• Home  
  • ಕಟಪಾಡಿಯಲ್ಲಿ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿ ಪ್ರದಾನ  ಸಮಾರಂಭ (Karnataka Rajyothsava Child Award Ceremony of State Level children at Katapadi)
- ಕರಾವಳಿ

ಕಟಪಾಡಿಯಲ್ಲಿ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿ ಪ್ರದಾನ  ಸಮಾರಂಭ (Karnataka Rajyothsava Child Award Ceremony of State Level children at Katapadi)

Share: ಕಟಪಾಡಿಯಲ್ಲಿ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿ ಪ್ರದಾನ  ಸಮಾರಂಭ ಮಕ್ಕಳಿಗೆ ಜೀವನ ಶಿಕ್ಷಣ ಕಲಿಸಿ – ಗುರ್ಮೆ ಸುರೇಶ್ ಶೆಟ್ಟಿ (Kaup MLA Gurme Sure Shetty) (katapadi) ಕಟಪಾಡಿ: ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಕೆಲಸಮಾಡಬೇಕು. ಬರೇ ಅಂಕಗಳ ಬೆನ್ನು ಹತ್ತದೆ ಜೀವನ ಶಿಕ್ಷಣ ಕಲಿಸುವ ನಿಟ್ಟಿನಲ್ಲಿ ಮಕ್ಕಳ ಭವಿಷ್ಯವನ್ನು ರೂಪಿಸಲು ನೆರವಾಗಬೇಕು ಎಂದು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದ್ದಾರೆ. ಮಂಗಳೂರು ಇನ್ವೆಂಜರ್ […]

ಕಟಪಾಡಿಯಲ್ಲಿ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿ ಪ್ರದಾನ  ಸಮಾರಂಭ

ಮಕ್ಕಳಿಗೆ ಜೀವನ ಶಿಕ್ಷಣ ಕಲಿಸಿ – ಗುರ್ಮೆ ಸುರೇಶ್ ಶೆಟ್ಟಿ (Kaup MLA Gurme Sure Shetty)

(katapadi) ಕಟಪಾಡಿ: ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಕೆಲಸಮಾಡಬೇಕು. ಬರೇ ಅಂಕಗಳ ಬೆನ್ನು ಹತ್ತದೆ ಜೀವನ ಶಿಕ್ಷಣ ಕಲಿಸುವ ನಿಟ್ಟಿನಲ್ಲಿ ಮಕ್ಕಳ ಭವಿಷ್ಯವನ್ನು ರೂಪಿಸಲು ನೆರವಾಗಬೇಕು ಎಂದು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದ್ದಾರೆ.

ಮಂಗಳೂರು ಇನ್ವೆಂಜರ್ ಫೌಂಡೇಶನ್, ಕಟಪಾಡಿ ಸೃಷ್ಠಿ ಫೌಂಡೇಶನ್,  ಕಟಪಾಡಿ ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲಪ್ರಶಸ್ತಿಗೆ ಪ್ರದಾನ ಸಮಾರಂಭ ಕಟಪಾಡಿಯ ಎಸ್.ವಿ.ಎಸ್.ಬಯಲು ರಂಗಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ವಿವಿದೆಢೆಯ ಮಕ್ಕಳನ್ನು ಗುರುತಿಸಿ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಿ ರಾಜ್ಯಮಟ್ಟದ ಪ್ರಶಸ್ತಿಯ ಗೌರವವನ್ನು ನೀಡುವ ಮೂಲಕ ಮಕ್ಕಳು ರಾಷ್ಟ್ರಮಟ್ಟದ ಸಾಧನೆಗೆ ಮುಂದಡಿಯಿಡುವಂತೆ ಪ್ರೇರಣೆ ನೀಡಿರುವುದು ಸ್ತುತ್ಯರ್ಹವೆನಿಸಿದೆ ಎಂದರು.

 ಇದೇ ಸಂದರ್ಭ ಅಮೆರಿಕಾ ಕಿಶಾ ಪೈ, ಮುಂಬೈಯ ಸಾಕ್ಷಿ ಪ್ರಕಾಶ್ ಪುತ್ರನ್ ಸೇರಿದಂತೆ ರಾಜ್ಯದ ವಿವಿದೆಢೆಯ ೩೨ ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರತಿಭಾವಂತ ಮಕ್ಕಳಿಗೆ ಶಾಸಕರು ಪ್ರಶಸ್ತಿ ಪ್ರಧಾನ ಮಾಡಿದರು.

  ಮಂಗಳೂರು ಇನ್ವೆಂಜರ್ ಫೌಂಡೇಶನ್ ಅಧ್ಯಕ್ಷ ಕೆ. ಸತ್ಯೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು.

 ಉಡುಪಿ ತುಳುಕೂಟದ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಉಡುಪಿಯ ಉದ್ಯಮಿ ಮಹಮ್ಮದ್ ಮೌಲಾ, ಕಟಪಾಡಿಯ ಸಮಾಜ ಸೇವಕರಾದ ಶೇಖರ್ ಅಮೀನ್ ಕೋಟೆ ಮುಖ್ಯಅತಿಥಿಗಳಾಗಿದ್ದರು.

  ಕಟಪಾಡಿ ಸೃಷ್ಠಿ ಫೌಂಡೇಶನ್ ಟ್ರಸ್ಟಿ ಪ್ರೀತಿ ಪ್ರಕಾಶ ಸುವರ್ಣ ಕಟಪಾಡಿ,  ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಕಾರ್ಯದರ್ಶಿ ಸುಜಾತ ನಾಗೇಶ್ ಕಾಮತ್ ಕಟಪಾಡಿ ಉಪಸ್ಥಿತರಿದ್ದರು.

ಇದೇಸಂದರ್ಭ ಹಿರಿಯ ವೈದ್ಯರಾದ ಡಾ. ಎ. ರವೀಂದ್ರನಾಥ ಶೆಟ್ಟಿ, ಸಮಾಜಸೇವಕ ಶಿವಾನಂದ ಕೋಟ್ಯಾನ್ ಮಸ್ಕತ್, ಫ್ಯಾಶನ್ ತಾರೆ ವಿದ್ಯಾ ಸರಸ್ವತಿ ಉಡುಪಿ, ಯೋಗ ಶಿಕ್ಷಕ ರಾಜೇಶ್ ಕಾಮತ್ ಕಟಪಾಡಿ, ಕಟಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾ ಬಿ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ಪ್ರಶಸ್ತಿ ವಿಜೇತ ಮಕ್ಕಳಿಂದ ಪ್ರತಿಭಾ ಪ್ರದರ್ಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಸಿ ಮೀನುಗಾರರ ಸಂಘ ಉಡುಪಿ ಪ್ರಾಯೋಜಿತ ಪ್ರಕಾಶ ಸುವರ್ಣ ಕಟಪಾಡಿ ಮತ್ತು ಬಳಗದವರಿಂದ ಸುಗಮ ಸಂಗೀತ ರಸಮಂಜರಿ, ಯಶಸ್ ಪಿ ಸುವರ್ಣ ಕಟಪಾಡಿ ಮತ್ತು ಬಳಗದವರಿಂದ ಕೊಳಲು ಪ್ಯೂಷನ್ ಹಾಗೂ ಪ್ರಥಮ್ ಕಾಮತ್ ಕಟಪಾಡಿ ಅವರಿಂದ ಜಾದೂ ಪ್ರದರ್ಶನ ನಡೆಯಿತು.

 ಕಟಪಾಡಿ ತ್ರಿಶಾ ವಿದ್ಯಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ವೈವಿಧ್ಯ ಕಾರ್ಯಕ್ರಮ ಹಾಗೂ ಪತ್ರಕರ್ತ ಡಾ. ಶೇಖರ್ ಅಜೆಕಾರ್ ಹಾಗೂ ಸಮಾಜರತ್ನ ಕಾಪು ಲೀಲಾಧರ್ ಶೆಟ್ಟಿ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು.

ಕಟಪಾಡಿ ಸೃಷ್ಠಿ ಫೌಂಡೇಶನ್ ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿದರು.

 ಹಿರಿಯ ಸಾಹಿತಿ ದಯಾನಂದ ಕೆ.ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕಿ ಸಂಗೀತಾ ಕೋಟ್ಯಾನ್ ನಿರೂಪಿಸಿದರು.  ಕಟಪಾಡಿ ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ನ ನಾಗೇಶ್ ಕಾಮತ್ ಕಟಪಾಡಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.