ಕಟಪಾಡಿ ಮಟ್ಟು ಬೀಚಿನಲ್ಲಿ ಈಜಾಡುತ್ತಿದ್ದ ವೇಳೆ ಓರ್ವ ಬಾಲಕ ಸಮುದ್ರ ಪಾಲು
ಮಧ್ಯಪ್ರದೇಶ ಮೂಲದ ವೀರೂರುಲ್ಕರ್ (18) ಮೃತ ವಿದ್ಯಾರ್ಥಿ
(Kaup) ಕಾಪು : ವಿದ್ಯಾರ್ಥಿಗಳ ಗುಂಪೊಂದು ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಓರ್ವ ಸಮುದ್ರ ಪಾಲಾದ ಘಟನೆ ಕಟಪಾಡಿ ಮಟ್ಟು ಬೀಚ್ ಬಳಿ ಶನಿವಾರ ಮಧ್ಯಾಹ್ನ ಘಟಿಸಿದೆ.
ಮಧ್ಯಪ್ರದೇಶ ಮೂಲದ ವೀರೂರುಲ್ಕರ್ (18) ಮೃತ ವಿದ್ಯಾರ್ಥಿ.
ಸಮುದ್ರದಲ್ಲಿ ಈಜಾಡಲು ಮಣಿಪಾಲದ ಕಾಲೇಜೊಂದರ ವಿದ್ಯಾರ್ಥಿಗಳ ತಂಡವು ಆಗಮಿಸಿತ್ತು. ಸ್ಥಳೀಯರು ಎಚ್ಚರಿಸಿದ್ದರು. ಅಲ್ಲಿಂದ ಈ ಗುಂಪು ಬೇರೆ ಸ್ಥಳದಲ್ಲಿ ಈಜಾಡುತ್ತಿದ್ದರು. ಆ ಸಂದರ್ಭ ಈ ದುರ್ಘಟನೆ ನಡೆದಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿ ಉಳಿದವರನ್ನು ರಕ್ಷಿಸಿದ್ದಾರೆ.
ಕಾಪು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

