ಕಟಪಾಡಿಯಲ್ಲಿ ಅಭೂತಪೂರ್ವ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ
ಕೃಷ್ಣ– ಶ್ರೀನಿವಾಸ ಬೇರೆಯಲ್ಲ: ಕೃಷ್ಣಾಪುರ ಮಠಧೀಶ ವಿದ್ಯಾಸಾಗರ ತೀರ್ಥ ಸ್ವಾಮೀಜಿ
(Katapadi) ಕಟಪಾಡಿ ತಿರುಪತಿ ತಿರುಮಲ ದೇವಸ್ಥಾನದಿಂದ ಕೆ. ಕೃಷ್ಣಮೋಹನ್‌ಪೈ ಯುಎಸ್ಎ ಹಾಗೂ ಕಟಪಾಡಿ ವಿಜಯಾ ಪೈ ಮತ್ತು ಪುರುಷೋತ್ತಮ ಪೈ ಹಾಗೂ ಕುಟುಂಬಸ್ಥರ ಸಂಕಲ್ಪದಂತೆ ಕಟಪಾಡಿ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶನಿವಾರ ಜರಗಿದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು.
ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಭಾಗವಹಿಸಿದ ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಅವರು ತಮ್ಮ ಆಶೀರ್ವಚನದಲ್ಲಿ ಗುಳ್ಳ ಖ್ಯಾತಿಯ ಕಟಪಾಡಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ಸಂಭ್ರಮವಿದೆ. ಕಲಿಯುಗದ ಅಧಿದೇವ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಾಗಿಯಾಗುವುದೇ ಪುಣ್ಯದ ಕಾರ್ಯ. ಕೃಷ್ಣನೂ ನಮಗೆ ನಿಕಟಪೂರ್ವ ದೇವರು. ಕೃಷ್ಣ ಬೇರೆಯಲ್ಲ ಶ್ರೀನಿವಾಸ ಬೇರೆಯಲ್ಲ. ಭಕ್ತಿಯ ಮೇಲೆ ದೇವರ ಅನುಗ್ರಹವಿದೆ ಎಂದರು.
ಕಟಪಾಡಿ ಪೇಟೆಯಿಂದ ಭವ್ಯ ಮೆರವಣಿಗೆಯ ಮೂಲಕ ಶ್ರೀನಿವಾಸ ದೇವರ ಮೂರ್ತಿಯನ್ನು ಪೂರ್ಣ ಕುಂಭ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.
ತಿರುಮಲ ದೇವಸ್ಥಾನ ಸಮಿತಿಯವರ ಪ್ರಧಾನ ಅರ್ಚಕರಿಂದಲೇ ಕಲ್ಯಾಣೋತ್ಸವದ ಧಾರ್ಮಿಕ ಅನುಷ್ಠಾನಗಳು ಜರಗಿತು.
ಸುಮಾರು 7 ಎಕರೆಗೂ ಅಧಿಕ ವಿಶಾಲವಾದ ಕಟಪಾಡಿ ಎಸ್ ವಿಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಶ್ರೀದೇವರ ವಿವಾಹ ಮಂಟಪ ಭಕ್ತರ ಕಣ್ಮನ ಸೆಳೆಯಿತು. ದ.ಕ. ಮತ್ತು ಉಡುಪಿ ಜಿಲ್ಲೆಗಳ ಸುಮಾರು ಮೂವತ್ತು ಸಾವಿರದಷ್ಟು ಭಕ್ತಾಧಿಗಳು ಭಾಗವಹಿಸಿದ್ದರು. ಬಾಲಕರಿಂದ ವಯೋವೃದ್ಧರವರೆಗೂ ಸುಮಾರು
ಒಂದು ಸಾವಿರ ಸ್ವಯಂ ಸೇವಕರು ಸೇವೆಯನ್ನು ನೀಡಿದರು.
ವೃದ್ಧರು ಹಾಗೂ ವಿಶೇಷ ಚೇತನರಿಗೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಳ್ಳಲು ವಿಶೇಷವಾದ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.
ಈ ಸಂದರ್ಭ ವಿಶೇಷವಾಗಿ ಮುಡಿಪು ಸೇವೆ ಸಲ್ಲಿಸುವವರಿಗೆ ತಿರುಪತಿ ಹುಂಡಿ ವ್ಯವಸ್ಥೆ ಮಾಡಲಾಗಿತ್ತು.
ತಿರುಪತಿಯಿಂದಲೇ ತರಿಸಿಕೊಳ್ಳಲಾದ ವಿಶೇಷ ಲಡ್ಡುಪ್ರಸಾದ ಸಹಿತ ಪ್ರಸಾದ ವಿತರಣೆ- ಪ್ರಸಾದ ಸ್ವೀಕಾರ ಹಾಗೂ ಮಹಾ ಅನ್ನಸಂತರ್ಪಣೆಯು ನೆರವೇರಿತು.
ಸುವ್ಯವಸ್ಥಿತವಾದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಪೋಲಿಸ್ ಬಂದೋಬಸ್ತ್, ಆರೋಗ್ಯ ಇಲಾಖೆ, ಅಗ್ನಿಶಾಮಕದಳ, ಗೃಹ ರಕ್ಷಕದಳದವರು ಸೇವಾನಿರತಾಗಿದ್ದರು.
ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ವಿಜಯ ಪೈ ಮತ್ತು ಪುರುಷೋತ್ತಮ ಪೈ ಕುಟುಂಬಿಕರು, ಶ್ರೀಮತಿ ಮತ್ತು ಶ್ರೀ ಸತ್ಯೇಂದ್ರ ಪೈ ಕುಟುಂಬಿಕರು, ಕೆ ಕೃಷ್ಣಮೋಹನ್ ಪೈ ಯುಎಸ್‌ಎ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಪುರೋಹಿತ್ ಕಾಪು ಕಮಲಾಕ್ಷ ಭಟ್, ವೀಣಾ ಪೈ, ಸುಮಿತ್ರಾ ಕಾಮತ್, ರಾಧಾಕೃಷ್ಣ ಕಾಮತ್, ಶ್ರೇಯಸ್ ಪೈ, ಸುಪ್ರಿತಾ ಪೈ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಮಹೇಶ್ ಎನ್. ಅಂಚನ್, ಪ್ರೇಮ್ ಕುಮಾರ್ ಕಟಪಾಡಿ, ಶಂಕರ್‌ಸಾಲಿಯಾನ್, ಗೀತಾಂಜಲಿ ಎಂ. ಸುವರ್ಣ, ಪ್ರಭಾ ಬಿ. ಶೆಟ್ಟಿ, ನಾಗೇಶ್ ಕಾಮತ್, ಪ್ರಭಾವತಿ ದೇವಾಡಿಗ, ಲಕ್ಷ್ಮೀ, ಆಶಾ ಅಂಚನ್, ಗಣೇಶ್ ಕುಮಾರ್ ಸಂಪಿಗೆನಗರ, ಸುಮಾ ಶೆಟ್ಟಿ, ಗಣೇಶ್ ಕಿಣಿ, ಶ್ರೀಕರ ಅಂಚನ್, ವೆಂಕಟರಮಣ ಭಟ್, ಸುಧಾಕರ್ ಬ್ರಹ್ಮಾವರ, ಯೋಗೀಶ್ ಸುವರ್ಣ, ಜಗದೀಶ್ ಕಾಮತ್, ಕೃಷ್ಣಾನಂದ ಕಾಮತ್, ವಿವಿಧ ಸಂಘ ಸಂಸ್ಥೆಗಳು, ಭಜನಾ ಮಂದಿರಗಳ ಸದಸ್ಯರು ಸೇರಿದಂತೆ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

