• Home  
  • ಕಂಬಳದಲ್ಲಿ ಗಳಿಸಿದ ಚಿನ್ನದ ಪದಕ ಕಾಪು ಮಾರಿಯಮ್ಮನಿಗೆ ಸಮರ್ಪಿಸಿದ  ಕಂಬಳ ಪ್ರೇಮಿ ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಶೆಟ್ಟಿ(Kambala lover Yermal Puchottu Beedu Balachandra Shetty dedicated the gold medal, he won in Kambala to Kaup Mariyamma)
- ಧಾರ್ಮಿಕ

ಕಂಬಳದಲ್ಲಿ ಗಳಿಸಿದ ಚಿನ್ನದ ಪದಕ ಕಾಪು ಮಾರಿಯಮ್ಮನಿಗೆ ಸಮರ್ಪಿಸಿದ  ಕಂಬಳ ಪ್ರೇಮಿ ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಶೆಟ್ಟಿ(Kambala lover Yermal Puchottu Beedu Balachandra Shetty dedicated the gold medal, he won in Kambala to Kaup Mariyamma)

Share: ಕಂಬಳದಲ್ಲಿ ಗಳಿಸಿದ ಚಿನ್ನದ ಪದಕ ಕಾಪು ಮಾರಿಯಮ್ಮನಿಗೆ ಸಮರ್ಪಿಸಿದ  ಕಂಬಳ ಪ್ರೇಮಿ ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಶೆಟ್ಟಿ   (Kaup) ಕಾಪು: ಪುಣೆಯ ಖ್ಯಾತ ಉದ್ಯಮಿ, ಕಂಬಳ  ಕೋಣಗಳ ಮಾಲೀಕ ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಶೆಟ್ಟಿಯವರು ದಂಪತಿ ಸಮೇತರಾಗಿ ಮಕ್ಕಳೊಂದಿಗೆ ಕಾಪು ಹೊಸ ಮಾರಿಗುಡಿಗೆ ಆಗಮಿಸಿ, ಕಂಬಳ ಕ್ಷೇತ್ರದಲ್ಲಿ ತನ್ನ ಕೋಣಗಳು ಗಳಿಸಿದ ಎರಡು ಚಿನ್ನದ ಪದಕಗಳನ್ನು ಕಾಪು ಮಾರಿಯಮ್ಮನ ಸ್ವರ್ಣ ಗದ್ದುಗೆಗೆ ಸಮರ್ಪಿಸಿದರು. ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಾರಿಯಮ್ಮನ […]

ಕಂಬಳದಲ್ಲಿ ಗಳಿಸಿದ ಚಿನ್ನದ ಪದಕ ಕಾಪು ಮಾರಿಯಮ್ಮನಿಗೆ ಸಮರ್ಪಿಸಿದ  ಕಂಬಳ ಪ್ರೇಮಿ ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಶೆಟ್ಟಿ

  (Kaup) ಕಾಪು: ಪುಣೆಯ ಖ್ಯಾತ ಉದ್ಯಮಿ, ಕಂಬಳ  ಕೋಣಗಳ ಮಾಲೀಕ ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಶೆಟ್ಟಿಯವರು ದಂಪತಿ ಸಮೇತರಾಗಿ ಮಕ್ಕಳೊಂದಿಗೆ ಕಾಪು ಹೊಸ ಮಾರಿಗುಡಿಗೆ ಆಗಮಿಸಿ, ಕಂಬಳ ಕ್ಷೇತ್ರದಲ್ಲಿ ತನ್ನ ಕೋಣಗಳು ಗಳಿಸಿದ ಎರಡು ಚಿನ್ನದ ಪದಕಗಳನ್ನು ಕಾಪು ಮಾರಿಯಮ್ಮನ ಸ್ವರ್ಣ ಗದ್ದುಗೆಗೆ ಸಮರ್ಪಿಸಿದರು.

ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಾರಿಯಮ್ಮನ ದರ್ಶನ ಪಡೆದು ಅಮ್ಮನ ಅನುಗ್ರಹ ಪ್ರಸಾದ ಸ್ವೀಕರಿಸಿದರು.

 ಬಾಲಚಂದ್ರ ಶೆಟ್ಟಿಯವರು ಈಗಾಗಲೇ 5 ಲಕ್ಷ ರೂಪಾಯಿಯನ್ನು ಶಿಲೆಯ ದೇಣಿಗೆಯಾಗಿ ದೇವಳದ ಜಿರ್ಣೋದ್ಧಾರಕ್ಕೆ ನೀಡಿದ್ದು, ಸುಮಾರು 15ಲಕ್ಷ ರೂಪಾಯಿ ಬೆಲೆ ಬಾಳುವ ಮುಖಮಂಟಪದಲ್ಲಿನ ಮತ್ತು ಇತರೆ 27 ಶಿಲಾಮೂರ್ತಿಗಳನ್ನು ಸೇವಾರೂಪದಲ್ಲಿ ನೀಡಿರುತ್ತಾರೆ.

  ಈ ಸಂದರ್ಭದಲ್ಲಿ ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಸಂಚಾಲಕ ರಾಧಾರಮಣ ಶಾಸ್ತ್ರಿ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.