
ಕಂದಾಯ ಇಲಾಖಾ ನೌಕರರ ಮುಷ್ಕರ: ಸಿಇಟಿ ವಿದ್ಯಾರ್ಥಿಗಳಿಗೆ ತೊಂದರೆ
(Udupi) ಉಡುಪಿ: ಕರ್ನಾಟಕ ರಾಜ್ಯಾದ್ಯಂತ ಕಂದಾಯ ಇಲಾಖಾ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಿರತರಾಗಿದ್ದು, ಇದರಿಂದ ಸಾರ್ವಜನಿಕರ ಮತ್ತು ವಿಶೇಷವಾಗಿ ಸಿಇಟಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.
ಕರ್ನಾಟಕ ರಾಜ್ಯ ದಲ್ಲಿ ಒಂದು ಅಂದಾಜಿನಂತೆ ಸುಮಾರು 4 ಲಕ್ಷ ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು CET ಪರೀಕ್ಷೆ ಬರೆದು ತಮ್ಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕೆಂಬ ಪ್ರಯತ್ನ ಸಾಧನೆ ಮತ್ತು ತಯಾರಿ ನಡೆಸಿದ್ದಾರೆ. ಪರೀಕ್ಷೆಗೆ ಅರ್ಜಿ ನೀಡಲು ಅಗತ್ಯ ದಾಖಲೆ ಗಳಾದ ಜಾತಿ, ಆದಾಯ ಮತ್ತು ಭಾಷಾವಾರು ದೃಡ ಪತ್ರಿಕೆ ಪಡಕೊಳ್ಳುವಲ್ಲಿಕಂದಾಯ ಇಲಾಖಾ ನೌಕರ ಮುಷ್ಕರದಿಂದ ಸಮಸ್ಯೆ ಎದುರಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ದಿನಾಂಕ:22-09-2024 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾ ಭವನ, ಚಿತ್ರದುರ್ಗ ದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು, ಹಾಗೂ ಸರ್ವ ಸದಸ್ಯರ ಒಪ್ಪಿಗೆಯಂತೆ ಸರ್ವಾನುಮತದಿಂದ ದಿನಾಂಕ:26-09-2024 ರಿಂದ 03-10-2024 ರವರೆಗೆ ರಾಜ್ಯಾದ್ಯಂತ ಮುಷ್ಕರ ನಡೆಸಿದ ಕಾರಣ, ದಿನಾಂಕ 03-10-2024 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಭರವಸೆ ನೀಡಿದ್ದಾರೆ.
ಅದರಂತೆ ಆ ದಿನದಿಂದಲೇ ರಾಜ್ಯವ್ಯಾಪಿ ಮುಷ್ಕರ ಹಿಂಪಡೆಯಲಾಗಿತ್ತು. ತದನಂತರ ಸರ್ಕಾರವು ನೌಕರರ ಬೇಡಿಕೆಗಳ ವಿಚಾರವಾಗಿ ಯಾವುದೇ ತೃಪ್ತಿಕರ ಕ್ರಮಗಳನ್ನು ಕೈಗೊಂಡು ಬೇಡಿಕೆಗಳನ್ನು ಈಡೇರಿಸಿಲ್ಲ. ಮುಷ್ಕರದ ನಂತರ ಮುಷ್ಕರದ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿದೆ.
ಕಂದಾಯ ಇಲಾಖಾ ನೌಕರರು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಮುಷ್ಕರವನ್ನು ಅನಿರ್ಧಿಷ್ಟಾವಧಿಗೆ ಎಂದು ತೀರ್ಮಾನಿಸಿದ್ದಾರೆ. ಇದರಿಂದ CET ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅಗತ್ಯ ದಾಖಲೆ ಗಳು ಪಡೆಯುವಲ್ಲಿ ಸಮಸ್ಯೆ ಉಂಟಾಗಿದೆ.
ಸರಕಾರ ಮುಂದೆ ಇಟ್ಟಿರುವ 23 ಬೇಡಿಕೆ ಗಳು ಕೂಡಾ ಸರಕಾರಕ್ಕೆ ಯಾವುದೇ ತೊಂದರೆಯಾಗಲಿ, ನಷ್ಟವಾಗಲಿ ಆಗುವುದಿಲ್ಲ. ಈಗಾಗಲೇ ವೀಕ್ಷಣೆ ಮಾಡಿ ಭರವಸೆ ಈಡೇರಿಸುವ ಬಗ್ಗೆ ಇಷ್ಟು ಸಮಯವಾದರೂ ಕ್ರಮ ಕೈಗೊಳ್ಳದ ಕಾರಣ ಮುಷ್ಕರದ ಅನಿವಾರ್ಯವಾಗಿದೆ ಎನ್ನುತ್ತಾರೆ ಸರಕಾರಿ ನೌಕರರು.
ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರಕಾರ ನಮ್ಮೊಂದಿಗೆ ಸ್ಪಂದಿಸಿ ದರೆ, ಎಲ್ಲವೂ ಸರಿಹೋಗುತ್ತದೆ.
ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮತ್ತು ಸರಕಾರ ಸೂಕ್ತ ವ್ಯವಸ್ಥೆ ಮಾಡಬೇಕಿದೆ.
ಏನೇ ಸಮಸ್ಯೆ ಇದ್ದರೂ, ವಿದ್ಯಾರ್ಥಿಗಳಿಗೆ ತೊಂದರೆ ಆಗದಿರಲಿ ಎಂಬ ಹಾರೈಕೆ.

