ಕಟಪಾಡಿ ಇಂಟ್ರಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ
(kATAPADI) ಕಟಪಾಡಿ: ಕಟಪಾಡಿ ಎಸ್ ವಿ ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಇನ್ಟ್ರಾಕ್ಟ್ ಕ್ಲಬ್ಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜರಗಿತು.
ಕಟಪಾಡಿ ರೋಟರಿ ಕ್ಲಬ್ ಅಧ್ಯಕ್ಷ ರಾದ ರೊ. ಸುನಿಲ್ ಡಿ ಬಂಗೇರ ಇವರು ನೂತನ ಅಧ್ಯಕ್ಷ ಮನೀಶ್ ಇವರಿಗೆ ಪದಪ್ರಧಾನ ಮಾಡಿದರು.
ಜಿಲ್ಲಾ ಸಹಾಯಕ ಗವರ್ನರ್ ಜಗನ್ನಾಥ ಕೋಟೆಯವರು ಇಂಟ್ರಾಕ್ಟ್ ಕ್ಲಬ್ಬಿನ ಮಹತ್ವವನ್ನು, ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಇವರು ಸತತವಾಗಿ ಇಂಟ್ರಾಕ್ಟ್ ಕ್ಲಬ್ಬಿಗೆ ನೀಡುತ್ತಿರುವ ಮಾರ್ಗದರ್ಶನ ಮತ್ತು ರೋಟರಿ ಸೇವೆಯನ್ನ ಗುರುತಿಸಿ ಸನ್ಮಾನಿಸಿದರು.
ನಿಕಟ ಪೂರ್ವ ಅಧ್ಯಕ್ಷ ರೊ. ರಿತೇಶ್ ಬಿ ಕೋಟಿಯಾನ್‌ರವರು ಸಮಯೋಚಿತವಾಗಿ ಮಾತನಾಡಿದರು.
ಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ತಂತ್ರಿಯವರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಇಂಟ್ರಾಕ್ಟ್ ಸಭಾಪತಿ ರೊ. ನಾಗರಾಜ್, ಮಾಜಿ ವಲಯ ಸೇನಾನಿ ಗಣೇಶ್ ಕಿಣಿ, ರೊ. ಶ್ರೀಕರನ್ ಅಂಚನ್, ರೊ. ಶಕುಂತಲಾ ಎ .ಪೂಜಾರಿ, ಕಾರ್ಯದರ್ಶಿ ಲಕ್ಷ್ಮಿ ಬಿ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕರಾದ ವಿದ್ಯಾ, ಜಯ ಲಕ್ಷ್ಮಿ ವಿಜಯಲಕ್ಷ್ಮಿ, ನಾಗೇಶ್, ಸಂತೋಷ್ ಸರ್ ಉಪಸ್ಥಿತರಿದ್ದರು.
ಇಂಟ್ರಾಕ್ಟ್ ಶಿಕ್ಷಕ ಸಂಯೋಜಕರಾದ ಕಿರಣ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ನೂತನ ತಂಡಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನಾನಾ ಸಾಹೇಬ ಪ್ರತಿಷ್ಠಾನದ ಸದಸ್ಯ ಸಂತೋಷ್ ಶೆಟ್ಟಿಗಾರ್ ಶ್ರೀ ಕೃಪ ಸ್ಟುಡಿಯೋ ಕಟಪಾಡಿ ಇವರಿಂದ ಪಡೆದ ಸುಮಾರು 50 ಹಣ್ಣಿನ ಗಿಡಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಮನೀಶ್ ಸ್ವಾಗತಿಸಿದರು. ಕಾಜಲ್ ಕಾರ್ಯಕ್ರಮ ನಿರೂಪಿಸಿದರು. ಕವನ ಧನ್ಯವಾದ ಸಮರ್ಪಿಸಿದರು.

