• Home  
  • ಕಟಪಾಡಿ ಚರ್ಚಿನಲ್ಲಿ ಧರ್ಮಪ್ರಾಂತ್ಯ ಮಟ್ಟದ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟ
- ಕರಾವಳಿ

ಕಟಪಾಡಿ ಚರ್ಚಿನಲ್ಲಿ ಧರ್ಮಪ್ರಾಂತ್ಯ ಮಟ್ಟದ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟ

Share: ಕಟಪಾಡಿ ಚರ್ಚಿನಲ್ಲಿ ಧರ್ಮಪ್ರಾಂತ್ಯ ಮಟ್ಟದ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟ  ಉಡುಪಿ: ಕ್ರೀಡೆ ನಮ್ಮ ಜೀವನದ ಪ್ರಮುಖ ಭಾಗವಾಗಿದ್ದು ಪ್ರತಿಯೊಬ್ಬರೂ ಕೂಡ ಕ್ರೀಡಾ ಮನೋಭಾವ ಬೆಳಿಸಿಕೊಳ್ಳಬೇಕು ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಕುಲಪತಿ ವಂ.ಡಾ. ರೋಶನ್ ಡಿ’ಸೋಜಾ ಹೇಳಿದರು. ಅವರು ಭಾನುವಾರ ಕಟಪಾಡಿ ಎಸ್ ವಿಎಸ್ ಪಳ್ಳಿಗುಡ್ಡೆ ಮೈದಾನದಲ್ಲಿ ಸಂತ ವಿನ್ಸೆಂಟ್ ಡಿ ಪಾವ್ಲ್ ಚರ್ಚ್ ಕಟಪಾಡಿ ಇದರ ಅಮೃತ ಮಹೋತ್ಸವದ ಪ್ರಯುಕ್ತ ಉಡುಪಿ ಧರ್ಮಪ್ರಾಂತ್ಯದ ವಿವಿಧ  ಧರ್ಮಕೇಂದ್ರಗಳ ಮಧ್ಯೆ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟದ […]

ಕಟಪಾಡಿ ಚರ್ಚಿನಲ್ಲಿ ಧರ್ಮಪ್ರಾಂತ್ಯ ಮಟ್ಟದ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟ

 ಉಡುಪಿ: ಕ್ರೀಡೆ ನಮ್ಮ ಜೀವನದ ಪ್ರಮುಖ ಭಾಗವಾಗಿದ್ದು ಪ್ರತಿಯೊಬ್ಬರೂ ಕೂಡ ಕ್ರೀಡಾ ಮನೋಭಾವ ಬೆಳಿಸಿಕೊಳ್ಳಬೇಕು ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಕುಲಪತಿ ವಂ.ಡಾ. ರೋಶನ್ ಡಿ’ಸೋಜಾ ಹೇಳಿದರು.

ಅವರು ಭಾನುವಾರ ಕಟಪಾಡಿ ಎಸ್ ವಿಎಸ್ ಪಳ್ಳಿಗುಡ್ಡೆ ಮೈದಾನದಲ್ಲಿ ಸಂತ ವಿನ್ಸೆಂಟ್ ಡಿ ಪಾವ್ಲ್ ಚರ್ಚ್ ಕಟಪಾಡಿ ಇದರ ಅಮೃತ ಮಹೋತ್ಸವದ ಪ್ರಯುಕ್ತ ಉಡುಪಿ ಧರ್ಮಪ್ರಾಂತ್ಯದ ವಿವಿಧ  ಧರ್ಮಕೇಂದ್ರಗಳ ಮಧ್ಯೆ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕ್ರೀಡೆಗಳು ದೈಹಿಕ ಮತ್ತು ಮಾನಸಿಕವಾಗಿ ನಮ್ಮ ಅಭಿವೃದ್ಧಿ ಮೂಲವಾಗಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಎರಡನ್ನೂ ಕೂಡ ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜೆಸಿಐ ಕಟಪಾಡಿ ಇದರ ಅಧ್ಯಕ್ಷರಾದ ಜ್ಯೋತಿ ಶಂಕರ್ ಕ್ರೀಡಾಕೂಟಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರುಗಳಾದ ವಂ. ರಾಜೇಶ್ ಪಸನ್ನ, ಜೆಸಿಐ ಕಟಪಾಡಿ ಇದರ ಅಧ್ಯಕ್ಷರಾದ ಜ್ಯೋತಿ ಶಂಕರ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಬ್ರಾಯನ್ ಕೊರೆಯಾ, ಕಾರ್ಯದರ್ಶಿ ತೆರೆಸಾ ಲೋಬೊ, 20 ಆಯೋಗಗಳ ಸಂಯೋಜಕರಾದ ಲೂಯಿಸ್ ಡಿಸಿಲ್ವಾ, ಪಂದ್ಯಾಟದ ಸಂಚಾಲಕ ಕಿರಣ್ ಲೂವಿಸ್  ಉಪಸ್ಥೀತರಿದ್ದರು.

ಕಾರ್ಯದರ್ಶಿ ತೆರೆಸಾ ಲೋಬೊ ಸ್ವಾಗತಿಸಿ, ಜಾನೆಟ್ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

ಪಂದ್ಯಾಟದ ತೀರ್ಪುಗಾರರಾಗಿ   ಪ್ರಶಾಂತ್, ವಿನಯ್ ಶೇಟ್, ಸ್ಟೀವನ್ ಪಿಂಟೊ ಸಹಕರಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.