ಕಟಪಾಡಿ : ಅಂಡರ್ ಪಾಸ್ ಕಾಮಗಾರಿ ಬಳಿ ಮೀನಿನ ಲಾರಿ ಪಲ್ಟಿ
ಘಟನೆಯಲ್ಲಿ ಲಾರಿ ಮುಂಭಾಗ ಜಖಂಗೊಂಡಿದ್ದು, ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ
(Katapadi) ಕಟಪಾಡಿ: ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಮೀನಿನ ಲಾರಿಯೊಂದು ಪಲ್ಟಿಯಾದ ಘಟನೆ ಕಟಪಾಡಿಯ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಘಟಿಸಿದೆ.
ಉಡುಪಿ ಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಲಾರಿ ಕಾಮಗಾರಿ ಪ್ರದೇಶದಲ್ಲಿನ ಸೂಚನಾ ಫಲಕ ಗಮನಿಸದೇ ಪರ್ಯಾಯ ರಸ್ತೆ ಬಿಟ್ಟು ನೇರವಾಗಿ ಕಾಮಗಾರಿ ಪ್ರದೇಶಕ್ಕೆ ನುಗ್ಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಿಂದ ಲಾರಿ ಮುಂಭಾಗ ಜಖಂಗೊಂಡಿದ್ದು, ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಕಾಪು ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
೦೦೦೦೦೦

