ಓಂಕಾರ್ ಕಲಾ ಸಂಗಮದಲ್ಲಿ ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ
(Padubidri) ಪಡುಬಿದ್ರಿ : ಪಡುಬಿದ್ರಿ ಓಂಕಾರ ಕಲಾ ಸಂಗಮದ ವತಿಯಿಂದ ಸತತ ಮೂರನೇ ಬಾರಿ ನಡೆಯುವ ಹದಿನೈದು ದಿನಗಳ ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರ ಪಡುಬಿದ್ರಿ ಓಂಕಾರ್ ಕಲಾ ಸಂಗಮದಲ್ಲಿ ನಡೆಯಿತು.
ಬೇಸಿಗೆ ಶಿಬಿರವನ್ನು ಜೆಸಿಐ ಇಂಡಿಯಾ ವಲಯ ತರಬೇತುದಾರೆ ರೇಶ್ಮಾ ಉದಯ ಕುಮಾರ್ ಶೆಟ್ಟಿ ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ಇಂತಹ ಶಿಬಿರಗಳು ವ್ಯಕಿತ್ವ ನಿರ್ಮಾಣ , ನಾಯಕತ್ವ ಗುಣ, ಸ್ನೇಹ ವಲಯ ಹಾಗು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳವಿಕೆ, ಅತ್ಮ ವಿಶ್ವಾಸ ವೃದ್ಧಿ ಇಂತಹ ಗುಣಗಳು ಮಕ್ಕಳಲ್ಲಿ ಬೆಳೆಯಲು ಸಹಕಾರಿ ಅಗುತ್ತದೆ. ಕ್ರಿಯಾಶೀಲತೆಯಿಂದ ಕೂಡಿರಲು ಹಾಗೂ ಅವರ ಪ್ರತಿಭೆ ಹೊರಹೊಮ್ಮಲು ಮಕ್ಕಳಿಗೆ ಶಿಬಿರವು ತುಂಬಾ ಪ್ರಯೋಜನಕಾರಿಯಾಗಿದೆ ಎಂದರು.
ಶಿಬಿರದಲ್ಲಿ 49 ವಿದ್ಯಾರ್ಥಿಗಳು ಭಾಗವಹಿಸಿದರು.
ಜೀ ಕನ್ನಡ ಡ್ರಾಮ ಜೂನಿಯರ್ ಫ್ಯೆನಲಿಸ್ಟ್ ಸಿಂಚನ ಕೋಟೇಶ್ವರ ರವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಓಂಕಾರ ಕಲಾ ಸಂಗಮದ ಪಾಲುದಾರೆ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಜೀ ಕನ್ನಡ ಡ್ರಾಮ ಜೂನಿಯರ್ ಫೈನಲಿಸ್ಟ್ ಸಿಂಚನ ಕೋಟೇಶ್ವರ, ಕಾಪು ವಲಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಪ್ರಧಾನ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಮಲ್ಲಾರ್, ಸಂಸ್ಥೆಯ ಪಾಲುದಾರರಾದ ಉದಯ ಕುಮಾರ್ ಭಟ್, ಅರುಣ್ ಕುಮಾರ್ ಉಪಸ್ಥಿತರಿದ್ದರು..
ಗೀತಾ ಅರುಣ್ ಸ್ವಾಗತಿಸಿದರು. ದೀಪಾಶ್ರೀ ಕರ್ಕೇರ ವಂದಿಸಿದರು. ಕಾರ್ತೀಕ್ ಮುಲ್ಕಿ ನಿರೂಪಿಸಿದರು.

