• Home  
  • ಮಂಗಳೂರು : ಕುಳಾಯಿ ಇಳಿಜಾರಿನಲ್ಲಿ ನಿಲ್ಲಿಸಿದ್ದ  ಟ್ಯಾಂಕರ್ ಚಲಿಸಿ ಸರಣಿ ಅಪಘಾತ (Mangaluru: Tanker parked on Kulai slope moves, causing series of accidents)
- ಅಪಘಾತ

ಮಂಗಳೂರು : ಕುಳಾಯಿ ಇಳಿಜಾರಿನಲ್ಲಿ ನಿಲ್ಲಿಸಿದ್ದ  ಟ್ಯಾಂಕರ್ ಚಲಿಸಿ ಸರಣಿ ಅಪಘಾತ (Mangaluru: Tanker parked on Kulai slope moves, causing series of accidents)

Share: ಮಂಗಳೂರು : ಕುಳಾಯಿ ಇಳಿಜಾರಿನಲ್ಲಿ ನಿಲ್ಲಿಸಿದ್ದ  ಟ್ಯಾಂಕರ್ ಚಲಿಸಿ ಸರಣಿ ಅಪಘಾತ (Mangaluru) ಮಂಗಳೂರು : ಕುಳಾಯಿ ಇಳಿಜಾರಿನಲ್ಲಿ ನಿಲ್ಲಿಸಲಾದ ಟ್ಯಾಂಕರ್ ಒಂದು ಚಾಲಕ ನಿಲ್ಲದೆ ಚಲಿಸಿ ಸರಣಿ ಅಪಘಾತ ಘಟಸಿದ ಘಟನೆಕುಲಾಯಿ ಜಂಕ್ಷನ್ ನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.  ನಾಗಾಲ್ಯಾಂಡ್ ನೋಂದಣಿ ಹೊಂದಿರುವ ಈ ಟ್ಯಾಂಕರ್ ಹೈಡ್ರೋಜನ್ ಪೆರಾಕ್ಸೈಡ್ ಕೊಂಡೊಯ್ಯಲು ಬಂದಿತು.  ಅಪಘಾತದಲ್ಲಿ ಒಂದು ಸ್ಕೂಟರ್, ಎರಡು ರಿಕ್ಷಾ ಮತ್ತು ಒಂದು ಕಾರು ಜಖಂಗೊಂಡಿದೆ. ಕುಳಾಯಿ ಜಂಕ್ಷನ್ ಟ್ರಾಫಿಕ್ ಸಿಗ್ನಲ್ ಕಂಬ ಧರೆಗೆ ಉರುಳಿದೆ. […]

ಮಂಗಳೂರು : ಕುಳಾಯಿ ಇಳಿಜಾರಿನಲ್ಲಿ ನಿಲ್ಲಿಸಿದ್ದ  ಟ್ಯಾಂಕರ್ ಚಲಿಸಿ ಸರಣಿ ಅಪಘಾತ

(Mangaluru) ಮಂಗಳೂರು : ಕುಳಾಯಿ ಇಳಿಜಾರಿನಲ್ಲಿ ನಿಲ್ಲಿಸಲಾದ ಟ್ಯಾಂಕರ್ ಒಂದು ಚಾಲಕ ನಿಲ್ಲದೆ ಚಲಿಸಿ ಸರಣಿ ಅಪಘಾತ ಘಟಸಿದ ಘಟನೆಕುಲಾಯಿ ಜಂಕ್ಷನ್ ನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

 ನಾಗಾಲ್ಯಾಂಡ್ ನೋಂದಣಿ ಹೊಂದಿರುವ ಈ ಟ್ಯಾಂಕರ್ ಹೈಡ್ರೋಜನ್ ಪೆರಾಕ್ಸೈಡ್ ಕೊಂಡೊಯ್ಯಲು ಬಂದಿತು.

 ಅಪಘಾತದಲ್ಲಿ ಒಂದು ಸ್ಕೂಟರ್, ಎರಡು ರಿಕ್ಷಾ ಮತ್ತು ಒಂದು ಕಾರು ಜಖಂಗೊಂಡಿದೆ.

ಕುಳಾಯಿ ಜಂಕ್ಷನ್ ಟ್ರಾಫಿಕ್ ಸಿಗ್ನಲ್ ಕಂಬ ಧರೆಗೆ ಉರುಳಿದೆ.

 ಎಂ ಆರ್ ಪಿ ಎಲ್ ಒಳ ರಸ್ತೆಯಾದ ವಿದ್ಯಾನಗರ ರಸ್ತೆಯ ಮೇಲಿನಿಂದ ನೇರವಾಗಿ ಹೆದ್ದಾರಿಗೆ ಇಳಿದ ಟ್ಯಾಂಕರ್, ಸಮೀಪದ ರಿಕ್ಷಾ ನಿಲ್ದಾಣಕ್ಕೆ ನುಗ್ಗಿತ್ತಲ್ಲದೆ, ಮನೆಯ ಬಳಿ ನಿಲ್ಲಿಸಿದ್ದ ಕಾರಿಗೆ ಹಾಗೂ ಮನೆಯ ಮಾಡಿಗೆ ಡಿಕ್ಕಿ ಹೊಡೆದು ನಿಂತಿದೆ.

 ಸಮೀಪದಲ್ಲಿ ಹೈ ಟೆನ್ಶನ್ ವಿದ್ಯುತ್ ಸಂಪರ್ಕದ ಬೃಹತ್ ಕಂಬ ಇದ್ದು, ಅದಕ್ಕೆ ಡಿಕ್ಕಿ ಹೊಡೆಯುತ್ತಿದ್ದರೆ, ಭಾರಿ ಪ್ರಮಾಣದ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.  

 ಸಮೀಪದಲ್ಲಿ ವೈದ್ಯರ ಕ್ಲಿನಿಕ್ ಒಂದಿದ್ದು, ರೋಗಿಗಳು ಅಲ್ಲಿಯೇ ಕುಳಿತಿದ್ದರು. ಮುನ್ನುಗ್ಗುತ್ತಿರುವ ಅಯಾಮಕರ್‌ ನೋಡಿ ಅವರು ಸ್ಥಳದಿಂದ ದೂರ ಹೋಗಿದ್ದಾರೆ.

  ರಿಕ್ಷಾ ಚಾಲಕರು ಓಡಿ ಬಂದು ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.