್  ಕಲ್ಲಿಕೋಟೆ, ವಿದ್ವಾನ್ ದೀಪಕ್ ಕುಮಾರ್,  ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ಪುತ್ತೂರು, ಕೆ ಕೃಷ್ಣಯ್ಯ, ವಿಶೇಷ ಆಹ್ವಾನಿತರಾಗಿ ಕಲಾ ನಿರ್ದೇಶಕ ಬರಹಗಾರ ರಾಷ್ಟ್ರ ಪ್ಶಶಸ್ತಿ ವಿಜೇತ ಕುಮಾರ್ ಪೆರ್ನಾಜೆ ಭಾಗವಹಿಸಲಿದ್ದಾರೆ.

 ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ಡಾ. ವಿದ್ಯಾ ಲಕ್ಷ್ಮಿ ಕುಂಬ್ಳೆ, ಹಾಡುಗಾರಿಕೆಯಲ್ಲಿ ವಿದ್ವಾನ್ ಸಿಜು ಕರುಣಾಕರನ್ ಕಣ್ಣೂರ್, ಸಿ ವಸಂತ ಕುಮಾರ ಗೋ ಸಾಡ, ಮೃದಂಗದಲ್ಲಿ ವಿದ್ವಾನ್ ಸುರೇಶ್ ಬಾಬು ಕಣ್ಣೂರ್, ಕೊಳಲು ಶ್ರೀ ರಾಹುಲ್ ಪಯ್ಯನೂರ್, ಫ್ರೀಡಂ ಪ್ಯಾಡ್‌ನಲ್ಲಿ ಪ್ರಭಾಕರ್ ಮಲ್ಲ ಸಾಥ್‌ ನೀಡಲಿದ್ದಾರೆ.

ಮಲ್ಲಿಕಾ ಸಿದ್ದ ಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ ಸವಿತಾ ಕೋಡoದೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    

Leave a comment

Your email address will not be published. Required fields are marked *

eMedia Kannada  @2025. All Rights Reserved.