ಕಟಪಾಡಿ ಪೇಟೆಬೆಟ್ಟು ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಮತ್ತು ಶ್ರೀ ಸ್ವಾಮಿಕೊರಗಜ್ಜ ಸನ್ನಿಧಿಯಲ್ಲಿ 1002 ಶರಾಬು ಬಾಟಲಿ ಹರಕೆ ತೀರಿಸಿದ ಯುವಕ
ಕಟಪಾಡಿ: ಕಟಪಾಡಿ ಪೇಟೆಬೆಟ್ಟುವಿನಲ್ಲಿ ನೆಲೆಯಾಗಿರುವ ಭಗವಾನ್ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಮತ್ತು ಶ್ರೀ ಸ್ವಾಮಿಕೊರಗಜ್ಜ ಸನ್ನಿಧಿ ಈಗ ಅತ್ಯಂತ ಖ್ಯಾತಿ ಪಡೆದ ಕಾರ್ಣಿಕ ಕ್ಷೇತ್ರ.
ಕರಾವಳಿಯು ದೈವರಾಧನೆ ಮತ್ತು ಜನರ ನಂಬಿಕೆ ಮೇಲೆ ನಿಂತಿದೆ. ಭಕ್ತರ ಬೇಡಿಕೆಯನ್ನು ಈಡೇರಿಸಿ ಕಾರ್ಣಿಕ ಮೆರೆಯುತ್ತಿರುವ ತುಳುನಾಡಿನ ಸ್ವಾಮಿ ಕೊರಗಜ್ಜನ ಭಕ್ತರ ಸಂಖ್ಯೆಯಲ್ಲಿಯೂ ಹೆಚ್ಚಾಗುತ್ತಿದೆ.
ಇದರಲ್ಲಿ ಸಮಾಜದ ಗಣ್ಯರು, ಸಿನಿ ತಾರೆಯರೂ ಸೇರಿದ್ದಾರೆ.
ಭಕ್ತರ ನಂಬಿಕೆ ಇಂದಿಗೂ ದೈವಾರಾಧನೆ ಮೇಲೆ ಇದೆ. ಕರಾವಳಿಯನ್ನು ಬಿಟ್ಟು ರಾಜ್ಯದ ಮೂಲೆ ಮೂಲೆಗಳಿಂದ ಸ್ವಾಮಿ ಕೊರಗಜ್ಜರ ಭಕ್ತರು ಇದ್ದಾರೆ.
ಕಟಪಾಡಿ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಮತ್ತು ಶ್ರೀ ಸ್ವಾಮಿಕೊರಗಜ್ಜ ಸನ್ನಿಧಿಯಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಭಕ್ತರೋರ್ವರು ತನ್ನ ಕೆಲಸವನ್ನು ಮಾಢಿಕೊಡುವಂತೆ ಕೊರಗಜ್ಜನಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಕೆಲಸ ಸಂಪೂರ್ಣ ಆದಲ್ಲಿ, 1002 ಮಧ್ಯದ ಬಾಟಲಿಗಳನ್ನು ಹರಕೆ ರೂಪದಲ್ಲಿ ಸಲ್ಲಿಸುತ್ತೇನೆ ಎಂದು ಪ್ರಾರ್ಥನೆ ಮಾಡಿದ್ದರು. ಆ ಕೆಲಸ ಯಶಸ್ವಿ ಆದ ಬಳಿಕ ಆ ಭಕ್ತರು ಕಟಪಾಡಿ ಪೇಟೆಬೆಟ್ಟು ಕೊರಗಜ್ಜನ ಸನ್ನೀಧಿಗೆ ಆಗಮಿಸಿ ಹರಕೆ ತೀರಿಸಿದ್ದಾರೆ.
ತಾನು ಎನಿಸಿದ ಕೆಲಸವನ್ನು ಕ್ಷಣಮಾತ್ರದಲ್ಲಿ ಸ್ವಾಮಿ ಕೊರಗಜ್ಜ ಮಾಡಿಸಿ ಕೊಟ್ಟಿದ್ದಾನೆ ಎಂಬ ನಂಬಿಕೆ ಈ ಭಕ್ತರದು.
ಏನೇ ಆಗಲಿ, ಜನರ ನಂಬಿಕೆಯಿಂದಾಗಿ ದೈವರಾದನೆ ಮತ್ತು ನಾಗರಾಧನೆಗಳು ನಡೆಯುತ್ತಿದೆ. ದೈವ, ದೇವರ ಮೇಲಿನ ಭಕ್ತಿ, ನಂಬಿಕೆ ಮುಂದುವರೆಯಲಿ ಎಂಬ ಆಶಯ.
.
