• Home  
  • ಕಟಪಾಡಿ : ಫುಟ್‌ ಬೋರ್ಡ್‌ನಲ್ಲಿ ನೇತಾಡಿದ ವಿದ್ಯಾರ್ಥಿಗಳು, ಪ್ರಕರಣ ದಾಖಲು (Katapady: Students hang from footboard, case registered)
- ಅಪರಾಧ

ಕಟಪಾಡಿ : ಫುಟ್‌ ಬೋರ್ಡ್‌ನಲ್ಲಿ ನೇತಾಡಿದ ವಿದ್ಯಾರ್ಥಿಗಳು, ಪ್ರಕರಣ ದಾಖಲು (Katapady: Students hang from footboard, case registered)

Share: ಕಟಪಾಡಿ : ಫುಟ್‌ ಬೋರ್ಡ್‌ನಲ್ಲಿ ನೇತಾಡಿದ ವಿದ್ಯಾರ್ಥಿಗಳು, ಪ್ರಕರಣ ದಾಖಲು ಕಾಪು ಠಾಣೆಯಲ್ಲಿ ಬಸ್ಸಿನ ಮಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. (Katapadi) ಕಟಪಾಡಿ: ಮಂಗಳೂರು -ಉಡುಪಿ ಮಧ್ಯೆ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ನಲ್ಲಿ ಕಟಪಾಡಿಯಲ್ಲಿ ವಿದ್ಯಾರ್ಥಿಗಳು ಅಪಾಯವನ್ನು ಲೆಕ್ಕಿಸದೆ ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು  ಪ್ರಯಾಣಿಸುತ್ತಿದ್ದ ಘಟನೆ ಶುಕ್ರವಾರ ಘಟಿಸಿದೆ.   ಕೆಲವು ವಿದ್ಯಾರ್ಥಿಗಳು ಬಸ್‌ನ ಬಾಗಿಲಿನ ಬಳಿ ಫುಟ್‌ಬೋರ್ಡ್‌ನಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿದ್ದರು. ವೇಗವಾಗಿ ಸಂಚರಿಸುತ್ತಿದ್ದ ಬಸ್‌ನಲ್ಲಿ ಈ ರೀತಿಯ ಅಪಾಯಕಾರಿ ಪ್ರಯಾಣವು ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ತಂದೊಡ್ಡುವ […]

(Katapadi) ಕಟಪಾಡಿ: ಮಂಗಳೂರು -ಉಡುಪಿ ಮಧ್ಯೆ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ನಲ್ಲಿ ಕಟಪಾಡಿಯಲ್ಲಿ ವಿದ್ಯಾರ್ಥಿಗಳು ಅಪಾಯವನ್ನು ಲೆಕ್ಕಿಸದೆ ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು  ಪ್ರಯಾಣಿಸುತ್ತಿದ್ದ ಘಟನೆ ಶುಕ್ರವಾರ ಘಟಿಸಿದೆ.

  ಕೆಲವು ವಿದ್ಯಾರ್ಥಿಗಳು ಬಸ್‌ನ ಬಾಗಿಲಿನ ಬಳಿ ಫುಟ್‌ಬೋರ್ಡ್‌ನಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿದ್ದರು. ವೇಗವಾಗಿ ಸಂಚರಿಸುತ್ತಿದ್ದ ಬಸ್‌ನಲ್ಲಿ ಈ ರೀತಿಯ ಅಪಾಯಕಾರಿ ಪ್ರಯಾಣವು ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.

   ಬಸ್‌ನ ಹಿಂದಿನಿಂದ ಸಾಗುತ್ತಿದ್ದ ಕಾರಿನಲ್ಲಿದ್ದವರು ವಿದ್ಯಾರ್ಥಿಗಳು ನೇತಾಡಿಕೊಂಡು ತೆರಳುತ್ತಿದ್ದ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

  ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರು ಫುಟ್‌ಬೋರ್ಡ್‌ನಲ್ಲಿ ಪ್ರಯಾಣಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು.

  ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳು ಇಂತಹ ಘಟನೆಗಳ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

  ನೇತಾಡಿದ ಉಡುಪಿ ಖಾಸಗಿ ಕಾಲೇಜಿನ ವಿದ್ಯಾರ್ಥಿಗೆ ಶಾಲಾ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರತಿನಿತ್ಯ ಇಂತಹ ಸನ್ನಿವೇಶಗಳು ಹಲವು ಬಸ್ ಗಳಲ್ಲಿ ಇದ್ದರೂ ನಿರ್ವಾಹಕರು ಗಮನವಹಿಸಬೇಕಿದೆ.

   ಕಾಪು ಠಾಣೆಯಲ್ಲಿ ಬಸ್ಸು ಮಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.