• Home  
  • ಮನಸ್ವಿನಿ ಸಂಜೀವಿನಿ ಬಳಂಜ ಇದರ ವಾರ್ಷಿಕ ಮಹಾಸಭೆ (Manaswini Sanjeevini Balanja’s annual general meeting)
- ಸಂಘ, ಸಂಸ್ಥೆಗಳು

ಮನಸ್ವಿನಿ ಸಂಜೀವಿನಿ ಬಳಂಜ ಇದರ ವಾರ್ಷಿಕ ಮಹಾಸಭೆ (Manaswini Sanjeevini Balanja’s annual general meeting)

Share:    ಮನಸ್ವಿನಿ ಸಂಜೀವಿನಿ ಬಳಂಜ ಇದರ ವಾರ್ಷಿಕ ಮಹಾಸಭೆ ಶ್ರೀಮತಿ ಶ್ರೀ ದೇವಿ ರವರು  ಮಹಾಸಭೆ ಯನ್ನು ಉದ್ಘಾಟಿಸಿದರು.   (Belthangadi) ಬೆಳ್ತಂಗಡಿ : ಮನಸ್ವಿನಿ ಸಂಜೀವಿನಿ ಒಕ್ಕೂಟ ಬಳಂಜ ಗ್ರಾಮ ಪಂಚಾಯತ್ ಮಟ್ಟದ  ಇದರ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಲತಾರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.    ಸ್ವಚ್ಛ ವಾಹಿನಿಯ ಚಾಲಕಿ, ನವಶಕ್ತಿ ಸಂಘದ ಸದಸ್ಯೆ ಶ್ರೀಮತಿ ಭಾರತಿಯವರ  ಪ್ರಾರ್ಥನೆಯೊಂದಿಗೆ ಸಭೆ  ಆರಂಭಿ ಸಲಾಯಿತು. ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶ್ರೀ ದೇವಿ […]

  (Belthangadi) ಬೆಳ್ತಂಗಡಿ : ಮನಸ್ವಿನಿ ಸಂಜೀವಿನಿ ಒಕ್ಕೂಟ ಬಳಂಜ ಗ್ರಾಮ ಪಂಚಾಯತ್ ಮಟ್ಟದ  ಇದರ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಲತಾರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

   ಸ್ವಚ್ಛ ವಾಹಿನಿಯ ಚಾಲಕಿ, ನವಶಕ್ತಿ ಸಂಘದ ಸದಸ್ಯೆ ಶ್ರೀಮತಿ ಭಾರತಿಯವರ  ಪ್ರಾರ್ಥನೆಯೊಂದಿಗೆ ಸಭೆ  ಆರಂಭಿ ಸಲಾಯಿತು.

ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶ್ರೀ ದೇವಿ ರವರು  ಮಹಾಸಭೆ ಯನ್ನು ಉದ್ಘಾಟಿಸಿದರು.

    ವಲಯ ಮೇಲ್ವಿಚಾರಕ ರಾದ ಸ್ವಸ್ತಿಕ್ ಜೈನ್‌ರವರು   ಪ್ರಾಸ್ತಾವಿಕವಾಗಿ ಮಾತನಾಡಿ, ಸಂಜೀವಿನಿಯ ಧ್ಯೇಯೋದ್ದೇಶ ಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ  ನೀಡಿದರು.

   ವಿಮಲಾರವರು ಒಕ್ಕೂಟದ ವಾರ್ಷಿಕ ವರದಿ ಮಂಡಿಸಿದರು.

   ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಭಾರತಿಯವರು ಶಾಸನ ಬದ್ಧ ಲೆಕ್ಕ ಪರಿಶೋಧನೆಯ ವರದಿ ಮಂಡಿಸಿದರು.

   ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿಯವರು ಸ್ವಚ್ಚತೆ ಬಗ್ಗೆ, ಘಟಕದ ಬಗ್ಗೆ, ಮಾಹಿತಿ  ನೀಡಿದರು.

     BRP-PRI ಶ್ರೀಕಲಾ ಮೇಡಂ ರವರು VPRP concept seeding ಬಗ್ಗೆ ಮಾಹಿತಿ ನೀಡಿದರು.

   ಒಕ್ಕೂಟದ ನೂತನ ಪದಾಧಿಕಾರಿಗಳ  ಆಯ್ಕೆ ಪ್ರಕ್ರಿಯೆ ಯನ್ನು ನಡೆಸಲಾಯಿತು.  ಪುಷ್ಪ ಗುಚ್ಛ ನೀಡಿ ದಾಖಲಾತಿಗಳನ್ನು ವರ್ಗಾಯಿಸುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು.

  ನಿರ್ಗಮಿತ ಸದಸ್ಯರನ್ನು ಗೌರವಿಸಲಾಯಿತು.

    ಒಕ್ಕೂಟದ ಪ್ರಗತಿಗೆ ಸೂಕ್ತವಾದ ಮಾರ್ಗದರ್ಶನ ನೀಡುವ ಮೂಲಕ ಸಂಜೀವಿನಿ ಸಿಬ್ಬಂದಿಗಳಿಗೆ ಬೆನ್ನೆಲುಬಾಗಿ ನಿಂತ ವಲಯ ಮೇಲ್ವಿಚಾರಕರಾದ  ಸ್ವಸ್ತಿಕ್ ಜೈನ್ ಹಾಗೂ BRP-PRI ಶ್ರೀಕಲಾರವರನ್ನು ಗೌರವಿಸಲಾಯಿತು.

    ವಲಯ ಮೇಲ್ವಿಚಾರಕರು “ವ್ಯಸನ ಮುಕ್ತ ಕರ್ನಾಟಕ” ದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

   ಧ್ಯೇಯ ಗೀತೆಯನ್ನು ಹಾಡುವುದರ ಮೂಲಕ ಸಭೆಯ ಮೆರುಗು ಇನ್ನಷ್ಟು ಹೆಚ್ಚಿಸಿತ್ತು. “ಸ್ವಚ್ಛತಾ ಹೀ ಸೇವಾ” ಕಾರ್ಯಕ್ರಮದಡಿ ಪ್ರತಿಜ್ಞಾವಿಧಿ ಯನ್ನು ಕೈಗೊಳ್ಳಲಾಯಿತು.

  ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

   ಸಂಜೀವಿನಿ ಸಿಬ್ಬಂದಿಗಳು ಹಾಜರಿದ್ದು,  ಸರ್ವ ರೀತಿಯಲ್ಲೂ ಸಹಕರಿಸಿದರು.

ಒಕ್ಕೂಟದ ಸದಸ್ಯೆ ಶ್ರೀಮತಿ ಅಶ್ವಿನಿಯವರು  ಸ್ವಾಗತಿಸಿದರು. ಒಕ್ಕೂಟದ ಸದಸ್ಯೆ ಶ್ರೀದೇವಿಯವರು ಕಾರ್ಯಕ್ರಮ ನಿರೂಪಿಸಿದರು. LCRP ಬೇಬಿಯವರು ಧನ್ಯವಾದ ಸಮರ್ಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.