ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕಾಪುವಿನಲ್ಲಿ ತಾಪಂ ಸದಸ್ಯರಾಗಿದ್ದ ಇಗ್ನೇಷಿಯಸ್ ಡಿಸೋಜಾ, ಶಬ್ಬೀರ್ ಅಹ್ಮದ್, ಕೆ ಲೀಲಾಧರ ಶೆಟ್ಟಿಯವರಿಗೆ ಶ್ರದ್ಧಾಂಜಲಿ
ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕಾಪುವಿನ ರಾಜೀವ ಭವನದಲ್ಲಿ ಇತ್ತೀಚೆಗೆ ಮೃತಪಟ್ಟ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ದಿ. ಇಗ್ನೇಷಿಯಸ್ ಡಿಸೋಜ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆಗೈದು ವಿಧಿವಶರಾದ ಪಡುಬಿದ್ರಿಯ ಶಬ್ಬೀರ್ ಹುಸೇನ್ ಮತ್ತು ರಂಗಭೂಮಿ, ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಗೈಯುವ ಮೂಲಕ ಪ್ರಖ್ಯಾತರಾಗಿದ್ದ,ಕಾಪು ತಾಲೂಕು ರಚನಾ ಹೋರಾಟ ಸಮಿತಿಯ ಸಂಚಾಲಕರಾಗಿದ್ದ ಸಮಾಜ ಸೇವಕ ಕೆ. ಲೀಲಾಧರ್ ಶೆಟ್ಟಿ ಯವರಿಗೆ ಶ್ರದ್ಧಾಂಜಲಿ ಅರ್ಪಿಸಿ, ನುಡಿ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ (EX Minister Vinayakumar Sorake), ಮಾಜಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ (EX MLC Ivan Desouz’a), ಕೆ. ಪಿ. ಸಿ. ಸಿ ಯ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ (KPCC Secretary MA Gafoor) , ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ , ಶಿವಾಜಿ ಸುವರ್ಣ ಬೆಳ್ಳೆ, ವಿಕ್ರಮ್ ಕಾಪು, ವಿನಯ್ ಬಲ್ಲಾಳ್, ಗೀತಾ ವಾಗ್ಲೇ, ಶಾಂತಲತಾ ಶೆಟ್ಟಿ, ಸರಸು ಡಿ. ಬಂಗೇರ, ದೀಪಕ್ ಎರ್ಮಾಳ್, ಮೊಹಮ್ಮದ್ ಸಾದಿಕ್, ಪ್ರಶಾಂತ್ ಜತ್ತನ್ನ, ಶರ್ಫುದ್ದೀನ್ ಶೇಖ್, ಸುಮನ್ ಬೋಳಾರ್, ದಯಾನಂದ್ ಬಂಗೇರ, ಪ್ರಭಾ ಬಿ. ಶೆಟ್ಟಿ, ಪ್ರಮೀಳಾ ಜತ್ತನ್ನ , ಪ್ರಶಾಂತ್ ಸಾಲಿಯಾನ್ ಕುರ್ಕಾಲ್, ವಿಲ್ಸನ್ ರಾಡ್ರಿಗಸ್, ಮೇಲ್ವಿನ್ ಡಿಸೋಜ, ಸುಜಾತ ಪೂಜಾರಿ, ಯು.ಸಿ. ಶೇಖಬ್ಬ, ರತನ್ ಶೆಟ್ಟಿ, ಮೊಹಮ್ಮದ್ ನಯೀಮ್, ರಂಜನಿ ಹೆಗ್ಡೆ, ಕೆ. ಎಚ್. ಉಸ್ಮಾನ್, ಹಸನಬ್ಬ ಶೇಖ್, ಶೋಭಾ ಬಂಗೇರ, ಸತೀಶ್ ಚಂದ್ರ ಮೂಳೂರ್, ರಾಧಿಕಾ ಸುವರ್ಣ, ಆಸಿಫ್ ಮೂಳೂರು, ಪ್ರಭಾಕರ್ ಕೈಪುಂಜಾಲ್, ರಾಜೇಶ್ ಶೆಟ್ಟಿ ಪಾಂಗಳ, ಎಚ್.ಅಬ್ದುಲ್ಲಾ, ಇಮ್ರಾನ್ ಮಜೂರು, ಕೇಶವ್ ಸಾಲ್ಯಾನ್, ಜ್ಯೋತಿ ಮೆನನ್, ಆಶಾ ಕಟಪಾಡಿ, ಸುಚರಿತ ಲಕ್ಷ್ಮಣ್, ರೀನಾ ಡಿಸೋಜ, ಪ್ರಭಾಕರ್ ಪಾಲನ್, ಪ್ರಕಾಶ್ ಮಾಬಿಯಾನ್, ಜೇಬಾ ಸೆಲ್ವನ್, ತಸ್ನಿನ್ ಅರಃ, ಮುಬಿನ ಲಿಯಖತ್, ಶೇಖರ್ ಸಾಲಿಯಾನ್, ಸುಶೀಲ್ ಬೋಳಾರ್, ನಾಗಭೂಷಣ್ ರಾವ್, ದೇವರಾಜ್ ಕೋಟ್ಯಾನ್, ಖಲಂದರ್ ಶಾಫಿ, ನಿಜಾಮುದ್ದೀನ್, ಬಾಲಕೃಷ್ಣ ಕೋಟ್ಯಾನ್, ಸತೀಶ್ ದೇಜಾಡಿ, ಅಶೋಕ್ ನಾಯರಿ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬ್ಲಾಕ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ದಿನೇಶ್ ಕೋಟ್ಯಾನ್ ಪಲಿಮಾರ್ ವಂದಿಸಿದರು.

