• Home  
  • ಕಟಪಾಡಿ ಪರಿಸರದಲ್ಲಿ ಮೊಬೈಲ್ ನೆಟ್‌ವರ್ಕ್‌ ಕಡಿತ, ತೀವ್ರ ಅಡಚಣೆ (Mobile Network problem at Katapadi)
- PROBLEMS

ಕಟಪಾಡಿ ಪರಿಸರದಲ್ಲಿ ಮೊಬೈಲ್ ನೆಟ್‌ವರ್ಕ್‌ ಕಡಿತ, ತೀವ್ರ ಅಡಚಣೆ (Mobile Network problem at Katapadi)

Share: ಕಟಪಾಡಿ ಪರಿಸರದಲ್ಲಿ ಮೊಬೈಲ್ ನೆಟ್‌ವರ್ಕ್‌ ಕಡಿತ, ತೀವ್ರ ಅಡಚಣೆ  (Katapadi) ಕಟಪಾಡಿ: ಕಟಪಾಡಿ ಪೇಟೆಯ ಸುತ್ತಮುತ್ತಲಿನ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಉಂಟಾಗಿದ್ದು, ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಬಳಕೆದಾರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.  ಮೊಬೈಲ್ ಕಂಪನಿ ಹಾಗೂ ಟವರ್ ಅಳವಡಿಸಲಾಗಿರುವ ಜಾಗದ ಮಾಲೀಕರ ನಡುವಿನ ಒಪ್ಪಂದ ಮುಗಿದ ಹಿನ್ನೆಲೆಯಲ್ಲಿ ಏರ್‌ಟೆಲ್, ವಿಐ ಮತ್ತು ಜಿಯೋ ಬಳಕೆದಾರರಿಗೆ ನೆಟ್ ವರ್ಕ್ ಸಿಗದಂತಾಗಿದೆ. ಫೋನ್ ಕರೆ ಮಾಡಲು, ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. […]

ಕಟಪಾಡಿ ಪರಿಸರದಲ್ಲಿ ಮೊಬೈಲ್ ನೆಟ್‌ವರ್ಕ್‌ ಕಡಿತ, ತೀವ್ರ ಅಡಚಣೆ

 (Katapadi) ಕಟಪಾಡಿ: ಕಟಪಾಡಿ ಪೇಟೆಯ ಸುತ್ತಮುತ್ತಲಿನ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಉಂಟಾಗಿದ್ದು, ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಬಳಕೆದಾರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

 ಮೊಬೈಲ್ ಕಂಪನಿ ಹಾಗೂ ಟವರ್ ಅಳವಡಿಸಲಾಗಿರುವ ಜಾಗದ ಮಾಲೀಕರ ನಡುವಿನ ಒಪ್ಪಂದ ಮುಗಿದ ಹಿನ್ನೆಲೆಯಲ್ಲಿ ಏರ್‌ಟೆಲ್, ವಿಐ ಮತ್ತು ಜಿಯೋ ಬಳಕೆದಾರರಿಗೆ ನೆಟ್ ವರ್ಕ್ ಸಿಗದಂತಾಗಿದೆ.

ಫೋನ್ ಕರೆ ಮಾಡಲು, ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಆನ್‌ಲೈನ್ ಹಣಕಾಸಿನ ವ್ಯವಹಾರ, ವರ್ಕ್ ಫ್ರಮ್ ಹೋಮ್, ಕಚೇರಿಯ ದೈನಂದಿನ ಕೆಲಸ ನಿರ್ವಹಿಸಲು ಕಷ್ಟಪಡುತ್ತಿದ್ದರೂ, ಜನರ ಗೋಳು ಕೇಳುವವರೇ ಇಲ್ಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈ ಬಗ್ಗೆ ಮೊಬೈಲ್ ಸೇವೆ ಒದಗಿಸುವ ಕಂಪನಿಗಳು, ಟವರ್ ಲಭ್ಯವಿಲ್ಲದೆ ನಾವೇನೂ ಮಾಡಲಾಗುತ್ತಿಲ್ಲ. ಸಮೀಪದಲ್ಲಿ ಪರ್ಯಾಯ ಜಾಗವೂ ಸಿಗುತ್ತಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ..

ಇಂಡಸ್ ಅಧಿಕಾರಿಗಳು, ‘ಅದು ನಮ್ಮ ಟವರ್ ಅಲ್ಲ, ಎಟಿಸಿ ಅವರ ನಿರ್ವಹಣೆಯ ಟವ‌ರ್. ಅವರೇ ಪರಸ್ಪರ ಮಾತನಾಡಿಕೊಂಡು ಸಮಸ್ಯೆಯನ್ನು ಸರಿದೂಗಿಸಬೇಕು’ ಎನ್ನುತ್ತಾರೆ. ಸ್ಥಳೀಯವಾಗಿ ಯಾರಾದರೂ 3 ಸೆಂಟ್ಸ್ ಜಾಗ ಕೊಟ್ಟರೆ ಅನುಕೂಲ ಕಲ್ಪಿಸಬಹುದಾಗಿದೆ ಸಂಬಂಧ ಪಟ್ಟವರು ಹೇಳಿದ್ದಾರೆ.  

  ನೆಟ್ ವರ್ಕ್ ಸಿಗದೆ ಹೈರಾಣಾಗಿರುವ ಸ್ಥಳೀಯರು ಮೊಬೈಲ್ ಸೇವೆ ಕಲ್ಪಿಸುವ ಸಂಸ್ಥೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ.  ಜನರಲ್ಲಿ ಕಂಪನಿ ವಿರುದ್ದ ಆಕ್ರೋಶ ಹೆಚ್ಚುತ್ತಿದೆ.  ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.